ಕರ್ನಾಟಕದ ಲೋಕಸಭಾ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಇಂದು ನಕಲಿ ಮತದಾನದ ಬಗ್ಗೆ ಸಾಕ್ಷ್ಯ ಸಮೇತ ವಿವರಣೆ ನೀಡಿದ್ದಾರೆ.
ಕರ್ನಾಟಕದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಮಹದೇವಪುರದಲ್ಲಿ ಅಕ್ರಮ ಮತದಾನ ನಡೆದಿದೆ. ಈ ಬಗ್ಗೆ ದತ್ತಾಂಶಗಳ ಸಮೇತ ವಿವರಣೆ ನೀಡಿದರು. 40 ಸಾವಿರಕ್ಕೂ ಹೆಚ್ಚು ನಕಲಿ ಅಡ್ರೆಸ್ ಕೊಟ್ತಿದ್ದಾರೆ ಮನೆ ಸಂಖ್ಯೆ 0 ಎಂದು ನಮೂದಿಸಲಾಗಿದೆ ಎಂದರು.
ಮತಪಟ್ಟಿಯಲ್ಲಿ ನಕಲಿ ವಿಳಾಸವಿದ್ದು, ಮತದಾರನ ತಂದೆಯ ಹೆಸರೇ ಇಲ್ಲ. ಮಹದೇವಪುರದಲ್ಲಿ ಒಬ್ಬನೇ ಮತದಾರನಿಂದ ಹಲವುಮತಗಟ್ಟೆಯಲ್ಲಿ ಮತದಾನ ಮಾಡಲಾಗಿದೆ. ಆದಿತ್ಯ ಶ್ರೀವಾಸ್ತವ್ ಎಂಬಾತ ಹಲವೆಡೆ ಮತಗಟ್ಟೆಗಳಲ್ಲಿ ಮತಚಲಾಯಿಸಿದ್ದಾನೆ. ಮತದಾರರ ಪಟ್ಟಿಯಲ್ಲಿ ನಕಲಿ ಅಡ್ರೆಸ್ ಇದೆ. ಇದೇ ರೀತಿ 11 ಸಾವಿರಕ್ಕೂ ಹೆಚ್ಚು ಜನರಿಂದ ನಕಲಿ ಮತದಾನ ಮಾಡಲಾಗಿದೆ ಎಂದು ಹೇಳಿದರು.
ನಕಲಿ ಅಡ್ರೆಸ್ 40,009 ಮತದಾರ ಜನರಿದ್ದಾರೆ
ಮಹದೇವಪುರದಲ್ಲಿ 11,565 ನಕಲಿ ಮತದಾನ ನಡೆದಿದೆ. ನಕಲಿ ಅಡ್ರೆಸ್ ಕೊಟ್ಟವರು 40,009 ಜನರಿದ್ದಾರೆ. ಒಂದೇ ಅಡ್ರೆಸ್ ನಲ್ಲಿ ಹಲವು ಮತದಾರರ ಗುಂಪು 10,452 ಇದೆ. ವೋಟರ್ ಐಡಿಯಲ್ಲಿ ಸೇರಿಸದ ಫೋಟೋ ಇರುವವರು 4,312. ಹಲವರ ವಿಳಾಸವನ್ನು 0 ಎಂದು ನಮೂದಿಸಲಾಗಿದೆ ಎಂದು ವಿವರಿಸಿದರು. ಮತಗಳ್ಳತನದ ಬಗ್ಗೆ ದಾಖಲೆ ಸಮೇತ ರಾಹುಲ್ ಗಾಂಧಿ ಪಟ್ಟಿ ಬಿಡುಗಡೆ ಮಾಡಿದ್ದಾರೆ.
1 thought on “ನಕಲಿ ಮತದಾನದ ಬಗ್ಗೆ ಸಾಕ್ಷ್ಯ ಸಮೇತ ವಿವರಿಸಿದ ಲೋಕಸಭಾ ವಿಪಕ್ಷ ನಾಯಕ: ಮತಗಳ್ಳತನ ಬಯಲಿಗೆ? Leader of Opposition exposes bogus voting with evidence.”