---Advertisement---

ಮೈಸೂರು: ಋತುಸ್ರಾವಕ್ಕೆ ಪ್ರವೇಶಿಸಿದ ಬಾಲಕಿಯರ ಮೇಲೆ ಕಣ್ಣು, 20 ಲಕ್ಷಕ್ಕೆ ಪೂರೈಸುತ್ತಿದ್ದ ಜಾಲ ಪತ್ತೆ..

On: September 30, 2025 2:29 PM
Follow Us:
---Advertisement---

ಮೊದಲ ಬಾರಿ ಋತುಮತಿಯಾದ ಬಾಲಕಿಯರನ್ನು ಲೈಂಗಿಕ ಕೃತ್ಯಗಳಿಗೆ ಪೂರೈಸುತ್ತಿದ್ದ ಜಾಲವನ್ನು ಮೈಸೂರು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ನಮ್ಮ ಸಮಾಜದಲ್ಲಿ ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ನಡೆಸಿದ್ರೆ ಮಾನಸಿಕ ಕಾಯಿಲೆಗಳು, ಲೈಂಗಿಕ ಕಾಯಿಲೆಗಳು ದೂರ ಆಗುತ್ತವೆ ಎಂಬ ಮೂಢನಂಬಿಕೆ ಇದೆ.

ಈ ಹಿನ್ನೆಲೆಯಲ್ಲಿ ಮೊದಲ ಬಾರಿ ಋತುಮತಿಯಾದ ಬಾಲಕಿಯರನ್ನು ಲೈಂಗಿಕ ಕೃತ್ಯಕ್ಕೆ ಪೂರೈಸುತ್ತಿದ್ದ ಓರ್ವ ಮಹಿಳೆ ಹಾಗೂ ಓರ್ವ ಪುರುಷನನ್ನು ಮೈಸೂರಿನ ವಿಜಯನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊದಲ ಬಾರಿ ರುತುಮತಿಯಾದಾಕೆ ಜೊತೆ ಲೈಂಗಿಕ ಕ್ರಿಯೆ ನಡೆಸಿದರೆ ಮಾನಸಿಕ ಖಿನ್ನತೆ ದೂರವಾಗಲಿದೆ ಎಂಬ ಮೂಢ ನಂಬಿಕೆ ಇದೆ. ಹಾಗಾಗಿ ಕೋಟಿ ಕುಳ ಹಾಗೂ ಲೈಂಗಿಕವಾಗಿ ಅತೀವ ಆಸಕ್ತಿ ಹೊಂದಿರುವವರನ್ನ ಬೆಂಗಳೂರು ಮೂಲದ ತುಳಸಿಕುಮಾರ್ ಹಾಗೂ ಶೋಭ ಗಾಳ ಹಾಕುತ್ತಿದ್ದರು. 12 ರಿಂದ ವರ್ಷದ ಓರ್ವ ಅಪ್ರಾಪ್ತೆಗೆ ಗಾಳ ಹಾಕಿದ ಕಿರಾತಕರು ಲಕ್ಷಾಂತರ ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿದ್ದರು. ಅಲ್ಲದೇ ಬ್ರಾಂಡೆಡ್ ಬಟ್ಟೆಗಳಂದಿಗೆ ಐಷಾರಾಮಿ ಬದುಕಿನ ಆಸೆ ತೋರಿಸಿ ಆಕೆಯನ್ನು ವೇಶ್ಯಾವಾಟಿಕೆಗೆ ತಳ್ಳುತ್ತಿದ್ದರು. ಸಾಲದಕ್ಕೆ ಆಕೆ ಖಾಸಗಿ ವಿಡಿಯೋವನ್ನ ಮೊಬೈಲ್ ನಲ್ಲಿ ಸೆರೆ ಹಿಡಿದು ಗಿರಾಕಿಗಳಿಗೆ ತೋರಿಸುತ್ತಿದ್ದರು.

