---Advertisement---

ಬಜಾಜ್ ಫ್ರೀಡಂ 125 ವಿಶ್ವದ ಪ್ರಪಥಮ ಸಿಎನ್‌ಜಿ ಕೇವಲ ಮೋಟಾರ್‌ಸೈಕಲ್‌ Bajaj Freedom 125 – World’s first CNG bike

On: August 26, 2025 5:46 PM
Follow Us:
ಬಜಾಜ್ ಫ್ರೀಡಂ 125 ವಿಶ್ವದ ಪ್ರಪಥಮ ಸಿಎನ್‌ಜಿ  ಮೋಟಾರ್‌ಸೈಕಲ್‌
---Advertisement---

ಬಜಾಜ್ ಫ್ರೀಡಂ 125 ವಿಶ್ವದ ಪ್ರಪಥಮ ಸಿಎನ್‌ಜಿ  ಮೋಟಾರ್‌ಸೈಕಲ್‌ ಎಂದೇ ಜನಪ್ರಿಯ ಆಗಿದೇ. ಹತ್ತಾರು ವೈಶಿಷ್ಟ್ಯಗಳೊಂದಿಗೆ ಸುಂದರ ವಿನ್ಯಾಸ ಹೊಂದಿರುವ ಈ ಬೈಕ್‌ ನಿಮ್ಮ ದಿನನಿತ್ಯದ ಅಗತ್ಯಗಳಿಗೆ ಸೂಕ್ತವಾಗಿದೆ. ನೀವು ಪ್ರತಿದಿನದ ಓಡಾಟವನ್ನು ಸುಲಭಗೊಳಿಸಲು ಹೊಸ ಬೈಕ್ ಖರೀದಿ ಮಾಡುವ ಯೋಚನೆ ಮಾಡಿದಿರಾ?

‘ಫ್ರೀಡಂ 125’ ನಿಮ್ಮಗೇ ಅತ್ಯುತ್ತಮ ಆಯ್ಕೆಯಾಗಿ ಪರಿಣಮಿಸುತ್ತದೆ. ಇದರ ಬೆಲೆ, ವಿನ್ಯಾಸ, ಕಾರ್ಯಕ್ಷಮತೆ ಮತ್ತು ವೈಶಿಷ್ಟ್ಯಗಳ ಸಂಪೂರ್ಣ ವಿವರವನ್ನು ನಾವು ಇಲ್ಲಿ ಹಂಚಿಕೊಂಡಿದ್ದೇವೆ.

ಬಜಾಜ್ ಫ್ರೀಡಂ 125 ಬೆಲೆ

ಬಜಾಜ್ ಬಿಡುಗಡೆ ಮಾಡಿದ ಹೊಸ ಫ್ರೀಡಂ 125 ಬೈಕ್ ಅಗ್ಗದ ಬೆಲೆಯಲ್ಲಿಯೇ ದೊರೆಯುವುದರಿಂದ, ಮಧ್ಯಮ ವರ್ಗದ ಗ್ರಾಹಕರಿಗೂ ಖರೀದಿ ಮಾಡಲು ಅನುಕೂಲವಾಗಿದೆ. ಇದರ ಬೆಲೆ ರೂ.90,976ರಿಂದ ರೂ.1.11 ಲಕ್ಷದವರೆಗೆ ಇರಲಿದೆ. ಇದನ್ನು ಡ್ರಮ್, ಡ್ರಮ್ ಎಲ್‌ಇಡಿ ಮತ್ತು ಡಿಸ್ಕ್ ಎಲ್‌ಇಡಿ ಎಂಬ ಮೂರು ರೂಪಾಂತರಗಳಲ್ಲಿ ಪಡೆಯಬಹುದು.

