---Advertisement---

ಜೀ ಕನ್ನಡದ ‘ಅಮೃತಧಾರೆ’ಯಲ್ಲಿ ಭೂಮಿಕಾ ನಿರ್ಧಾರಕ್ಕೆ ವೀಕ್ಷಕರಿಗೆ ಶಾಕ್!

On: December 28, 2025 2:56 PM
Follow Us:
---Advertisement---


ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿ ಅಮೃತಧಾರೆ ಇತ್ತೀಚಿನ ಎಪಿಸೋಡ್‌ಗಳಲ್ಲಿ ಅಚ್ಚರಿಯ ತಿರುವು ಪಡೆದುಕೊಂಡಿದೆ. ಜೈದೇವ್‌ಗೆ ನೇರ ಸವಾಲು ಹಾಕಿ ಗಮನ ಸೆಳೆದಿದ್ದ ಭೂಮಿಕಾ ಇದೀಗ ಅನಿರೀಕ್ಷಿತ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಇದು ಗೌತಮ್ ಮಾತ್ರವಲ್ಲದೆ ವೀಕ್ಷಕರಿಗೂ ದೊಡ್ಡ ಶಾಕ್ ನೀಡಿದೆ.
ಕೋಟ್ಯಧಿಪತಿ ಗೌತಮ್ ದಿವಾನ್ ಅವರ ಪತ್ನಿಯಾಗಿದ್ದರೂ, ಭೂಮಿಕಾ ಸದ್ಯ ಮಧ್ಯಮ ವರ್ಗದ ಮಹಿಳೆಯಂತೆ ಪುಟ್ಟ ವಠಾರದಲ್ಲಿ ಬದುಕು ಸಾಗಿಸುತ್ತಿದ್ದಾಳೆ. ಮತ್ತೊಂದೆಡೆ, ದಿವಾನ್ ಕುಟುಂಬದ ಆಸ್ತಿಯೆಲ್ಲವನ್ನೂ ತನ್ನಲ್ಲೇ ಉಳಿಸಿಕೊಳ್ಳಲು ಜೈದೇವ್ ಹಲವು ಕುತಂತ್ರಗಳನ್ನು ರೂಪಿಸುತ್ತಿದ್ದಾನೆ.
ಗೌತಮ್‌ಗಿದ್ದ ಮಗ ಅಪ್ಪುನೇ ತನ್ನ ಮಗನೆಂಬ ಸತ್ಯ ತಿಳಿದ ಬಳಿಕ, ಜೈದೇವ್ ಆತನನ್ನು ಉಪಾಯದಿಂದ ದಿವಾನ್ ಮನೆಗೆ ಕರೆದುಕೊಂಡು ಬಂದಿದ್ದ. ಮಗನನ್ನು ಕರೆದುಕೊಂಡು ಹೋಗಲು ಜೈದೇವ್ ಬಳಿ ಭೂಮಿಕಾ ಬಂದ ಸಂದರ್ಭದಲ್ಲಿನ ಆಕೆಯ ಡೈಲಾಗ್‌ಗಳು ವೀಕ್ಷಕರಿಂದ ಭರ್ಜರಿ ಶಿಳ್ಳೆ-ಚಪ್ಪಾಳೆ ಗಳಿಸಿದ್ದವು.
ಈ ಸನ್ನಿವೇಶದ ನಂತರ ‘ಹಳೆಯ ಭೂಮಿಕಾ ದಿವಾನ್ ಮತ್ತೆ ಕಂಬ್ಯಾಕ್ ಆಗ್ತಾಳೆ’ ಎಂಬ ನಿರೀಕ್ಷೆ ವೀಕ್ಷಕರಲ್ಲಿ ಮೂಡಿತ್ತು. ಆದರೆ, ಇದೀಗ ಭೂಮಿಕಾ ಕುಟುಂಬ ಸಮೇತ ದೇಶ ತೊರೆಯಲು ಮುಂದಾಗಿರುವ ನಿರ್ಧಾರ ವೀಕ್ಷಕರ ಲೆಕ್ಕಾಚಾರವನ್ನೇ ಉಲ್ಟಾ ಮಾಡಿದೆ.
‘ದೇಶ ಬಿಟ್ಟು ಹೋಗುವುದಾದರೆ ಇಷ್ಟೆಲ್ಲಾ ಬಿಲ್ಡಪ್ ಯಾಕೆ?’ ಎಂಬ ಪ್ರಶ್ನೆಗಳನ್ನು ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಎತ್ತುತ್ತಿದ್ದಾರೆ. ಮುಂದಿನ ಎಪಿಸೋಡ್‌ಗಳಲ್ಲಿ ಭೂಮಿಕಾ ನಿರ್ಧಾರದ ಹಿಂದಿನ ಕಾರಣ ಏನು? ಇದು ಕಥೆಗೆ ಯಾವ ದಿಕ್ಕು ನೀಡಲಿದೆ ಎಂಬ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

Join WhatsApp

Join Now

RELATED POSTS

Leave a Comment