---Advertisement---

ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರವಣಿಗೆ ಬರಲ್ಲವೇ?ಟ್ರೋಲ್‌ಗೆ ಗುರಿಯಾದ ಅಶ್ವಿನಿ ಗೌಡ

On: January 13, 2026 8:57 AM
Follow Us:
---Advertisement---

ಬಿಗ್‌ಬಾಸ್‌ ಕನ್ನಡದ ಸೋಮವಾರದ ಎಪಿಸೋಡ್‌ನಲ್ಲಿ ಫಿನಾಲೆ ವೀಕ್‌ಗೆ ಪ್ರವೇಶಿಸಿದ ಸ್ಪರ್ಧಿಗಳಿಗೆ ವಿಶೇಷ ಟಾಸ್ಕ್‌ ನೀಡಲಾಗಿತ್ತು. ಈ ಟಾಸ್ಕ್‌ನಲ್ಲಿ ಸ್ಪರ್ಧಿಗಳು ತಮ್ಮ ಆಟಕ್ಕೆ ತಕ್ಕಂತೆ ಸೋಶಿಯಲ್‌ ಮೀಡಿಯಾದಲ್ಲಿ ಬಳಸಬಹುದಾದ ಹ್ಯಾಶ್‌ಟ್ಯಾಗ್‌ಗಳನ್ನು ಸ್ವತಃ ಬೋರ್ಡ್‌ ಮೇಲೆ ಬರೆಯಬೇಕಿತ್ತು.

ಇದನ್ನು ಓದಿ: ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟರ ಅಪರೂಪದ ಸಾಧನೆ; 1 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ದಾಟಿದ ಖಾತೆ

ಈ ವೇಳೆ ಸ್ಪರ್ಧಿ ರಕ್ಷಿತಾ ಅವರು ತಮ್ಮನ್ನು ‘ಪಟಾಕಿ ರಕ್ಷಿತಾ’ ಎಂಬ ಹ್ಯಾಶ್‌ಟ್ಯಾಗ್‌ನ ಮೂಲಕ ಗುರುತಿಸಿಕೊಳ್ಳಲು ಬಯಸಿರುವುದಾಗಿ ತಿಳಿಸಿದ್ದಾರೆ. ಬಳಿಕ ಅಶ್ವಿನಿ ಗೌಡ ಅವರು ಬೋರ್ಡ್‌ ಮೇಲೆ ತಮ್ಮ ಹೆಸರನ್ನು ಬರೆಯುವಾಗ, ‘ಚಲಗಾರ್ತಿ ಅಶ್ವಿನಿ’ ಎಂದು ಗುರುತಿಸಿಕೊಳ್ಳಲು ಇಚ್ಛೆ ವ್ಯಕ್ತಪಡಿಸಿದರು.

ಇದನ್ನು ಓದಿ ಬಿಗ್ ಬಾಸ್ ಮನೆಯಲ್ಲಿ ಅಪರೂಪದ ಕ್ಷಣ: ಪರಸ್ಪರ ಶ್ಲಾಘಿಸಿದ ಗಿಲ್ಲಿ–ಅಶ್ವಿನಿ

ಆದರೆ ಈ ಬರವಣಿಗೆಯಲ್ಲೇ ತಪ್ಪು ಕಂಡುಬಂದಿದ್ದು, ಅದರಿಂದ ಅಶ್ವಿನಿ ಗೌಡ ಸೋಶಿಯಲ್‌ ಮೀಡಿಯಾದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. ಮೊದಲಿಗೆ ‘ಚಲಗಾರ್ಥಿ ಅಶ್ವಿನಿ’ ಎಂದು ಬರೆಯಲಾಗಿದ್ದು, ನಂತರ ಅದನ್ನು ತಿದ್ದು ‘ಚಲಗಾರ್ತಿ ಅಶ್ವಿನಿ’ ಎಂದು ಬರೆದಿದ್ದಾರೆ. ಆದರೆ ಕನ್ನಡದಲ್ಲಿ ಸರಿಯಾದ ಪದ ‘ಛಲಗಾರ್ತಿ’ ಆಗಿದೆ ಎನ್ನುವುದು ಭಾಷಾಭಿಮಾನಿಗಳ ಆಕ್ಷೇಪವಾಗಿದೆ.

ಇದೇ ರೀತಿ ಅವರು ಬಳಸಿದ ಹ್ಯಾಶ್‌ಟ್ಯಾಗ್‌ನಲ್ಲೂ ತಪ್ಪು ಕಂಡುಬಂದಿದ್ದು, ‘ಹಠವಾದಿ ಅಶ್ವಿನಿ’ ಎಂಬುದಕ್ಕೆ ಬದಲಾಗಿ ‘#ಹಠವಾಧಿಅಶ್ವಿನಿ’ ಎಂದು ಬರೆಯಲಾಗಿದೆ. ಈ ತಪ್ಪುಗಳು ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಗೌರವಾಧ್ಯಕ್ಷೆಯಾಗಿರುವ ಅಶ್ವಿನಿ ಗೌಡ ಅವರಿಂದ ಸಂಭವಿಸಿರುವುದು ಅಚ್ಚರಿ ಮೂಡಿಸಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಲವರು ತೀವ್ರವಾಗಿ ಪ್ರತಿಕ್ರಿಯಿಸಿದ್ದು, “ಕನ್ನಡ ಪರ ಹೋರಾಟಗಾರ್ತಿ ಎಂದರೆ ಭಾಷೆಯ ಮೂಲಭೂತ ಜ್ಞಾನ ಇರಬೇಕು” ಎಂದು ಟೀಕಿಸಿದ್ದಾರೆ. ಕೆಲವರು ವ್ಯಂಗ್ಯವಾಗಿ ಕಾಮೆಂಟ್‌ ಮಾಡಿದ್ದು, “ಇಂಗ್ಲಿಷ್‌ನಲ್ಲೇ ಬರೆದಿದ್ದರೆ ಗೌರವ ಉಳಿಸಿಕೊಳ್ಳಬಹುದಿತ್ತು” ಎಂದು ಹೇಳಿದ್ದಾರೆ.

ಇನ್ನೂ ಕೆಲವರು “ಇವರು ಕನ್ನಡ ಹೋರಾಟಗಾರ್ತಿ ಅಲ್ಲ, ಕನ್ನಡದ ಕೊಲೆಗಾರ್ತಿ” ಎಂದು ಕಿಡಿಕಾರಿದ್ದಾರೆ. ಅಮೆರಿಕದಲ್ಲಿರುವ ಕನ್ನಡಿಗರು ಸಹ ಉತ್ತಮವಾಗಿ ಕನ್ನಡ ಮಾತನಾಡುತ್ತಾರೆ ಮತ್ತು ಬರೆಯುತ್ತಾರೆ ಎಂಬ ಹೋಲಿಕೆಯನ್ನು ಮಾಡುತ್ತಾ ಅಶ್ವಿನಿ ಗೌಡ ಅವರನ್ನು ಟೀಕಿಸುವ ಕಾಮೆಂಟ್‌ಗಳೂ ವೈರಲ್‌ ಆಗಿವೆ.

Join WhatsApp

Join Now

RELATED POSTS

1 thought on “ಕರವೇ ಮಹಿಳಾ ಘಟಕದ ಅಧ್ಯಕ್ಷೆಗೆ ಕನ್ನಡ ಬರವಣಿಗೆ ಬರಲ್ಲವೇ?ಟ್ರೋಲ್‌ಗೆ ಗುರಿಯಾದ ಅಶ್ವಿನಿ ಗೌಡ”

Comments are closed.