ಬಜಾಜ್ ಫ್ರೀಡಂ 125 ವಿನ್ಯಾಸ & ಬಣ್ಣಗಳು

ಈ ಮೋಟಾರ್‌ಸೈಕಲ್‌ ಆಕರ್ಷಕವಾಗಿ ಕಾಣುತ್ತಿದ್ದು, ಎಲ್ಲರ ದೃಷ್ಟಿಯನ್ನು ಸೆಳೆಯುವಂತಿದೆ. ಇದರಲ್ಲಿ ರೌಂಡ್ ಎಲ್‌ಇಡಿ ಹೆಡ್‌ಲೈಟ್ ಹಾಗೂ ಒಟ್ಟೊಂದು ಸೀಟ್ ವಿನ್ಯಾಸವಿದೆ. ಜೊತೆಗೆ ರೇಸಿಂಗ್ ರೆಡ್, ಸೈಬರ್ ವೈಟ್, ಎಬೊನಿ ಬ್ಲ್ಯಾಕ್, ಪ್ಯೂಟರ್ ಗ್ರೇ, ಕೆರಿಬಿಯನ್ ಬ್ಲೂ, ಎಬೊನಿ ಬ್ಲ್ಯಾಕ್-ಗ್ರೇ ಮತ್ತು ಪ್ಯೂಟರ್ ಗ್ರೇ-ಯೆಲ್ಲೋ ಬಣ್ಣಗಳ ಆಯ್ಕೆಯೂ ಲಭ್ಯ.

ಬಜಾಜ್ ಫ್ರೀಡಂ 125 ಸುತ್ತಳತೆ

ಈ ಬೈಕ್ ಸ್ವಲ್ಪ ದೊಡ್ಡ ಗಾತ್ರದಲ್ಲಿದ್ದು, 170 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಹಾಗೂ 1340 ಎಂಎಂ ವೀಲ್‌ಬೇಸ್ ಹೊಂದಿದೆ. ಇದರ ಒಟ್ಟು ತೂಕ 147.8 ಕೆಜಿ. ಜೊತೆಗೆ ತಲಾ 2 ಲೀಟರ್/ಕೆಜಿ ಸಾಮರ್ಥ್ಯದ ಪೆಟ್ರೋಲ್ ಮತ್ತು ಸಿಎನ್‌ಜಿ ಫ್ಯುಯೆಲ್ ಟ್ಯಾಂಕ್ ಸೌಲಭ್ಯವಿದೆ.

ಫ್ರೀಡಂ 125 ಶಕ್ತಿಶಾಲಿ ಪವರ್‌ಟ್ರೇನ್‌ನೊಂದಿಗೆ ಬಂದಿದೆ. ಇದರಲ್ಲಿ 124.58 ಸಿಸಿ ಸಾಮರ್ಥ್ಯದ 4-ಸ್ಟೋಕ್, ಏರ್-ಕೂಲ್ಡ್, ಸಿಂಗಲ್-ಸಿಲಿಂಡರ್ ಪೆಟ್ರೋಲ್/ಸಿಎನ್‌ಜಿ ಎಂಜಿನ್ ಅಳವಡಿಸಲಾಗಿದೆ. ಇದು 8000 ಆರ್‌ಪಿಎಂನಲ್ಲಿ 9.5 ಬಿಹೆಚ್‌ಪಿ ಶಕ್ತಿ ಹಾಗೂ 5000 ಆರ್‌ಪಿಎಂನಲ್ಲಿ 9.7 ಎನ್‌ಎಂ ಪೀಕ್ ಟಾರ್ಕ್ ಉತ್ಪಾದಿಸುತ್ತದೆ. ಜೊತೆಗೆ 5-ಸ್ಪೀಡ್ ಗೇರ್‌ಬಾಕ್ಸ್‌ನ್ನು ಒಳಗೊಂಡಿದೆ.

ಬಜಾಜ್ ಫ್ರೀಡಂ 125 ಮೈಲೇಜ್‌:

ಈ ಬೈಕ್‌ನ ಮೈಲೇಜ್‌ ಕೂಡ ಗಮನಾರ್ಹವಾಗಿದೆ. ಒಂದೇ ಬಾರಿ ತುಂಬಿದ ಇಂಧನದಲ್ಲಿ ಸುಮಾರು 330 ಕಿ.ಮೀ ವರೆಗೆ ಓಡುತ್ತದೆ. ಗರಿಷ್ಠ ವೇಗ 90 ಕೆಎಂಪಿಹೆಚ್ ಆಗಿದ್ದು, ಕೇವಲ 7.85 ಸೆಕೆಂಡುಗಳಲ್ಲಿ 0 ರಿಂದ 60 ಕೆಎಂಪಿಹೆಚ್ ವೇಗ ತಲುಪುತ್ತದೆ.

