---Advertisement---

ಕಾಂಡೋಮ್ ಖರೀದಿಗೆ ಬರೋಬ್ಬರಿ 1 ಲಕ್ಷ ರೂ. ಖರ್ಚು ಮಾಡಿದ ಭೂಪ

On: December 25, 2025 1:03 PM
Follow Us:
---Advertisement---

ಸಾಮಾನ್ಯವಾಗಿ ಬಟ್ಟೆ, ಶೂ, ಮೇಕಪ್ ಕಿಟ್ ಸೇರಿದಂತೆ ವಿವಿಧ ವಸ್ತುಗಳನ್ನು ಖರೀದಿಸಲು ಲಕ್ಷಾಂತರ ರೂಪಾಯಿ ಖರ್ಚು ಮಾಡುವವರನ್ನು ನೋಡಿರುತ್ತೇವೆ. ಆದರೆ ಈ ಬಾರಿ ಸ್ವಿಗ್ಗಿಯ ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್ ಇನ್‌ಸ್ಟಾಮಾರ್ಟ್ (Instamart) ಬಿಡುಗಡೆ ಮಾಡಿದ 2025ರ ವರದಿಯಲ್ಲಿ ಅಚ್ಚರಿಯ ಸಂಗತಿ ಬಹಿರಂಗವಾಗಿದೆ.

ಆನ್ಲೈನ್ ಶಾಪಿಂಗ್ ಪ್ರಚಲಿತ ಹೆಚ್ಚುತ್ತಿರುವ ಈ ದಿನಗಳಲ್ಲಿ, ಬ್ಲಿಂಕಿಟ್, ಜೆಪ್ಟೊ, ಸ್ವಿಗ್ಗಿ ಇನ್‌ಸ್ಟಾಮಾರ್ಟ್ ಮುಂತಾದ ಅಪ್ಲಿಕೇಶನ್‌ಗಳ ಮೂಲಕ ಮನೆಲ್ಲೇ ಕುಳಿತು ಅಗತ್ಯ ವಸ್ತುಗಳನ್ನು ಆರ್ಡರ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಇದೇ ಹಿನ್ನೆಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಇನ್‌ಸ್ಟಾಮಾರ್ಟ್ ತನ್ನ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದೆ.

ಈ ವರದಿಯ ಪ್ರಕಾರ, ಚೆನ್ನೈನ ಒಬ್ಬ ವ್ಯಕ್ತಿ ಇಡೀ ವರ್ಷದಲ್ಲಿ ಕಾಂಡೋಮ್‌ಗಳ ಖರೀದಿಗೆ ಬರೋಬ್ಬರಿ 1,06,398 ರೂಪಾಯಿ ಖರ್ಚು ಮಾಡಿದ್ದಾನೆ. ಸಾವಿರಗಳಲ್ಲ, ಲಕ್ಷದ ಮಟ್ಟಿಗೆ ಖರ್ಚಾಗಿರುವ ಈ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಭಾರಧ್ವಜ್ ರಂಗನ್ ಎಂಬ ಹೆಸರಿನ ಖಾತೆಯಲ್ಲಿ ಇನ್‌ಸ್ಟಾಮಾರ್ಟ್ 2025ರ ವರದಿ ಕುರಿತ ಈ ವಿವರವನ್ನು ಹಂಚಿಕೊಳ್ಳಲಾಗಿದ್ದು, ಈ ಅಂಕಿಅಂಶಗಳು ಕ್ವಿಕ್ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ಬಳಕೆ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದನ್ನು ತೋರಿಸುತ್ತವೆ.

Join WhatsApp

Join Now

RELATED POSTS