---Advertisement---

ಬಿಗ್ ಬಾಸ್ ಮನೆಯಲ್ಲಿ ಅಪರೂಪದ ಕ್ಷಣ: ಪರಸ್ಪರ ಶ್ಲಾಘಿಸಿದ ಗಿಲ್ಲಿ–ಅಶ್ವಿನಿ

On: January 4, 2026 5:44 PM
Follow Us:
---Advertisement---

ಬಿಗ್ ಬಾಸ್ ಮನೆಯಲ್ಲಿ ಸದಾ ಜಗಳ, ಟೀಕೆ, ವಾಗ್ವಾದಗಳಿಂದಲೇ ಸುದ್ದಿಯಾಗುತ್ತಿದ್ದ ಜೋಡಿ ಎಂದರೆ ಅದು ಗಿಲ್ಲಿ ಮತ್ತು ಅಶ್ವಿನಿ. ಈ ಸೀಸನ್ ಆರಂಭದಿಂದಲೇ ಇಬ್ಬರ ನಡುವೆ ಕಿತ್ತಾಟವಿಲ್ಲದ ದಿನವೇ ಇಲ್ಲ ಎನ್ನಬಹುದು. ಮನೆಯಲ್ಲಿ ಅತಿಹೆಚ್ಚು ಜಗಳ ಮಾಡಿದ ಸ್ಪರ್ಧಿಗಳ ಪಟ್ಟಿಯಲ್ಲಿ ಗಿಲ್ಲಿ–ಅಶ್ವಿನಿಯೇ ಮೊದಲ ಸ್ಥಾನದಲ್ಲಿದ್ದರು.

ಇದನ್ನು ಓದಿ: ಮತ್ತೆ ಸದ್ದು ಮಾಡಲು ಸಜ್ಜಾದ ‘ಲವ್ ಮಾಕ್ಟೆಲ್ 3’ ರಿಲೀಸ್ ಯಾವಾಗ

ಇದನ್ನು ಓದಿ: ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಕನ್ನಡ ಹಾಡುಗಳು – 2025

ಆದರೆ ಫಿನಾಲೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯಲ್ಲಿ ಎಲ್ಲರಿಗೂ ಅಚ್ಚರಿ ಮೂಡಿಸುವಂತಹ ಘಟನೆ ನಡೆದಿದೆ. ಪರಸ್ಪರ ಟೀಕೆ ಮಾಡುತ್ತಿದ್ದ ಈ ಜೋಡಿ, ವೀಕೆಂಡ್ ಎಪಿಸೋಡ್‌ನಲ್ಲಿ ಒಬ್ಬರ ಬಗ್ಗೆ ಒಳ್ಳೆಯ ಮಾತುಗಳನ್ನು ಆಡಿದ್ದಾರೆ.

ಸುದೀಪ್ ನಡೆಸಿಕೊಟ್ಟ ಹೊಸ ವರ್ಷದ ಮೊದಲ ವೀಕೆಂಡ್ ಎಪಿಸೋಡ್‌ನಲ್ಲಿ, ಸ್ಪರ್ಧಿಗಳು ಇತರ ಸ್ಪರ್ಧಿಗಳ ಬಗ್ಗೆ ಮೂರು ಒಳ್ಳೆಯ ವಿಷಯಗಳನ್ನು ಹೇಳಬೇಕು ಎಂಬ ಟಾಸ್ಕ್ ನೀಡಲಾಯಿತು. ಈ ವೇಳೆ ಮೊದಲು ಗಿಲ್ಲಿಗೆ, ಅಶ್ವಿನಿ ಬಗ್ಗೆ ಮಾತನಾಡುವ ಅವಕಾಶ ದೊರೆಯಿತು.

ಗಿಲ್ಲಿ ಮಾತನಾಡುತ್ತಾ, “ಅಶ್ವಿನಿ ಯಾರ ಜೊತೆ ಎಷ್ಟೇ ಜಗಳ ಮಾಡಿಕೊಂಡರೂ ಊಟದ ವಿಷಯದಲ್ಲಿ ಎಲ್ಲರನ್ನೂ ಸಮಾನವಾಗಿ ನೋಡಿಕೊಳ್ಳುತ್ತಾರೆ. ಜಗಳದ ನಡುವೆಯೂ ಅಡುಗೆ ಮಾಡಿ, ಎಲ್ಲರೂ ಊಟ ಮಾಡುತ್ತಿದ್ದಾರೆ ಎಂಬುದನ್ನು ಖಚಿತಪಡಿಸುತ್ತಾರೆ” ಎಂದರು.

