ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ರಾಮಚಂದ್ರ ರಾವ್ ಅವರಿಗೆ ಸಂಬಂಧಿಸಿದ ಖಾಸಗಿ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಮಹಿಳೆಯೊಬ್ಬರೊಂದಿಗೆ ಅವರು ಕಾಣಿಸಿಕೊಂಡಿರುವ ಈ ದೃಶ್ಯಗಳು ಪೊಲೀಸ್ ಇಲಾಖೆಯ ಗೌರವಕ್ಕೆ ಧಕ್ಕೆ ತಂದಿವೆ.
ಇದನ್ನು ಓದಿ: ಮಕ್ಕಳೇ ಎಚ್ಚರ..! ನಿಮ್ಮ ಮೆಚ್ಚಿನ Snack ಈಗ ವಿಷಕಾರಿ.. ಕ್ಯಾನ್ಸರ್ ಕಾರಕ !!
ಇದನ್ನು ಓದಿ: ಗುಪ್ತಚರ ವರದಿ ಬಹಿರಂಗ: ರಾಜ್ಯದಲ್ಲಿರುವ ಶೇ.80 ಬಾಂಗ್ಲಾದೇಶಿಗರಿಗೆ ಭಾರತೀಯ ದಾಖಲೆ…!
ವೈರಲ್ ಆಗಿರುವ ವಿಡಿಯೋ ಸುಮಾರು ಒಂದು ವರ್ಷ ಹಿಂದಿನದ್ದಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಪ್ರಸ್ತುತ ರಾಮಚಂದ್ರ ರಾವ್ ಅವರು ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪೊಲೀಸ್ ಸಮವಸ್ತ್ರದಲ್ಲಿಯೇ ಆತ್ಮೀಯತೆ ಪ್ರದರ್ಶಿಸಿರುವ ದೃಶ್ಯಗಳು ವಿಡಿಯೋದಲ್ಲಿವೆ.
ಕಚೇರಿಯೊಳಗೆ ಕುಳಿತು ಯೂನಿಫಾರಂ ಧರಿಸಿದ್ದ ರಾಮಚಂದ್ರ ರಾವ್ ಮಹಿಳೆಯೊಬ್ಬರನ್ನು ಅಪ್ಪಿಕೊಂಡು ಮುತ್ತಿಟ್ಟಿರುವ ಹಸಿಬಿಸಿ ಕ್ಷಣಗಳು ಸ್ಪಷ್ಟವಾಗಿ ಕಾಣಿಸುತ್ತವೆ. ಈ ಘಟನೆ ನಟಿ ರನ್ಯಾ ರಾವ್ ಪ್ರಕರಣಕ್ಕಿಂತ ಮುಂಚೆ ನಡೆದದ್ದು ಎಂದು ಹೇಳಲಾಗುತ್ತಿದೆ. ಒಂದು ಕಡೆ ಮಗಳು ರನ್ಯಾ ರಾವ್ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸಿಲುಕಿ ಸಂಕಷ್ಟ ಎದುರಿಸುತ್ತಿದ್ದರೆ, ಮತ್ತೊಂದೆಡೆ ಮಲತಂದೆಯ ಖಾಸಗಿ ವಿಡಿಯೋ ಬಹಿರಂಗವಾಗಿರುವುದು ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.
ದುಬೈನಿಂದ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಪ್ರಕರಣದಲ್ಲಿ ನಟಿ ರನ್ಯಾ ರಾವ್ ಬಂಧನವಾಗುತ್ತಿದ್ದಂತೆ, ಅವರ ಮಲತಂದೆ ಡಿಜಿಪಿ ರಾಮಚಂದ್ರ ರಾವ್ ಅವರ ಹೆಸರೂ ವಿಚಾರಣೆಯಲ್ಲಿ ಕೇಳಿಬಂದಿತ್ತು. ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್ಗೆ ವಿಶೇಷ ಶಿಷ್ಟಾಚಾರ ನೀಡಿದ ಕುರಿತು ಕರ್ನಾಟಕ ಗೃಹ ಇಲಾಖೆ ತನಿಖೆಗೆ ಆದೇಶಿಸಿತ್ತು. ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ರಾಮಚಂದ್ರ ರಾವ್ ಪಾತ್ರವಿದೆಯೇ? ಸರ್ಕಾರಿ ಪ್ರೋಟೋಕಾಲ್ ದುರುಪಯೋಗವಾಗಿದೆಯೇ ಎಂಬ ಅಂಶಗಳ ಮೇಲೆ ತನಿಖೆ ಆರಂಭವಾಗಿತ್ತು.
ಕೆ. ರಾಮಚಂದ್ರ ರಾವ್ ಕರ್ನಾಟಕ ಕೇಡರ್ಗೆ ಸೇರಿದ ಐಪಿಎಸ್ ಅಧಿಕಾರಿ. ಇವರು ಈ ಹಿಂದೆ ಕರ್ನಾಟಕ ರಾಜ್ಯ ಪೊಲೀಸ್ ವಸತಿ ನಿಗಮ ಲಿಮಿಟೆಡ್ನಲ್ಲಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2023ರಲ್ಲಿ ಅವರನ್ನು ಅದೇ ನಿಗಮದ ಡಿಜಿಪಿ, ಅಧ್ಯಕ್ಷ ಮತ್ತು ಎಂಡಿಯಾಗಿ ಪದೋನ್ನತಿ ಮಾಡಲಾಗಿತ್ತು. ಆಗಸ್ಟ್ 2025ರಲ್ಲಿ ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ನೇಮಕಗೊಂಡಿದ್ದರು.
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಇವರ ಮಲಮಗಳು ರನ್ಯಾ ರಾವ್ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ, ಸರ್ಕಾರಿ ಸವಲತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಅನುಮಾನ ಮೂಡಿತ್ತು. ಈ ಹಿನ್ನೆಲೆ ಮಾರ್ಚ್ 2025ರಲ್ಲಿ ರಾಮಚಂದ್ರ ರಾವ್ ಅವರನ್ನು ಕಡ್ಡಾಯ ರಜೆಗೆ ಕಳುಹಿಸಲಾಗಿತ್ತು.