ಇಂತದೊಂದು ದಂಧೆ ನಡೆಯುತ್ತಿದೆ ಎಂಬ ಖಚಿತ ಮೈಸೂರು ಮೂಲದ ಒಡನಾಡಿ ಸಂಸ್ಥೆಗೆ ಮಾಹಿತಿ ಸಿಕ್ಕಿತ್ತು. ಪ್ರಕರಣ ಗಂಭೀರತೆ ಅರೆತ ಸಂಸ್ಥೆ ಪಕ್ಕಾ ಪ್ಲಾನ್ ಮಾಡಿ ಮಾಹಿತಿ ಕಲೆ ಹಾಕಿದ್ದು, ಕೊನೆಗೆ ಗ್ರಾಹಕರ ಸೋಗಿನಲ್ಲಿ ಆರೋಪಿಗಳನ್ನ ಸಂಪರ್ಕಿಸಿ ಖಚಿತಪಡಿಸಿಕೊಂಡಿದೆ.

ಇದು ನಿಜ ಎಂದು ಖಾತ್ರಿಯಾದ ಬಳಿಕ ಒಡನಾಡಿ ಸಂಸ್ಥೆ ಪೊಲೀಸರಿಗೆ ಮಾಹಿತಿ ನೀಡಿದೆ. ಇದರ ಮಾಹಿತಿ ಆಧರಿಸಿ ಮೈಸೂರಿನ ವಿಜಯನಗರ ಪೊಲೀಸರು ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಾಸ್ಟರ್ ಪ್ಲಾನ್ ಮಾಡಿ ಇಬ್ಬರು ಕಿರಾತಕರನ್ನ ಬಂಧಿಸಿದ್ದು, ಓರ್ವ ಅಪ್ರಾಪ್ತೆಯನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಬಾಲಕಿಯನ್ನು ವೇಶ್ಯಾವಾಟಿಕೆಗೆ ಇಳಿಸುವ ಪ್ರಯತ್ನವನ್ನು ಆರೋಪಿಗಳು ಮಾಡಿದ್ದರು. ಬಾಲಕಿಯನ್ನು ಬಳಸಿಕೊಂಡು ಹಣ ಮಾಡಲು ಮುಂದಾಗಿದ್ದರು. 20 ಲಕ್ಷ ರೂಪಾಯಿಗೆ ಬಾಲಕಿಯನ್ನು ಏನ್ ಬೇಕಾದರೂ ಮಾಡಿಕೊಳ್ಳಿ ಎಂದು ಆರೋಪಿಗಳು ಹೇಳಿದ್ದರು. ಈಗ ನಾವೇ ಕಣ್ಣಾರೆ ಕಂಡು ಬಾಲಕಿಯನ್ನು ರಕ್ಷಣೆ ಮಾಡಿದ್ದೇವೆ. ಇದರ ಹಿಂದೆ ದೊಡ್ಡ ಜಾಲ ಇದೆ ಎಂದು ಅನ್ನಿಸುತ್ತಿದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ಇವೆಲ್ಲವೂ ಆಗುತ್ತಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಹಾಗೂ ಪರಶು ಹೇಳಿದ್ದಾರೆ.

ಅಪ್ರಾಪ್ತೆಗೆ ಮಂಕು ಬೂದಿ ಎರಚಿ ಲೈಂಗಿಕವಾಗಿ ಬಳಸಿಕೊಂಡು ಬಳಿಕ ವೇಶ್ಯಾವಾಟಿಕೆ ದಂಧೆಗೆ ಹಾಕಲು ಮಾಡಿದ್ದ ಪ್ಲಾನ್ ಫ್ಲಾಪ್ ಆಗಿದ್ದು, ಮಾಡಿದ ತಪ್ಪಿಗೆ ಈಗ ಇಬ್ಬರು ಕಿರಾತಕರು ಜೈಲು ಸೇರಿದ್ದಾರೆ. ಹೀಗಾಗಿ ದುಬಾರಿ ಗಿಫ್ಟ್ ಐಷಾರಾಮಿ ಜೀವನದ ಆಸೆಗೆ ಬೀಳುವ ಅಪ್ರಾಪ್ತ ಬಾಲೆಯರು ಎಚ್ಚರದಿಂದ ಇರಬೇಕು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment