ಬಿಗ್‌ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಟಾಸ್ಕ್‌ಗಳ ರಂಗು ಜೋರಾಗಿದೆ. ಫಿನಾಲೆ ಟಿಕೆಟ್‌ಗಾಗಿ ನಡೆಯುವ ಮೊದಲ ಸವಾಲಿನಲ್ಲಿ ಧ್ರುವಂತ್ ಮತ್ತು ಗಿಲ್ಲಿ ನಟ ಮುಖಾಮುಖಿಯಾಗಿದ್ದಾರೆ.
ಇದನ್ನು ಓದಿ: ನಿಮ್ಮ ಮಕ್ಕಳಿಗೆ ದುಡ್ಡಿನ ಬೆಲೆ ಗೊತ್ತಾಗಬೇಕಾ ಈ ತಂದೆ ಮಾಡಿದ ಎಕ್ಸ್ಪೆರಿಮೆಂಟ್ ಮಾಡಿ ನೋಡಿ ಕೆಲಸಕ್ಕೆ ಬರುತ್ತೆ ..!
ಬಿಗ್‌ಬಾಸ್ ನೀಡಿದ ಅವಕಾಶದಂತೆ, ಸ್ಪರ್ಧಿಯೇ ತನ್ನ ಎದುರಾಳಿಯನ್ನು ಆಯ್ಕೆ ಮಾಡಬೇಕಿದ್ದು, ಈ ಅವಕಾಶ ಬಳಸಿಕೊಂಡ ಧ್ರುವಂತ್ ತಮ್ಮ ಪ್ರತಿಸ್ಪರ್ಧಿಯಾಗಿ ಗಿಲ್ಲಿ ನಟರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಧ್ರುವಂತ್–ಗಿಲ್ಲಿ ನಡುವಿನ ಆಟದ ಆರಂಭದ ದೃಶ್ಯಗಳು ಕಾಣಿಸುತ್ತವೆ. ಗಿಲ್ಲಿ ನಟರನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡ ಕಾರಣವನ್ನು ವಿವರಿಸಿದ ಧ್ರುವಂತ್, “ಕಾಮಿಡಿ ಹೊರತುಪಡಿಸಿ ಟಾಸ್ಕ್‌ಗಳಲ್ಲಿ ಅವರು ಶೂನ್ಯ. ಆಟದ ನಿರ್ಧಾರಗಳು ಹಾಗೂ ಹೊಣೆಗಾರಿಕೆಯಲ್ಲಿ ಅವರ ಪಾತ್ರ ಕಾಣಿಸುವುದಿಲ್ಲ” ಎಂದು ಹೇಳಿದ್ದಾರೆ.
ಈ ಟಾಸ್ಕ್‌ನಲ್ಲಿ ಸೋಲುವ ಸ್ಪರ್ಧಿ ಫಿನಾಲೆ ಟಿಕೆಟ್‌ಗೆ ಸಂಬಂಧಿಸಿದ ಮುಂದಿನ ಆಟದಿಂದ ಹೊರಗುಳಿಯಬೇಕಾಗುತ್ತದೆ. ಹೀಗಾಗಿ ಈ ಸವಾಲು ಧ್ರುವಂತ್ ಹಾಗೂ ಗಿಲ್ಲಿ ನಟ ಇಬ್ಬರಿಗೂ ಅತ್ಯಂತ ನಿರ್ಣಾಯಕವಾಗಿದೆ. ಆದರೆ ಪ್ರೋಮೋದಲ್ಲಿ ಯಾರು ಗೆದ್ದಿದ್ದಾರೆ ಎಂಬುದನ್ನು ಬಿಚ್ಚಿಡಲಾಗಿಲ್ಲ. ಇತ್ತ ಸೋಮವಾರ ಸೋಶಿಯಲ್ ಮೀಡಿಯಾದಲ್ಲಿ ಧ್ರುವಂತ್ ಮತ್ತು ಗಿಲ್ಲಿ ನಟ ನಡುವಿನ ಮೊದಲ ಟಾಸ್ಕ್ ಕುರಿತು ಮಾಹಿತಿ ಲೀಕ್ ಆಗಿತ್ತು. ಆ ಆಟದಲ್ಲಿ ಧ್ರುವಂತ್ ಗೆಲುವು ಸಾಧಿಸಿ, ಫಿನಾಲೆ ಟಿಕೆಟ್‌ಗೆ ನಡೆಯುವ ಮುಂದಿನ ಟಾಸ್ಕ್‌ಗೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇದರಿಂದ ಮತ್ತೆ “ಗಿಲ್ಲಿಗೆ ಟಾಸ್ಕ್ ಆಡಲು ಬರಲ್ಲ” ಎಂಬ ಆರೋಪಗಳು ಎದುರಾಗಿವೆ.
ಈ ಸುದ್ದಿ ತಿಳಿದ ಗಿಲ್ಲಿ ನಟ ಅಭಿಮಾನಿಗಳು, “Ticket to Top 6 ಕೈ ತಪ್ಪಿರಬಹುದು, ಆದರೆ ಕಪ್ ನಮ್ಮದೇ” ಎಂದು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ.
ಇಂದಿನ ಪ್ರೋಮೋದಲ್ಲಿ ಧ್ರುವಂತ್‌ಗೆ ಅಶ್ವಿನಿ ಗೌಡ ಮಾತ್ರ ಬೆಂಬಲ ನೀಡಿದಂತೆ ಕಾಣಿಸಿಕೊಂಡಿದೆ. ಬಿಗ್‌ಬಾಸ್ ಮನೆಯಲ್ಲಿ ಧ್ರುವಂತ್ ಮತ್ತು ಅಶ್ವಿನಿ ಒಟ್ಟಾಗಿ ನಿಂತರೆ, ಉಳಿದ ಸ್ಪರ್ಧಿಗಳು ಒಂದೇ ತಂಡದಂತೆ ಕಾಣಿಸುತ್ತಿದ್ದಾರೆ. ಧನುಷ್ ಹೊರತುಪಡಿಸಿ ಇತರ ಎಲ್ಲರೂ ಈ ವಾರ ನಾಮಿನೇಷನ್‌ನಲ್ಲಿ ಇದ್ದಾರೆ