ಮುಂದುವರೆದು, “ಟಾಸ್ಕ್ ಸಮಯದಲ್ಲಿ ಅವರು ಜಗಳ ಮಾಡಬಹುದು, ಆದರೆ ಟಾಸ್ಕ್ ಹೊರತುಪಡಿಸಿದರೆ ಅಶ್ವಿನಿ ಬಹಳ ಒಳ್ಳೆಯವರು, ಪಾಸಿಟಿವ್ ವ್ಯಕ್ತಿ” ಎಂದು ಹೇಳಿದರು.

ಇನ್ನೂ, “ನಾನು ಅವರ ವಯಸ್ಸಿನ ಬಗ್ಗೆ ತಮಾಷೆ ಮಾಡಿದ್ದೇನೆ, ಅವರನ್ನು ಬಹಳ ಗೋಳು ಹೊಯ್ದಿದ್ದೇನೆ. ಆದರೂ ಅವರು ಎಲ್ಲವನ್ನೂ ಎದುರಿಸಿ ಟಫ್ ಕಾಂಪಿಟೇಶನ್ ನೀಡಿದ್ದಾರೆ. ಫಿಸಿಕಲ್ ಟಾಸ್ಕ್‌ಗಳಲ್ಲಿ ಅವರನ್ನು ಎದುರಿಸುವವರು ಇಲ್ಲ. ಅವರು ಬಹಳ ಗಟ್ಟಿ ಸ್ಪರ್ಧಿ” ಎಂದು ಗಿಲ್ಲಿ ಶ್ಲಾಘಿಸಿದರು.

ಇದಕ್ಕೆ ಪ್ರತಿಯಾಗಿ ಅಶ್ವಿನಿಯೂ ಗಿಲ್ಲಿ ಬಗ್ಗೆ ಹೃದಯಪೂರ್ವಕವಾಗಿ ಮಾತನಾಡಿದರು.

“ಗಿಲ್ಲಿ ನನಗೆ ಬಹಳ ಇಷ್ಟದ ಸ್ಪರ್ಧಿ. ಅವನು ತನ್ನ ಪ್ರೀತಿಯನ್ನು ಮೌನವಾಗಿ ತೋರಿಸುತ್ತಾನೆ. ಯಾರನ್ನಾದರೂ ಇಷ್ಟಪಟ್ಟರೆ ಅವರನ್ನು ಬಹಳ ಪ್ರೊಟೆಕ್ಟ್ ಮಾಡುತ್ತಾನೆ, ಅವರಿಗಾಗಿ ರಿಸ್ಕ್ ತೆಗೆದುಕೊಳ್ಳುತ್ತಾನೆ” ಎಂದರು.

ಇನ್ನೂ, “ಅವನ ಜರ್ನಿ ಬಹಳ ಕಷ್ಟದದ್ದು. ಅದನ್ನು ಹೇಳಿಕೊಂಡು ಕಣ್ಣೀರು ಹಾಕುವವನು ಅಲ್ಲ. ತನ್ನ ದುರ್ಬಲತೆಯನ್ನು ತೋರಿಸಿಕೊಳ್ಳಲು ಅವನಿಗೆ ಇಷ್ಟವಿಲ್ಲ. ಅವನ ಈ ಗುಣ ನನಗೆ ಬಹಳ ಇಷ್ಟ” ಎಂದು ಹೇಳಿದರು.

ಇಷ್ಟು ದಿನ ಜಗಳದಿಂದಲೇ ಗುರುತಿಸಿಕೊಂಡಿದ್ದ ಗಿಲ್ಲಿ–ಅಶ್ವಿನಿ, ಫಿನಾಲೆ ಹಂತದಲ್ಲಿ ಪರಸ್ಪರ ಒಳ್ಳೆಯ ಮಾತುಗಳನ್ನು ಆಡಿದ ಕ್ಷಣ ಬಿಗ್ ಬಾಸ್ ಮನೆಯಲ್ಲೊಂದು ವಿಭಿನ್ನ ಮತ್ತು ಮನಮೋಹಕ ವಾತಾವರಣವನ್ನು ಸೃಷ್ಟಿಸಿತು.

Join WhatsApp

Join Now

RELATED POSTS

1 thought on “ಬಿಗ್ ಬಾಸ್ ಮನೆಯಲ್ಲಿ ಅಪರೂಪದ ಕ್ಷಣ: ಪರಸ್ಪರ ಶ್ಲಾಘಿಸಿದ ಗಿಲ್ಲಿ–ಅಶ್ವಿನಿ”

Comments are closed.