ಬಜಾಜ್ ಫ್ರೀಡಂ 125 ವೈಶಿಷ್ಟ್ಯಗಳು (Features)

ಹೊಸ ಬಜಾಜ್ ಫ್ರೀಡಂ 125ನಲ್ಲಿ ಸಂಪೂರ್ಣ ಎಲ್‌ಸಿಡಿ ಇನ್ಸ್ಟ್ರುಮೆಂಟ್ ಕ್ಲಸ್ಟರ್ ನೀಡಲಾಗಿದೆ. ಇದರಲ್ಲಿ ವಾಹನದ ವೇಗ, ನೈಜ ಕಾಲದ ಮೈಲೇಜ್ ಹಾಗೂ ಗೇರ್ ಇಂಡಿಕೇಟರ್ ವಿವರಗಳನ್ನು ಕಾಣಬಹುದು. ಜೊತೆಗೆ ಬ್ಲೂಟೂತ್ ಕನೆಕ್ಟಿವಿಟಿ ಹಾಗೂ ಮೊಬೈಲ್ ಚಾರ್ಜ್ ಮಾಡಲು ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಸೇರಿದಂತೆ ಹಲವು ಉಪಯುಕ್ತ ವೈಶಿಷ್ಟ್ಯಗಳನ್ನು ಹೊಂದಿದೆ.

ಈ ಬೈಕ್ ಸವಾರರಿಗೆ ಉತ್ತಮ ಮಟ್ಟದ ಭದ್ರತೆ ನೀಡುತ್ತದೆ. ಮುಂಭಾಗದಲ್ಲಿ ಟೆಲಿಸ್ಕೋಪಿಕ್ ಫೋರ್ಕ್ ಹಾಗೂ ಹಿಂಭಾಗದಲ್ಲಿ ಲಿಂಕ್ಡ್ ಮೊನೊಶಾಕ್ ಸಸ್ಪೆನ್ಷನ್ ವ್ಯವಸ್ಥೆ ಇದೆ. ರೂಪಾಂತರಕ್ಕೆ ಅನುಗುಣವಾಗಿ ಡ್ರಮ್ ಅಥವಾ ಡಿಸ್ಕ್ ಬ್ರೇಕ್ ಆಯ್ಕೆಯೂ ದೊರೆಯುತ್ತದೆ.

ಹೊಸ ‘ಬಜಾಜ್ ಫ್ರೀಡಂ 125’ಗೆ ಹೋಂಡಾ ಎಸ್‌ಪಿ 125, ಹೋಂಡಾ ಶೈನ್ 125 ಮತ್ತು ಹೀರೋ ಸೂಪರ್ ಸ್ಪ್ಲೆಂಡರ್ ಬೈಕ್‌ಗಳು ಬಲಿಷ್ಠ ಪೈಪೋಟಿದಾರರಾಗಿವೆ. ಆದರೂ ಫ್ರೀಡಂ 125 ಹೆಚ್ಚು ನವೀನ, ಆಧುನಿಕ ಹಾಗೂ ದಿನನಿತ್ಯದ ಬಳಕೆಗಾಗಿ ಅತ್ಯಂತ ಅನುಕೂಲಕರವಾಗಿದೆ. ಈ ಕಾರಣದಿಂದ ಗ್ರಾಹಕರು ಇದನ್ನು ಉತ್ಸಾಹದಿಂದ ಖರೀದಿಸುತ್ತಿದ್ದಾರೆ ಎಂದು ಹೇಳಬಹುದು.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

1 thought on “ಬಜಾಜ್ ಫ್ರೀಡಂ 125 ವಿಶ್ವದ ಪ್ರಪಥಮ ಸಿಎನ್‌ಜಿ ಕೇವಲ ಮೋಟಾರ್‌ಸೈಕಲ್‌ Bajaj Freedom 125 – World’s first CNG bike”

Leave a Comment