ಬೆಟ್ಟಿಂಗ್ ಮಾಡಿಕೊಂಡು ಅತಿಯಾದ ಪ್ರಮಾಣದಲ್ಲಿ ಬಿಯರ್ ಸೇವಿಸಿದ್ದರಿಂದ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಮೃತಪಟ್ಟ ದುರ್ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕೆ.ವಿ.ಪಲ್ಲಿ ಮಂಡಲದ ಬಂಡ ಪಾಡಿಪಲ್ಲಿಯಲ್ಲಿ ನಡೆದಿದೆ. ಈ ಸಂಬಂಧ ರಾಯಚೋಟಿ ಡಿಎಸ್‌ಪಿ ಕೃಷ್ಣಮೋಹನ್ ಅವರು, ಸಾವಿಗೆ ಮುಖ್ಯ ಕಾರಣ ಮದ್ಯದ ಅತಿಸೇವನೆ ಎಂದಿದ್ದಾರೆ.
ಇದನ್ನು ಓದಿ: ಇನ್ವರ್ಟರ್ ಬ್ಯಾಟರಿಗೆ ನೀರು ಸೇರಿಸುವ ಸರಿಯಾದ ಸಮಯ ತಿಳಿದಿದೆಯೇ? 90% ಜನರಿಗೆ ಇದು ಗೊತ್ತಿಲ್ಲ!
ಇದನ್ನು ಓದಿ ನಿಮಗೂ ಮೊಬೈಲ್ ಸ್ಪ್ಯಾಮ್ ಕರೆಗಳಿಂದ ತೆಲೆ ಕೆಟ್ಟಿದೆಯಾ ಇದನ್ನು ತಡೆಯುವುದು ಹೇಗೆ ನೋಡಿ
ಸಂಕ್ರಾಂತಿ ಹಬ್ಬದ ಪ್ರಯುಕ್ತ ಆರು ಸ್ನೇಹಿತರು ಸೇರಿ ಪಾರ್ಟಿ ಆಯೋಜಿಸಿದ್ದು, ಈ ವೇಳೆ ಮಣಿಕುಮಾರ್ (34) ಮತ್ತು ಪುಷ್ಪರಾಜ್ (26) ಎಂಬ ಇಬ್ಬರು ಸಾಫ್ಟ್‌ವೇರ್ ಇಂಜಿನಿಯರ್‌ಗಳು ಪರಸ್ಪರ ಪೈಪೋಟಿ ಮಾಡಿಕೊಂಡು ಮದ್ಯಪಾನಕ್ಕೆ ಮುಂದಾಗಿದ್ದರು.
ಪೊಲೀಸರ ಮಾಹಿತಿ ಪ್ರಕಾರ, ಕಳೆದ ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7.30 ರವರೆಗೆ ಇಬ್ಬರೂ ಸೇರಿ ಒಟ್ಟು 19 ಬಡ್‌ವೈಸರ್ ಟಿನ್ ಬಿಯರ್‌ಗಳನ್ನು ಸೇವಿಸಿದ್ದಾರೆ. ಮದ್ಯದ ಅತಿಯಾದ ಸೇವನೆಯಿಂದ ಇಬ್ಬರೂ ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಅಸ್ವಸ್ಥರಾದರು.
ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಮಣಿಕುಮಾರ್ ಮಾರ್ಗಮಧ್ಯೆ ಸಾವನ್ನಪ್ಪಿದರು. ಪುಷ್ಪರಾಜ್ ಆಸ್ಪತ್ರೆಗೆ ದಾಖಲಾದ ನಂತರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಪ್ರಾಥಮಿಕ ತನಿಖೆ ಹಾಗೂ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಸಾವಿಗೆ ಕಾರಣ ಅತಿಯಾದ ಮದ್ಯಪಾನವೇ ಎಂಬುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.






