ಬೀದರ್, ಆಗಸ್ಟ್ 5, 2025 – ಖ್ಯಾತ ಉದ್ಯಮಿ ಮತ್ತು ಸಮಾಜಸೇವಕ ಬಸವರಾಜ ಧನ್ನೂರ ಅವರಿಗೆ ಈ ವರ್ಷದ ‘ಬಸವ ಪುರಸ್ಕಾರ 2025’ ಪ್ರದಾನವಾಗಲಿದೆ ಎಂದು ಬೆಂಗಳೂರಿನ ಬಸವ ಪರಿಷತ್ ಪ್ರಕಟಿಸಿದೆ. ಈ ಪುರಸ್ಕಾರವು ಆಗಸ್ಟ್ 9ರಂದು ಬೆಂಗಳೂರಿನ ಕೊಂಡಜ್ಜಿ ಸಭಾಂಗಣದಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಅವರ ಕೈಗೆ ನೀಡಲಾಗುವುದು.
ಬಸವರಾಜ ಧನ್ನೂರ ಅವರು ಬೀದರ್ ಜಿಲ್ಲೆಗೆ ಸೇರಿದವರು. ಅವರು ಕೇವಲ ಉದ್ಯಮ ಕ್ಷೇತ್ರದಲ್ಲೇ ಅಲ್ಲ, ಸಮಾಜ ಸೇವೆಯಲ್ಲಿಯೂ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಬಸವಪ್ರಸಾದ್ ಇಂಡಸ್ಟ್ರೀಸ್‌ನ ಮಾಲೀಕರಾಗಿರುವ ಧನ್ನೂರ ಅವರು, ಅತ್ಯಂತ ಚಿಕ್ಕ ವಯಸ್ಸಿನಿಂದಲೇ ಉದ್ಯಮ ಕ್ಷೇತ್ರದಲ್ಲಿ ಪಾದಾರ್ಪಣೆ ಮಾಡಿ, ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ‘ಕಾಯಕವೇ ಕೈಲಾಸ’ ತತ್ವದ ಜೀವಂತ ಉದಾಹರಣೆಯಾಗಿದ್ದು, ಸಮಾಜ ಸೇವೆಯೇ ಜೀವನದ ಭಾಗವೆಂದು ನಂಬುವವರು.
ಬಸವರಾಜ ಧನ್ನೂರ ಅವರ ವಿವಿಧ ಹೊಣೆಗಾರಿಕೆಗಳು:
• ಜಾಗತಿಕ ಲಿಂಗಾಯತ ಮಹಾಸಭಾದ ಕೇಂದ್ರ ಸಮಿತಿಯ ಉಪಾಧ್ಯಕ್ಷರು
• ಬಸವ ಕಾಯಾಕ ಫೌಂಡೇಶನ್ ಅಧ್ಯಕ್ಷರು
• ಬೀದರ್ ಗಾಂಧಿ ಗಂಜ್ ಗ್ರೀನ್ ಅಂಡ್ ಸೀಡ್ಸ್ ಮರ್ಚೆಂಟ್ ಅಸೋಸಿಯೇಷನ್ ಅಧ್ಯಕ್ಷರು
• ದಾಲಮಿಲ್ ಓನರ್ಸ್ ಅಸೋಸಿಯೇಷನ್ ಕಾರ್ಯದರ್ಶಿ
• ಇಂಟರ್‌ನ್ಯಾಷನಲ್ ರೋಟರಿ ಕ್ಲಬ್ ಇಮೇಜ್ (ಜಿಲ್ಲಾ) ಅಧ್ಯಕ್ಷರು
ಈ ಪ್ರಶಸ್ತಿಯ ಕುರಿತು ಮಾತನಾಡಿದ ಧನ್ನೂರ ಅವರು, “ಇದು ಕೇವಲ ಗೌರವವಲ್ಲ; ನನ್ನ ಸಾಮಾಜಿಕ ಕಾಳಜಿಗೆ ಹೊಸ ಉತ್ಸಾಹ ನೀಡುವ ಪದಕವಾಗಿದೆ. ಮುಂದೆ ಮತ್ತಷ್ಟು ಜವಾಬ್ದಾರಿಯಿಂದ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಈ ಪುರಸ್ಕಾರ ಹತ್ತಿರ ತರುವ ಶಕ್ತಿಯಾಗಿದೆ” ಎಂದು ಭಾವನೆ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಈ ಸುದ್ದಿಗೆ ಹರ್ಷ ವ್ಯಕ್ತವಾಗಿದ್ದು, ವಿವಿಧ ವಲಯಗಳಿಂದ ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.
ಇದನ್ನು ಓದಿ ; ಜಿಲ್ಲೆಯಲ್ಲಿ ಕೈಗಾರಿಕಾ ಸ್ಥಾಪನೆಗೆ ಉದ್ಯಮಗಳಿಗೆ ಎಲ್ಲ ರೀತಿಯ ಸಹಾಯ ಸೌಕರ್ಯ ಸಚಿವ
1 thought on “ಬಸವ ಪುರಸ್ಕಾರಕ್ಕೆ ಬಸವರಾಜ ಧನ್ನೂರ ಆಯ್ಕೆ Basavaraj Dhannur selected for Basava Award”