ದುಷ್ಕರ್ಮಿಗಳು ಭೀಕರವಾಗಿ ಕೊಲೆ ಮಾಡಿ ಕೈ ಕಾಲು ರುಂಡ ಮುಂಡಾ ಗಳನ್ನ ಬೇರ್ಪಡಿಸಿ ಪ್ಲಾಸ್ಟಿಕ್ ಕೈಚೀಲದಲ್ಲಿ ಒಂದೊಂದು ಭಾಗವನ್ನು ಬೇರೆ ಬೇರೆ ಕಡೆ ರಸ್ತೆ ಬದಿಯಲ್ಲಿ ಎಸದು ಹೋಗಿರುವ ಘಟನೆಯೊಂದು ಕೊರಟಗೆರೆ ಪೊಲೀಸ್ ಠಾಣ ವ್ಯಾಪ್ತಿಯಲ್ಲಿ ಜರುಗಿದೆ.
ಗುರುವಾರ ಮಧ್ಯರಾತ್ರಿ ಮೃತ ದೇಹದ ಬಿಡಿಭಾಗಗಳನ್ನು ಎಸದಿರಬಹುದು ಎನ್ನಲಾಗಿದ್ದು, ಬಹುಷ್ಯ ಅನಾಮದೇಯ ಹೆಣ್ಣು ಮಗುವಿನ ಮೃತ ದೇಹ ಇರಬಹುದು ಎಂದು ಅಂದಾಜಿಸಲಾಗಿದ್ದು, ಮೃತ ದೇಹದ ಪ್ರತಿ ಭಾಗವನ್ನು ತುಂಡು ತುಂಡಾಗಿ ಕತ್ತರಿಸಿ ಪ್ಲಾಸ್ಟಿಕ್ ಕೈ ಚೀಲಗಳಲ್ಲಿ ದಾರಿ ಯುದ್ಧಕ್ಕೂ ಎಸೆದಿರುವ ಕುರುಹುಗಳು ಕಂಡುಬರುತ್ತವೆ, ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿ ಗ್ರಾಮದ ಪಕ್ಕದಲ್ಲಿಯೇ ಊರಿನ ಹೊರ ಭಾಗದ ರಸ್ತೆಯ ಕೈ ಭಾಗ ಪತ್ತೆಯಾದರೆ , ಮುತ್ತೇಲಮ್ಮ ದೇವಸ್ಥಾನದ ಬಳಿ ಮತ್ತೊಂದು ಕೈ ಹಾಗೂ ಮೂಟೆ ಕಟ್ಟಿ ಹಾಕಿರುವ ಒಂದು ಚೀಲ ಕಂಡುಬಂದಿದ್ದು ಮೃತ ದೇಹದ ರುಂಡಾ ಇರಬಹುದು ಎಂದು ಅಂದಾಜಿಸಲಾಗಿದೆ.
ಸ್ಥಳಕ್ಕೆ ಕೊರಟಗೆರೆ ಸಿಪಿಐ ಅನಿಲ್, ಪಿಎಸ್‌ಐ ತೀರ್ಥೇಶ್, ಬಸವರಾಜು ಹಾಗೂ ಸಿಬ್ಬಂದಿ ವರ್ಗ ಟಿಠಾಣಿ ಹೊಡಿದ್ದು ಶ್ವಾನದಳ ಹಾಗೂ ಬೆಳ್ಳಚ್ಚು ತಜ್ಞರ ತಂಡ ಸ್ಥಳಕ್ಕೆ ಆಗಮಿಸಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎನ್ನಲಾಗಿದೆ.
ಇದನ್ನು ಓದಿ : ಭಾರತದ ಮೇಲೆ 50% ಆಮದು ಸುಂಕ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್
1 thought on “ರಸ್ತೆ ಉದ್ದಕ್ಕು ಮೃತದೇಹದ ಭಾಗಗಳು ಪತ್ತೆ..! ತುಂಡು ತುಂಡಾಗಿ ಕತ್ತರಿಸಿ ಎಸೆದು ಹೋಗಿದ್ದಾರೆ Body parts found scattered along the road”