ಗಂಡ–ಹೆಂಡತಿಯ ಸಂಸಾರದ ಮೇಲೆ ಯಾವಾಗ, ಯಾರ ಕಣ್ಣು ಬೀಳುತ್ತದೋ ಹೇಳಲಾರದ ಸಂಗತಿ. ಆದರೆ ಈರುಳ್ಳಿ–ಬೆಳ್ಳುಳ್ಳಿಯೇ ಒಬ್ಬ ದಂಪತಿಯ ದೀರ್ಘಕಾಲದ ಬದುಕನ್ನು ಅಸ್ಥಿರ ಮಾಡಿಬಿಟ್ಟ ಘಟನೆ ಅಹಮ್ಮದಾಬಾದ್‌ನಲ್ಲಿ ನಡೆದಿದೆ. 11 ವರ್ಷಗಳ ಮದುವೆ ಜೀವನ ಸುಗಮವಾಗಿದ್ದರೂ, ಈರುಳ್ಳಿ–ಬೆಳ್ಳುಳ್ಳಿಯ ವಿಚಾರವೇ ಕೊನೆಗೆ ಅವರ ಸಂಬಂಧಕ್ಕೆ ಚಿನ್ನಿಯಾಯಿತು.
ಈರುಳ್ಳಿ–ಬೆಳ್ಳುಳ್ಳಿಯ ಬೆಲೆ ಏರಿಕೆಯಲ್ಲ, ಅವುಗಳ ‘ಘಾಟಿಯೇ’ ಈ ಕುಟುಂಬಕ್ಕೆ ಬೇಸರ ತಂದದ್ದು. 2002ರಲ್ಲಿ ಮದುವೆಯಾದ ದಂಪತಿ ಆರಂಭದಲ್ಲಿ ಆಹಾರ ಪದ್ಧತಿಗಳಲ್ಲಿ ಹೊಂದಿಕೊಂಡಿದ್ದರು. ಗಂಡ ಮತ್ತು ಅತ್ತೆ ಸಾಮಾನ್ಯ ಆಹಾರ ಸೇವಿಸುತ್ತಿದ್ದರೆ, ಪತ್ನಿ ಸ್ವಾಮಿನಾರಾಯಣ ಭಕ್ತೆಯಾಗಿರುವುದರಿಂದ ಈರುಳ್ಳಿ–ಬೆಳ್ಳುಳ್ಳಿಯನ್ನು ತಿನ್ನದೆ ತನ್ನ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದಳು. ಆದರೆ ಮನೆಯ ಇತರರು ಅವನ್ನು ಬಳಸುತ್ತಿದ್ದ ಕಾರಣದಿಂದ, ಮನೆಯಲ್ಲಿ ಅಸಮಾಧಾನಕ್ಕೆ ಶುರುವಾಯಿತು.
ಕಾಲಕ್ರಮದಲ್ಲಿ ಒಂದೇ ಮನೆಯಲ್ಲಿ ಎರಡು ವಿಭಿನ್ನ ಅಡುಗೆ ಪದ್ಧತಿಗಳು ಆರಂಭವಾದವು. ಅತ್ತೆ–ಗಂಡರಿಗೆ ಬೇರೆ ಅಡುಗೆ, ಹೆಂಡತಿಗೆ ಬೇರೆ ಅಡುಗೆ ಎಂಬ ರೀತಿಯಲ್ಲಿ ಪರಿಸ್ಥಿತಿ ಬದಲಾಗುತ್ತಿದ್ದಂತೆ, ಸಣ್ಣ ವಿಷಯಗಳೂ ದೊಡ್ಡ ಜಗಳಕ್ಕೆ ಕಾರಣವಾಗತೊಡಗಿದವು. ಮನೆಯೊಳಗಿನ ಉದ್ವಿಗ್ನತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಯಿತು.
ಇದೀಗ ಜಗಳ ತೀವ್ರಗೊಳ್ಳುತ್ತಿದ್ದಂತೆ, ಪತ್ನಿ 2013ರಲ್ಲಿ ಮಗುವನ್ನು ಕರೆದುಕೊಂಡು ತಾಯಿ ಮನೆ ಸೇರಿಕೊಂಡಳು. ನಂತರ ನಡೆದ ಮಾತುಕತೆಗಳು ಯಶಸ್ವಿಯಾಗದೆ, ಗಂಡನು ಫ್ಯಾಮಿಲಿ ಕೋರ್ಟ್‌ನ್ನು ಆಶ್ರಯಿಸಿ ವಿಚ್ಛೇದನ ಅರ್ಜಿ ಸಲ್ಲಿಸಿದ. ದೀರ್ಘ ವಿಚಾರಣೆ ಬಳಿಕ 2024ರಲ್ಲಿ ಕೋರ್ಟ್ ವಿಚ್ಛೇದನ ಮಂಜೂರು ಮಾಡಿತು ಮತ್ತು ಪತ್ನಿಗೆ ಜೀವನಾಂಶ ನೀಡುವಂತೆ ಸೂಚನೆ ನೀಡಿತು.
ಪತಿ ಈ ಆದೇಶದ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ. ಆತ ಪತ್ನಿಯೇ ಮನೆ ಬಿಟ್ಟು ಹೋಗಿದ್ದಾಳೆ, ತಾನು ಅವಳ ಆಚರಣೆಗಳಿಗೆಲ್ಲ ಸಹಕರಿಸಿದ್ದೆ ಎಂದು ವಾದ ಮಂಡಿಸಿದ. ಇತ್ತ ಪತ್ನಿ ವಿಚ್ಛೇದನಕ್ಕೆ ವಿರೋಧವಾಗದೆ, ಜೀವನಾಂಶ ನೀಡುವಂತೆ ಮನವಿ ಮಾಡಿದ್ದಳು. ಬಾಕಿ ಹಣವನ್ನು ಹಂತ ಹಂತವಾಗಿ ಪಾವತಿಸುವುದಾಗಿ ಪತಿ ಒಪ್ಪಿಕೊಂಡ ಹಿನ್ನೆಲೆಯಲ್ಲಿ, ಹೈಕೋರ್ಟ್ ಕೂಡ ವಿಚ್ಛೇದನವನ್ನು ಅಂತಿಮಗೊಳಿಸಿದೆ.
ಈರುಳ್ಳಿ–ಬೆಳ್ಳುಳ್ಳಿಯ ವಿಚಾರವೇ ಗಂಡ ಹೆಂಡತಿಗೆ 11 ವರ್ಷದ ದಾಂಪತ್ಯ ಜೀವನ ಅಂತ್ಯ,…
By krutika naik
On: December 10, 2025 8:46 AM
---Advertisement---






