ಭಾರತ ಮಹಿಳಾ ಕ್ರಿಕೆಟ್ ತಂಡದ ತಾರೆ ಸ್ಮೃತಿ ಮಂಧಾನ ಅವರ ಮದುವೆ ವಿಚಾರ ಈಗ ಪ್ರತೀ ದಿನ ಹೊಸ ತಿರುವು ಪಡೆಯುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಕೆಲವು ಪೋಸ್ಟ್‌ಗಳು, ಪಲಾಶ್ ಮುಚ್ಚಲ್ ಬೇರೆೊಬ್ಬ ಮಹಿಳೆಯ ಜೊತೆ ಚಾಟ್ ಮಾಡಿದ್ದರು ಎಂಬ ಅನುಮಾನಕ್ಕೆ ಕಾರಣವಾಗಿವೆ.
ಭಾನುವಾರ ಮದುವೆ ನಡೆಯಬೇಕಿತ್ತು, ಆದರೆ ಸ್ಮೃತಿಯ ತಂದೆ ಶ್ರೀನಿವಾಸ್ ಮಂಧಾನ ಅವರಿಗೆ ಹೃದಯಾಘಾತದ ಲಕ್ಷಣ ಕಂಡುಬಂದಿದ್ದರಿಂದ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು ಎಂಬ ವರದಿ ಹೊರಬಂದಿತ್ತು. ಅದಾದ ಕೆಲವೇ ಹೊತ್ತಿನಲ್ಲೇ ಪಲಾಶ್ ಕೂಡಾ ಅಸ್ವಸ್ಥರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿಯೂ ಅರಳಿ ಬಂದಿದೆ.
ಈ ಎಲ್ಲಾ ಘಟನೆಗಳ ನಡುವೆಯೇ ಸ್ಮೃತಿ ತಮ್ಮ ಇನ್‌ಸ್ಟಾಗ್ರಾಂನಲ್ಲಿದ್ದ ಮದುವೆ ಸಂಬಂಧಿತ ಎಲ್ಲಾ ಪೋಸ್ಟ್‌ಗಳನ್ನು ತೆಗೆಯುವುದರಿಂದ ಮದುವೆ ಬಗ್ಗೆ ಇನ್ನಷ್ಟು ಶಂಕೆ ಮೂಡಿತ್ತು. ಇದೇ ಸಂದರ್ಭದಲ್ಲಿ, ಪಲಾಶ್ ಅವರ ಸಹೋದರಿ ಗಾಯಕಿ ಪಾಲಕ್, ಸ್ಮೃತಿ ತಂದೆಯ ಅನಾರೋಗ್ಯವೇ ಮದುವೆ ಮುಂದೂಡುವ ಕಾರಣ ಎಂದು ಸ್ಪಷ್ಟನೆ ನೀಡಿದ್ದಾರೆ.
ಆದರೆ ಇಂದು ಮತ್ತೊಂದು ತೀವ್ರವಾದ ಪೋಸ್ಟ್ ವೈರಲ್ ಆಗುತ್ತಿದೆ ಪಲಾಶ್ ಇನ್ನೊಬ್ಬ ಮಹಿಳೆಯೊಂದಿಗೆ ನಡೆಸಿದರೆಂದು ಹೇಳಲಾಗಿರುವ ಚಾಟ್ ಸ್ಕ್ರೀನ್‌ಶಾಟ್‌ಗಳು. ಮೇರಿ ಡಿ ಕೋಸ್ತಾ ಎಂಬ ಯುವತಿ, ತಾನು ಪಲಾಶ್ ಜೊತೆ ನಡೆಸಿದ್ದೇನೆ ಎನ್ನುವ ಚಾಟ್‌ಗಳನ್ನೊಳಗೊಂಡ ಸ್ಕ್ರೀನ್‌ಶಾಟ್‌ಗಳನ್ನು ತನ್ನ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾಳೆ.
ಆ ಪೋಸ್ಟ್‌ಗಳಲ್ಲಿ ಪಲಾಶ್ ಬೀಚ್ ಅಥವಾ ಪೂಲ್‌ಗೆ ಬರೋಣ ಎಂದು ಡೇಟಿಂಗ್‌ಗೆ ಆಹ್ವಾನಿಸಿದಂತ ಸಂದೇಶಗಳು ಕಾಣುತ್ತಿವೆ. ಇದರಿಂದ ಸ್ಮೃತಿಯೊಂದಿಗೆ ಸಂಬಂಧದಲ್ಲಿದ್ದ ಸಮಯದಲ್ಲೇ ಪಲಾಶ್ ಮೋಸ ಮಾಡಿದ್ದಾರಾ ಎಂಬ ಚರ್ಚೆ ಮತ್ತೆ ಉದ್ಭವಿಸಿದೆ. ಈ ಸ್ಕ್ರೀನ್‌ಶಾಟ್‌ಗಳ ನಿಜಾಸತ್ಯತೆ ಇನ್ನೂ ದೃಢಪಡಿಸಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಗದ್ದಲವಾಗಿದ್ದು, ಅಭಿಮಾನಿಗಳು ಪಲಾಶ್ ನಿಜವಾಗಿಯೂ ಸ್ಮೃತಿಗೆ ದ್ರೋಹ ಮಾಡಿದ್ದಾರಾ ಎಂದು ಪ್ರಶ್ನಿಸುತ್ತಿದ್ದಾರೆ.
ಇನ್ನೊಂದು ದಿಕ್ಕಿನಲ್ಲಿ, ಮದುವೆ ಬಗ್ಗೆಯೂ ಹಲವು ಊಹಾಪೋಹಗಳು ಕೇಳಿಬರುತ್ತಿವೆ. ಮದುವೆಯ ಮುನ್ನೇ ಪಲಾಶ್ ಒಂದು ಕೊರಿಯೋಗ್ರಾಫರ್ ಜೊತೆ ಅನೈತಿಕ ವರ್ತನೆ ಮಾಡಿದ್ದಾರೆ, ಅದನ್ನೇ ಸ್ಮೃತಿ ಸ್ವತಃ ನೋಡಿದ್ದು, ಅದಕ್ಕಾಗಿ ಮದುವೆಯನ್ನು ರದ್ದುಪಡಿಸಲಾಗಿದೆ ಎಂಬ ವಿಡಿಯೋಗಳು ಈಗ ವೈರಲ್ ಆಗುತ್ತಿವೆ. ಈ ಘಟನೆ ಬಗ್ಗೆ ಮರೆಮಾಚಲು ತಂದೆಯ ಅನಾರೋಗ್ಯದ ಕಾರಣವನ್ನು ಹೇಳಲಾಗಿದೆ ಎನ್ನುವ ಮಾತುಗಳೂ ಹರಿದಾಡುತ್ತಿವೆ. ಈ ಎಲ್ಲಾ ಆರೋಪಗಳ ಬಗ್ಗೆ ಸ್ಮೃತಿ ಮಂಧಾನ ಅಥವಾ ಪಲಾಶ್ ಮುಚ್ಚಲ್ ಇಬ್ಬರೂ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.






