---Advertisement---

21 ವರ್ಷದ ಬೆಂಗಳೂರು ವಿದ್ಯಾರ್ಥಿ ಎಡ್ವರ್ಡ್‌ಗೆ 2.5 ಕೋಟಿ ರೂ ಸಂಬಳದ ಉದ್ಯೋಗ ಆಫರ್

On: January 2, 2026 7:55 AM
Follow Us:
---Advertisement---

ಹೈದರಾಬಾದ್, ಜನವರಿ 2: ಐಐಟಿ ಹೈದರಾಬಾದ್‌ನಲ್ಲಿ ಕೊನೆಯ ವರ್ಷದ ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ 21 ವರ್ಷದ ಎಡ್ವರ್ಡ್ ನೇತನ್ ವರ್ಗೀಸ್‌ಗೆ ದಾಖಲೆ ಮಟ್ಟದ ಸಂಬಳದ ಉದ್ಯೋಗ ಆಫರ್ ಲಭಿಸಿದೆ. ನೆದರ್‌ಲ್ಯಾಂಡ್ಸ್ ಮೂಲದ ಜಾಗತಿಕ ಟ್ರೇಡಿಂಗ್ ಸಂಸ್ಥೆಯಾದ ಆಪ್ಟಿವರ್ (Optiver) ಕಂಪನಿ ಎಡ್ವರ್ಡ್‌ಗೆ ವರ್ಷಕ್ಕೆ 2.5 ಕೋಟಿ ರೂ ಪ್ಯಾಕೇಜ್ ಆಫರ್ ಮಾಡಿದೆ.

ಇದನ್ನು ಓದಿ: ಸಲ್ಲಿಂಗ ಪ್ರೇಮದ ಮದದಲ್ಲಿ ತಾಯಿಯ ಕ್ರೂರ ಕೃತ್ಯ!! 5 ತಿಂಗಳ ಶಿಶು ಉಸಿರುಗಟ್ಟಿದ ಕೊಂದ ಮಹಿಳೆ…

ಐಐಟಿ ಹೈದರಾಬಾದ್‌ನಲ್ಲಿ 2008ರಲ್ಲಿ ಸಂಸ್ಥೆ ಸ್ಥಾಪನೆಯಾದ ಬಳಿಕ, ಕ್ಯಾಂಪಸ್ ಪ್ಲೇಸ್ಮೆಂಟ್ ಮೂಲಕ ಇಷ್ಟೊಂದು ಭಾರೀ ಸಂಬಳ ಪಡೆದ ಮೊದಲ ವಿದ್ಯಾರ್ಥಿಯಾಗಿರುವ ದಾಖಲೆ ಎಡ್ವರ್ಡ್ ಅವರದ್ದಾಗಿದೆ. ವಿಶೇಷವೆಂದರೆ, ಈ ಪ್ಲೇಸ್ಮೆಂಟ್ ಪ್ರಕ್ರಿಯೆಯಲ್ಲಿ ಎಡ್ವರ್ಡ್ ಸಂದರ್ಶನ ಎದುರಿಸಿದ ಏಕೈಕ ಕಂಪನಿಯೂ ಆಪ್ಟಿವರ್ ಆಗಿತ್ತು.

ಎಡ್ವರ್ಡ್ ನೇತನ್ ವರ್ಗೀಸ್ ಹಾಗೂ ಐಐಟಿ ಹೈದರಾಬಾದ್‌ನ ಮತ್ತೊಬ್ಬ ವಿದ್ಯಾರ್ಥಿ, ಆಪ್ಟಿವರ್ ಕಂಪನಿಯ ಎರಡು ತಿಂಗಳ ಇಂಟರ್ನ್‌ಶಿಪ್‌ಗೆ ಆಯ್ಕೆಯಾಗಿದ್ದರು. ಇಂಟರ್ನ್‌ಶಿಪ್ ಅವಧಿಯಲ್ಲಿ ತೋರಿದ ಸಾಧನೆಯಿಂದ ಪ್ರಭಾವಿತರಾದ ಕಂಪನಿ, ಎಡ್ವರ್ಡ್ ಅವರನ್ನು ಪೂರ್ಣಕಾಲಿಕ ಉದ್ಯೋಗಕ್ಕೆ ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಜುಲೈ ತಿಂಗಳಲ್ಲಿ ಅವರು ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಆಪ್ಟಿವರ್ ಸಂಸ್ಥೆಯನ್ನು ಸೇರಲಿದ್ದಾರೆ.

ಮೂಲತಃ ಹೈದರಾಬಾದ್‌ನವರಾದ ಎಡ್ವರ್ಡ್, ಏಳನೇ ತರಗತಿಯಿಂದ 12ನೇ ತರಗತಿಯವರೆಗೆ ಬೆಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. 2022ರಲ್ಲಿ ಜೆಇಇ ಮೇನ್ ಪರೀಕ್ಷೆಯಲ್ಲಿ 1,100ನೇ ರ್ಯಾಂಕ್ ಹಾಗೂ ಜೆಇಇ ಅಡ್ವಾನ್ಸ್ಡ್‌ನಲ್ಲಿ 558ನೇ ರ್ಯಾಂಕ್ ಪಡೆದಿದ್ದರು. ಅಲ್ಲದೆ, 2025ರಲ್ಲಿ ನಡೆದ ಕ್ಯಾಟ್ ಪರೀಕ್ಷೆಯಲ್ಲಿ ಶೇ. 99.96 ಪರ್ಸೆಂಟೈಲ್ ಗಳಿಸಿ, 120ನೇ ರ್ಯಾಂಕ್ ಪಡೆದಿದ್ದಾರೆ.

Join WhatsApp

Join Now

RELATED POSTS