---Advertisement---

BIDAR: ‘ಲೋಟಸ್ ಸ್ಪಾ’ ಮೇಲೆ ಪೊಲೀಸ್ ದಾಳಿ: ಐವರು ಯುವತಿಯರ ರಕ್ಷಣೆ, ಇಬ್ಬರು ಬಂಧನ

On: February 14, 2026 4:23 PM
Follow Us:
---Advertisement---

ಮಹಾರಾಷ್ಟ್ರದಿಂದ ಇಬ್ಬರು ಯುವತಿಯರು ಹಾಗೂ ಅಸ್ಸಾಂ, ಹರಿಯಾಣ ಮತ್ತು ಮಧ್ಯಪ್ರದೇಶ ರಾಜ್ಯಗಳಿಂದ ತಲಾ ಒಬ್ಬ ಯುವತಿ ಇಲ್ಲಿ ತರಲಾಗಿದ್ದರು. ಶಿವನಗರ ಸಿಗ್ನಲ್ ಸಮೀಪ ಕಾರ್ಯನಿರ್ವಹಿಸುತ್ತಿದ್ದ ‘ಲೋಟಸ್ ಸ್ಪಾ’ ಕೇಂದ್ರದ ಮೇಲೆ ಶನಿವಾರ ಪೊಲೀಸರು ದಾಳಿ ನಡೆಸಿ, ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದ ಐವರು ಯುವತಿಯರನ್ನು ರಕ್ಷಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಬಂಧಿತರನ್ನು ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಬೆಳಮಗಿಯ ಕರಣ್ ಮತ್ತು ಕಲಬುರಗಿ ತಾಲ್ಲೂಕಿನ ಕಾಳಗಿಯ ಸಂದೀಪ್ ಎಂದು ಗುರುತಿಸಲಾಗಿದೆ. ಕರಣ್ ಸ್ಪಾ ಮಾಲೀಕರಾಗಿದ್ದು, ತನ್ನ ಹೆಸರಿನಲ್ಲಿ ನೋಂದಣಿ ಮಾಡಿಸಿಕೊಂಡು ಸ್ಪಾವನ್ನು ನಡೆಸುತ್ತಿದ್ದನು. ಆದರೆ ಅನ್ಯ ರಾಜ್ಯಗಳ ಯುವತಿಯರನ್ನು ಕರೆತಂದು ಅಕ್ರಮ ಚಟುವಟಿಕೆ ನಡೆಸುತ್ತಿದ್ದನೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಮಾಹಿತಿ ನೀಡಿದ್ದಾರೆ.

ಇದನ್ನು ಓದಿ: ಬೀದರ್: ಕಬ್ಬಿನ ದರ ಟನ್‌ಗೆ ₹3150 ನಿಗದಿ

ಇದನ್ನು ಓದಿ: ಬೀದರ್: ಮದುವೆಯಾದ ಮಹಿಳೆ ಹುಡುಕಿಕೊಂಡು ಬಂದ ಮಹಾರಾಷ್ಟ್ರ ಯುವಕನನ್ನು ಕಂಬಕ್ಕೆ ಕಟ್ಟಿ ಬರ್ಬರ ಹಲ್ಲೆ ಮಾಡಿ ಕೊಲೆ!!

ಇದನ್ನು ಓದಿ: ಬಸವಣ್ಣ ‘ಲಿಂಗಾಯತ ಧರ್ಮ’ ಸ್ಥಾಪನೆ ಮಾಡಿದ್ದಾರೆಂಬ ಯಾವುದೇ ದಾಖಲೆ ಇಲ್ಲ: ಶಾಸಕ ಯತ್ನಾಳ್

ಸೆನ್ ಠಾಣೆಯ ಡಿವೈಎಸ್ಪಿ ಎಸ್.ಎನ್. ಸನದಿ, ನೂತನ ನಗರ ಠಾಣೆಯ ಪಿಐ ವಿಜಯಕುಮಾರ್, ಬೀದರ್ ಜಿಲ್ಲಾ ವಿಶೇಷ ಘಟಕ ಹಾಗೂ ಮಹಿಳಾ ಸಿಬ್ಬಂದಿ ತಂಡದ ಜಂಟಿ ಕಾರ್ಯಾಚರಣೆಯಿಂದ ಈ ದಾಳಿ ಯಶಸ್ವಿಯಾಗಿದೆ. ವೇಶ್ಯಾವಾಟಿಕೆಗೆ ದೂಡಲ್ಪಟ್ಟಿದ್ದ ಯುವತಿಯರನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿರುವ ಅಧಿಕಾರಿಗಳ ಕಾರ್ಯವನ್ನು ಮೇಲಾಧಿಕಾರಿಗಳು ಮೆಚ್ಚಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment