---Advertisement---

ಬೀದರ್: ಕಬ್ಬಿನ ದರ ಟನ್‌ಗೆ ₹3150 ನಿಗದಿ

On: January 2, 2026 12:44 PM
Follow Us:
---Advertisement---

ಬೀದರ್ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಸಂತಸದ ಸುದ್ದಿ ಸಿಕ್ಕಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬಿನ ಬೆಲೆಯನ್ನು ಟನ್‌ಗೆ ₹3150 ಎಂದು ನಿಗದಿ ಮಾಡಲಾಗಿದೆ ಎಂದು ಭಾಲ್ಕಿ ತಾಲೂಕಿನ ಬಾಜೋಳಾಗ ಸಮೀಪದ ಗೌರಿ ಸಕ್ಕರೆ ಖಾರ್ಖಾನೆ ಡಿಸ್ಟ್ಲರಿ ಖಾರ್ಖಾನೆಯ ಮಾಲೀಕ ಬಾಬುರಾವ್ ಬೋತ್ರೆ ತಿಳಿಸಿದ್ದಾರೆ.

ಇದನ್ನು ಓದಿ: ಸಮಸ್ಯೆ ಬಗೆ ಹರಿಸದೆ ಹೋದರೆ ವಿಷ ಕುಡಿದು ಸಾಯುತ್ತೇನೆ ಎಂದು ತಹಸೀಹಲ್ದಾರ್ ಕಚೇರಿ ಮುಂದೆ ರೈತ ಪ್ರತಿಭಟನೆ Bidar Farmer Threatens Suicide Over Compensation

ಗೌರಿ ಶುಗರ್ ಮತ್ತು ಡಿಸ್ಟಿಲರಿ ಕಾರ್ಖಾನೆಯು ಈ ದರವನ್ನು ಘೋಷಿಸಿದ್ದು, ಕಬ್ಬು ಬೆಳೆಗಾರರು ಮತ್ತು ಕಾರ್ಖಾನೆ ಆಡಳಿತದ ನಡುವಿನ ಚರ್ಚೆಯ ನಂತರ ಈ ನಿರ್ಧಾರ ಕೈಗೊಳ್ಳಲಾಗಿದೆ. ಕಬ್ಬು ಬೆಳೆಯ ಖರ್ಚು, ಉತ್ಪಾದನಾ ವೆಚ್ಚ ಮತ್ತು ರೈತರ ಒತ್ತಾಯಗಳನ್ನು ಪರಿಗಣಿಸಿ ಈ ದರ ನಿಗದಿಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಕಾರ್ಖಾನೆಯ ನಿರ್ಧಾರ ಪ್ರಕಾರ:

✔️ ಪ್ರಾರಂಭಿಕ ಹಂತದಲ್ಲಿ ರೈತರಿಗೆ ಪ್ರತಿ ಟನ್‌ಗೆ ₹2,900 ತಪ್ಪದೇ ಪಾವತಿಸಲಾಗುತ್ತದೆ.

✔️ ದೀಪಾವಳಿಗೆ 100 ರೂಪಾಯಿ ಸಂದಾಯ ಹಾಗೂ ರಾಜ್ಯ ಸರ್ಕಾರದಿಂದ ₹50 ಪ್ರೋತ್ಸಾಹಧನ ಸೇರಿಸಿ ಒಟ್ಟು ₹3,050 ತಲುಪುತ್ತದೆ.

✔️ ಏಪ್ರಿಲ್ ನಂತರ ಪೂರೈಸಿದ ಕಬ್ಬಿಗೆ ಮತ್ತಷ್ಟು ₹100 ಹೆಚ್ಚಾಗಿ ₹3,150 ನೀಡಿ ಪಾವತಿಸಲಾಗುತ್ತದೆ

ಕಾರ್ಖಾನೆ ಪ್ರಧಾನ ವ್ಯವಸ್ಥಾಪಕ ಮಹಾವೀರ್ ಘೋಡ್ಕೆ ಹೇಳಿದರು, “ಕಾರ್ಖಾನೆಯಲ್ಲಿನ ತೂಕ, ಪಾವತಿ ಮತ್ತು ಎಲ್ಲ ವ್ಯವಸ್ಥೆಯೂ ಪಾರದರ್ಶಕವಾಗಿದೆ. ರೈತರು ಸಮಯಕ್ಕೆ ಕಬ್ಬು ಪೂರೈಸಿ ಸಹಕರಿಸಬೇಕು” ಎಂದು ಮನವಿ ಮಾಡಿದ್ದಾರೆ. 

Join WhatsApp

Join Now

RELATED POSTS