ರಾಜ್ಯವನ್ನೇ ಬೆಚ್ಚಿ ಬೀಳಿಸಿರುವ ಧರ್ಮಸ್ಥಳದಲ್ಲಿನ ಸಾಮೂಹಿಕ ಸಮಾಧಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ಹೊಸ ಹೊಸ ಮಾಹಿತಿ ಹೊರಬೀಳುತ್ತಲೇ ಇದೆ. ಇಂದು ಮುಸುಕುಧಾರಿ ವ್ಯಕ್ತಿ ತೋರಿಸಿದ್ದ ಒಂಬತ್ತನೇ ಪಾಯಿಂಟ್‌ನಲ್ಲಿ ಉತ್ಖನನ ಮಾಡಲಾಗಿದ್ದು, ಈ ಸಮಯದಲ್ಲಿ ಒಂದು ಸಣ್ಣ ಮೂಳೆ ಸಹ ಸಿಗಲಿಲ್ಲ ಎನ್ನಲಾಗಿದೆ.
ಈ ಮೊದಲು ಒಂಬತ್ತನೇ ಪಾಯಿಂಟ್‌ನಲ್ಲಿ ಉತ್ಖನನ ಮಾಡಿದ್ರೆ ಎಲ್ಲಾ ಮಾಹಿತಿ ಹೊರಬೀಳಲಿದೆ ಎಂದು ಹೇಳಲಾಗುತ್ತಿತ್ತು. ಅಲ್ಲದೆ ಒಂಬತ್ತರಿಂದ ಹದಿಮೂರರ ವರೆಗೆ ಸಾಮೂಹಿಕವಾಗಿ ಹೆಣವನ್ನು ಹೂಳಲಾಗಿದೆ ಎಂದು ಹೇಳಿಕೆ ನೀಡಲಾಗಿತ್ತು. ಆದರೆ ಇಂದು ಉತ್ಖನನ ಮಾಡಲಾಗಿದೆಯಾದರೂ ಇಂದು ಏನೂ ಕಂಡುಬಂದಿಲ್ಲ.
ನಾಳೆ ಉತ್ಖನನ ನಡೆಯುವುದು ಡೌಟು
ಐದನೇ ದಿನದ ಕಾರ್ಯಾಚರಣೆ ಈಗ ಅಂತ್ಯವಾಗಿದ್ದು, ಇಂದು ಏನೂ ಸಿಕ್ಕಿಲ್ಲ. ಕೇವಲ 6ನೇ ಪಾಯಿಂಟ್‌ನಲ್ಲಿ ಮಾತ್ರ ಕಳೇಬರ ಪತ್ತೆಯಾಗಿತ್ತು. ಈ ನಡುವೆ ಆಗಸ್ಟ್ 3 ರಂದು ಅಂದರೆ ನಾಳೆ ಉತ್ಖನನ ಕಾರ್ಯಾಚರಣೆ ನಡೆಯುವುದು ಬಹುತೇಕ ಅನುಮಾನವಾಗಿದೆ. ನಾಳೆ ಭಾನುವಾರ ಆಗಿರುವ ಕಾರಣ ಇಲಾಖಾ ಅಧಿಕಾರಿಗಳಿಗೆ ರಜಾ ದಿನವಾಗಿದೆ. ಇದರಿಂದ ನಾಳೆ ಉತ್ಖನನ ಕಾರ್ಯ ನಡೆಯುವುದು ಅನುಮಾನ ಎನ್ನಲಾಗಿದೆ.
ಕೇಸ್ ವಾಪಸ್ ಪಡೆಯಲು ಒತ್ತಡ ಹೇರಲಾಗಿದೆಯೇ?
ಇನ್ನು ಅನಾಮಿಕ ವ್ಯಕ್ತಿಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಒತ್ತಡ ಇದೆ ಎಂಬ ಮಾಹಿತಿ ಹರಿದಾಡುತ್ತಿದೆ. ಈ ಪ್ರಕರಣದಲ್ಲಿ ನಿನಗೆ ದೊಡ್ಡ ಮಟ್ಟದ ಶಿಕ್ಷೆ ಆಗಲಿದೆ. ಪರಿಣಾಮ ಕೇಸ್ ವಾಪಸ್ ತೆಗೆದುಕೋ ಎಂದು ಎಸ್‌ಐಟಿಯಲ್ಲಿರುವ ಅಧಿಕಾರಿಯೋರ್ವರು ಆ ವ್ಯಕ್ತಿಗೆ ಒತ್ತಡ ಹಾಕುತ್ತಿದ್ದಾರೆ ಅನ್ನೋ ವರದಿಗಳು ಹರಿದಾಡುತ್ತಿವೆ. ಆದರೆ ಇದನ್ನು ಎಸ್‌ಐಟಿ ತಂಡದ ಅಧಿಕಾರಿಗಳು ನಿರಾಕರಿಸಿದ್ದಾರೆ.
ನಾಳೆ ಅಧಿಕಾರಿಗಳ ಕೆಲಸ ಏನು?
ಇನ್ನು ನಾಳೆ ಉತ್ಖನನ ಕಾರ್ಯ ಮಾಡುವುದಿಲ್ಲ ಎಂಬ ಮಾಹಿತಿಯನ್ನು ಅಧಿಕಾರಿಗಳು ಅಧಿಕೃತವಾಗಿ ತಿಳಿಸಿಲ್ಲ. ಅದಾಗ್ಯೂ ಈ ಕೆಲಸ ಮಾಡಲಿಲ್ಲ ಎಂದರೆ ಎಸ್‌ಐಟಿ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದಾಖಲೆ ಪರಿಶೀಲನೆ ಮಾಡುವ ಕೆಲಸ ಮಾಡಲಿದ್ದಾರೆ ಅನ್ನೋ ಮಾಹಿತಿ ಇದೆ. ಈ ಮೂಲಕ ಒಂದು ಕ್ಷಣವನ್ನೂ ಸಹ ವ್ಯರ್ಥ ಮಾಡದೇ ಅಧಿಕಾರಿಗಳು ಎಲ್ಲಾ ರೀತಿಯ ತನಿಖೆಗೆ ಸಜ್ಜಾಗಿದ್ದಾರೆ ಎನ್ನಲಾಗಿದೆ.
2 thoughts on “ಧರ್ಮಸ್ಥಳ ಪ್ರಕರಣ: ಇಂದು ಗುಂಡಿಯಲ್ಲಿ ಸಿಕ್ಕಿದ್ದೇನು? ನಾಳೆ ಉತ್ಖನನ ಕಾರ್ಯಾಚರಣೆ ನಡಿಯೋದು ಅನುಮಾನ Dharmasthala Case Suspense Over Tomorrow’s Excavation After Today’s Discovery”