ಸ್ಯಾಂಡಲ್ ವುಡ್ ನಟ ಅಜಯ್ ರಾವ್ ದಾಂಪತ್ಯದಲ್ಲಿ ಬಿರುಕು ಉಂಟಾಗುದ್ದು, ವಿಚ್ಚೇದನ ಕೋರಿ ಪತ್ನಿ ಸ್ವಪ್ನಾ ರಾವ್ ಕೋರ್ಟ್ ಮೊರೆ ಹೋಗಿದ್ದಾರೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ.
11 ವರ್ಷಗಳ ದಾಂಪತ್ಯದ ನಂತರ ಅವರು ಬೇರ್ಪಟ್ಟಿದ್ದಾರೆ. ಅವರ ಬೇರ್ಪಡುವಿಕೆಗೆ ಸರಿಯಾದ ಕಾರಣ ಇನ್ನೂ ಕಂಡುಬಂದಿಲ್ಲ.
ಪರಸ್ಪರ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಜೀವನದಲ್ಲಿ ಇದೀಗ ದೊಡ್ಡ ಬಿರುಕು ಮೂಡಿದಂತಾಗಿದೆ. ಎಕ್ಸ್ ಕ್ಯೂಸ್ ಮೀ ಮುಂತಾದ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ಅಜಯ್ ರಾವ್ ಅವರು ಒಂದು ಕಾಲದಲ್ಲಿ ಬಹುಬೇಡಿಕೆಯ ನಟ ಎನಿಸಿಕೊಂಡಿದ್ದರು. ಅಲ್ಲದೇ ಇತ್ತೀಚೆಗೆ ಅವರಿಗೆ ಕೋಟಿ ಕೋಟಿ ಸಾಲವಿದೆ ಎಂಬ ಸುದ್ದಿಯೂ ಹರಿದಾಡಿತ್ತು.
ಈ ಹಿಂದೆ ದರ್ಶನ ಒಂದರಲ್ಲಿ ಮಾತನಾಡುತ್ತ ಜ್ಯೋತಿಷಿಯೊಬ್ಬರು “ಮದುವೆಯಾದ ಮುಹೂರ್ತದಲ್ಲಿ, ನೀವಿಬ್ಬರು ಒಂದು ವರ್ಷವೂ ಜೊತೆ ಇರಲ್ಲ, ಡಿವೋರ್ಸ್ ಆಗುತ್ತೆʼ ಅಂದಿದ್ದರು. ಆದರೆ ನಾನು ಯಾವ ಮುಹೂರ್ತವೂ ನೋಡಲ್ಲ. ನನಗೆ ಜ್ಯೋತಿಷ್ಯ ಓದುವುದಕ್ಕೆ ಬರುತ್ತೆ. ಹೀಗಾಗಿ ಈ ಬಗ್ಗೆ ನಾನು ಸ್ಟಡಿ ಮಾಡಿದಾಗ, ಹೌದಲ್ವಾ ಇದು ತಪ್ಪು ಮುಹೂರ್ತ ಅನ್ನೋದು ಮನದಟ್ಟಾಯಿತು. ಆದರೆ ಸದ್ಯ ಎಲ್ಲವೂ ಸರಿಯಿದೆ. ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಹಿಟ್ ಆಯ್ತು. ಜೀವನದಲ್ಲಿ ಏನೇ ಬಂದರೂ ನಾನು ಸ್ವೀಕರಿಸುತ್ತೇನೆ” ಎಂದು ಹೇಳಿಕೊಂಡಿದ್ದರು.
ನಟ ಅಜಯ್ ರಾವ್ ವಿರುದ್ಧ ಅವರ ಪತ್ನಿ ಸಪ್ನಾ ಅವರು ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯಡಿ ದೂರು ಸಹ ದಾಖಲಿಸಿದ್ದಾರೆ ಎನ್ನಲಾಗುತ್ತಿದೆ. ಪತ್ನಿ ಜೊತೆಗೆ ಮಗಳು ಚರಿಷ್ಮಾ ಸಹ ಅಜಯ್ ರಾವ್ ವಿರುದ್ಧ ದೂರು ದಾಖಲು ಮಾಡಿದ್ದಾರೆ ಎನ್ನಲಾಗುತ್ತಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನಷ್ಟು ಬಹಿರಂಗವಾಗಬೇಕಿದೆ. ಅಜಯ್ ರಾವ್ ಹಾಗೂ ಸಪ್ನಾ ಅವರುಗಳು ಪ್ರೀತಿಸಿ ಮದುವೆ ಆಗಿದ್ದರು. ಹೊಸಪೇಟೆಯಲ್ಲಿ ಆಪ್ತರು, ಸಂಬಂಧಿಕರ ಎದುರು ಸರಳವಾಗಿ ಈ ಜೋಡಿಯ ವಿವಾಹ ನಡೆದಿತ್ತು.






