ಮುಂಬೈ: “ಮೂಗಿಗಿಂತ ಮೂಗುತಿ ಭಾರ” ಎಂಬ ಗಾದೆಯನ್ನು ನಿಜವಾಗಿಸಿದ ಘಟನೆ ಇದೀಗ ದೇಶದ ಗಮನ ಸೆಳೆದಿದೆ. ಆಂಧ್ರಪ್ರದೇಶದ ಉದ್ಯಮಿಯೊಬ್ಬರು ಕೇವಲ ₹7 ಲಕ್ಷ ಮೌಲ್ಯದ ಮಾರುತಿ ಇಗ್ನಿಸ್ ಕಾರಿಗೆ ಭರ್ಜರಿ ₹2.08 ಕೋಟಿ ವೆಚ್ಚ ಮಾಡಿ ವಿಶೇಷ ನಂಬರ್ ಪ್ಲೇಟ್ ಖರೀದಿಸಿದ್ದಾರೆ. ಇದರೊಂದಿಗೆ ದೇಶದಲ್ಲೇ ಅತಿ ದುಬಾರಿ ವಾಹನ ನೋಂದಣಿ ಸಂಖ್ಯೆಯ ಹೊಸ ದಾಖಲೆ ನಿರ್ಮಾಣವಾಗಿದೆ.
ಈ ವಿಶೇಷ ನೋಂದಣಿ ಸಂಖ್ಯೆ ‘DDC 001’ ಅನ್ನು ಈ ಹಿಂದೆ ಬಿಗ್ ಬಾಯ್ಸ್ ಟಾಯ್ ಕಂಪನಿಯ ಮಾಲೀಕ ಜತಿನ್ ಅಹುಜಾ ತಮ್ಮ ಕಾರಿಗೆ ಬಳಸುತ್ತಿದ್ದರು. ಇತ್ತೀಚೆಗೆ ಅವರು ಈ ನಂಬರ್ ಪ್ಲೇಟ್ ಅನ್ನು ಕಾನೂನುಬದ್ಧವಾಗಿ ಹರಾಜು ಹಾಕಿದ್ದು, ಆಂಧ್ರಪ್ರದೇಶದ ಉದ್ಯಮಿ ಕಿರಣ್ ಕೊಲ್ಪಕುಲ ₹2.08 ಕೋಟಿ ಮೊತ್ತ ನೀಡಿ ಹರಾಜಿನಲ್ಲಿ ಗೆದ್ದಿದ್ದಾರೆ.
ಇದನ್ನು ಓದಿ: 17,000 ಮನೆಗಳು, 38 ಜೆಟ್‌ಗಳು… ಈ ರಾಜನ ಐಶ್ವರ್ಯಕ್ಕೆ ಮಿತಿ ಇಲ್ಲ..ವಿಶ್ವದ ಅತೀ ಶ್ರೀಮಂತ ರಾಜನ ಕಥೆ!!!
ಇದನ್ನು ಓದಿ: ಸಾಲಗಾರ ಸತ್ತರೆ ಆ ಸಾಲದ ಪಾವತಿ ಯಾರು ಮಾಡಬೇಕು? ಬ್ಯಾಂಕ್ ನಿಯಮ ಏನು ಹೇಳುತ್ತದೆ?..
ಇದಕ್ಕೂ ಮುನ್ನ ದೇಶದ ಅತಿ ದುಬಾರಿ ನಂಬರ್ ಪ್ಲೇಟ್ ಎಂಬ ಖ್ಯಾತಿ ‘HR88B 8888’ ಸಂಖ್ಯೆಗೆ ಸೇರಿತ್ತು. ಈ ನಂಬರ್ ಕಳೆದ ವರ್ಷದ ನವೆಂಬರ್‌ನಲ್ಲಿ ₹1.17 ಕೋಟಿ ಮೊತ್ತಕ್ಕೆ ಹರಾಜಾಗಿತ್ತು. ಇದೀಗ ‘DDC 001’ ಆ ದಾಖಲೆಯನ್ನು ಮುರಿದಿದೆ.
ನಂಬರ್ ಪ್ಲೇಟ್ ಮಾರಾಟ ಕಾನೂನುಬದ್ಧ
ವಾಹನ ಮಾಲೀಕರು ತಮ್ಮ ವಾಹನಕ್ಕೆ ನೋಂದಾಯಿಸಿದ ವಿಶೇಷ ಸಂಖ್ಯೆಯನ್ನು ಕಾನೂನುಬದ್ಧ ನಿಯಮಗಳ ಪ್ರಕಾರ ಮಾರಾಟ ಮಾಡಬಹುದು. ಇದೇ ನಿಯಮದಡಿ ಈ ಪ್ರಕರಣದಲ್ಲೂ ನಂಬರ್ ಪ್ಲೇಟ್ ಹರಾಜು ಮೂಲಕ ಮಾರಾಟವಾಗಿದೆ.
ಇದನ್ನು ಓದಿ: 2026 ರ ಭಾರತದಲ್ಲಿ ಒಳ್ಳೆಯ ಮೈಲೇಜ್ ಕಾರುಗಳು – ಹೆಸರು, mileage, ಬೆಲೆ ಮತ್ತು ಖರೀದಿ ಸಲಹೆಗಳು
ಬಿಸಿನೆಸ್ ಆಗುತ್ತಿರುವ ವಿಶೇಷ ನಂಬರ್‌ಗಳು
ಕೆಲವರು ಫ್ಯಾಷನ್‌ಗಾಗಿ, ಇನ್ನು ಕೆಲವರು ಸಂಖ್ಯಾಶಾಸ್ತ್ರ ಅಥವಾ ಅದೃಷ್ಟದ ನಂಬಿಕೆಯಿಂದ ವಿಶೇಷ ಸಂಖ್ಯೆಗಳತ್ತ ಆಕರ್ಷಿತರಾಗುತ್ತಾರೆ. ಇದರಿಂದಾಗಿ ವಾಹನ ನಂಬರ್ ಪ್ಲೇಟ್‌ಗಳ ಖರೀದಿ–ಮಾರಾಟ ಹಾಗೂ ಸಂಗ್ರಹಣೆ ಇತ್ತೀಚಿನ ವರ್ಷಗಳಲ್ಲಿ ಲಾಭದಾಯಕ ಬಿಸಿನೆಸ್ ಆಗಿ ರೂಪುಗೊಳ್ಳುತ್ತಿದೆ.





