ಐದು ಲಕ್ಷ ರೂ. ಸಾಲ ನೀಡುವುದಾಗಿ ಭರವಸೆ ನೀಡಿದ ಧನಿ ಕ್ಯಾಪಿಟಲ್ ಆನ್‌ಲೈನ್ ಫೈನಾನ್ಸ್ ಸಂಸ್ಥೆ, ಮುಂಗಡವಾಗಿ 2.38 ಲಕ್ಷ ರೂ. ವಸೂಲಿಸಿ ವಂಚಿಸಿದ ಪರಿಣಾಮ, ಹಣ ಕಳೆದುಕೊಂಡ ಯುವಕ ರಾಜಪ್ಪ ನೇಣು ಬಿಗಿದುಕೊಂಡ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಕಾಮಗೆರೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಕೊಳ್ಳೇಗಾಲ ತಾಲೂಕಿನ ಕಾಮಗೆರೆ ಗ್ರಾಮದ ನಿವಾಸಿ ರಾಜಪ್ಪ ಎಂದು ಗುರುತಿಸಲಾಗಿದೆ. ಕಳೆದ ಕೆಲ ದಿನಗಳ ಹಿಂದೆ ಧನಿ ಕ್ಯಾಪಿಟಲ್ಸ್ ಸಂಸ್ಥೆಯಿಂದ ರಾಜಪ್ಪಗೆ ಕಡಿಮೆ ಬಡ್ಡಿಗೆ 15 ಲಕ್ಷ ಸಾಲ ನೀಡುವುದಾಗಿ ಹೇಳಿತ್ತು. ಆದರೆ ಇದಕ್ಕೂ ಮೊದಲು ಎರಡೂವರೆ ಲಕ್ಷ ನೀಡಬೇಕು ಎಂದು ಕೇಳಿದ್ದರು ಎನ್ನಲಾಗಿದೆ. ಅದರಂತೆ ರಾಜಪ್ಪ ಆನ್ಲೈನ್ ಮೂಲಕ 2.38 ಲಕ್ಷ ರೂಪಾಯಿ ಕಳುಹಿಸಿದ್ದ. ಇದಾಗಿ ಒಂದೆರಡು ದಿನ ಕಳೆದರೂ ಯಾವುದೇ ಅಪ್ಡೇಟ್ ಬಾರದ ಹಿನ್ನಲೆ ಪರಿಶೀಲನೆ ನಡೆಸಿದಾಗ ಇದೊಂದು ವಂಚನೆ ಎಂದು ಗೊತ್ತಾಗಿದೆ.
ಇದರಿಂದ ತೀವ್ರ ಮನನೊಂದ ರಾಜಪ್ಪ ನನ್ನ ಸಾವಿಗೆ ಧಣಿ ಕ್ಯಾಪಿಟಲ್ಸ್ ನ ಅನಂತ್ ಲೂಹ ಚಿಕ್ಕರಂಜನ್ ಕಾರಣ ಎಂದು ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಸಾವಿನ ನಂತರ ನನ್ನ ಮನೆಯವರಿಗೆ ಒಂದು ಕೋಟಿ ಪರಿಹಾರ ನೀಡಬೇಕು ಎಂದು ಕೇಳಿಕೊಂಡಿದ್ದಾನೆ. ಘಟನಾ ಸಂಬಂದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






