ಬೆಂಗಳೂರು, ಡಿಸೆಂಬರ್ 04:
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ್ ಸಂಬಂಧಿತ ವಿಚಾರಣೆಯಲ್ಲಿ ಇಂದು ಮಹತ್ವದ ಬೆಳವಣಿಗೆ ಸಂಭವಿಸಿದೆ. ಇಂದಿನ ಕೋರ್ಟ್ ವಿಚಾರಣೆಯ ವೇಳೆ ದರ್ಶನ್‌ಗೆ ಜೈಲಿನಲ್ಲಿ ಟಿವಿ ವೀಕ್ಷಿಸಲು ಅನುಮತಿ ನೀಡಲಾಗಿದೆ. ಅವರ ಬ್ಯಾರಕ್‌ನಲ್ಲಿ ಟಿವಿ ಅಳವಡಿಕೆ ಮಾಡಲು ನಿರ್ದೇಶಿಸಲಾಗಿದೆ.
ಇದೇ ಸಂದರ್ಭದಲ್ಲಿ, ರೇಣುಕಾಸ್ವಾಮಿ ಅವರ ತಂದೆ-ತಾಯಿಗೆ ಕೋರ್ಟ್ ಸಮನ್ಸ್ ಜಾರಿ ಮಾಡಿ, ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಪ್ರಮುಖ ಆರೋಪಿಗೆ ಮధ్యಂತರ ಜಾಮೀನು ನೀಡಿರುವ ಮಾಹಿತಿಯೂ ಹೊರಬಿದ್ದಿದೆ.
ಈಗಾಗಲೇ ದರ್ಶನ್ ಕೇಳಿದ್ದ ಬೆಡ್, ಬೆಡ್‌ಶೀಟ್, ದಿಂಬು ಸೇರಿದಂತೆ ಕೆಲವು ಮೂಲಭೂತ ಸೌಲಭ್ಯಗಳನ್ನು ಕೋರ್ಟ್ ಷರತ್ತುಬದ್ಧವಾಗಿ ಒದಗಿಸಿತ್ತು. ಈಗ ಅದಕ್ಕೆ ಸೇರಿ ಟಿವಿ ವೀಕ್ಷಣೆಯ ಅವಕಾಶವೂ ದೊರೆತಿದೆ.
ರೇಣುಕಾಸ್ವಾಮಿ ಅವರ ತಂದೆ-ತಾಯಿಯನ್ನು ಪ್ರಕರಣದ ಪರೋಕ್ಷ ಸಾಕ್ಷಿಗಳೆಂದು ಪರಿಗಣಿಸಿರುವ ಕೋರ್ಟ್, ಅವರು ಡಿಸೆಂಬರ್ 17ರಂದು ವಿಚಾರಣೆಗೆ ಹಾಜರಾಗಬೇಕೆಂದು ಆದೇಶಿಸಿದೆ.






