ಜೈಲು ಡಿಜಿಪಿ ಅಲೋಕ್ ಕುಮಾರ್ ಆದೇಶ: ಕಿಲ್ಲಿಂಗ್ ಸ್ಟಾರ್ ದರ್ಶನ್ ಸೇರಿದಂತೆ ಎಲ್ಲಾ ಕೈದಿಗಳ ಆಹಾರ, ಬಟ್ಟೆ ನಿಯಂತ್ರಣಕ್ಕೆ ಹೊಸ ನಿಯಮ
ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಕಿಲ್ಲಿಂಗ್ ಸ್ಟಾರ್ ದರ್ಶನ್ ಸೇರಿರುವ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ರಾಜ್ಯದ ಎಲ್ಲಾ ಜೈಲುಗಳಿಗೆ ಹೊಸ ಆದೇಶ ಹೊರಡಿಸಿದ್ದಾರೆ. ಈ ಆದೇಶದ ಪ್ರಕಾರ, ಕೈದಿಗಳಿಗೆ ನೀಡಲಾಗುವ ಆಹಾರ, ಬಟ್ಟೆ ಮತ್ತು ಹಾಸಿಗೆ ಸರಬರಾಜನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಹಿಂದೆ, ಕೈದಿಗಳು ಸಂದರ್ಶನದ ಸಮಯದಲ್ಲಿ ಹೊರಗಿನಿಂದ ಬಂದ ಹಣ್ಣು, ಬೇಕರಿ ತಿಂಡಿಗಳನ್ನು ಸ್ವಚ್ಛಂದವಾಗಿ ಪಡೆಯುತ್ತಿದ್ದರು. ಹೊಸ ನಿಯಮದಡಿ, ಪ್ಯಾಕ್ ಮಾಡಿದ ಆಹಾರವು ಮಾತ್ರ ನಿರ್ದಿಷ್ಟ ಗ್ರಾಮ್‌ಗಳಲ್ಲಿ ಮಾತ್ರ ನೀಡಲಾಗಬಹುದು.
• ಬಾಳೆಹಣ್ಣು, ಸೇಬು, ಮಾವು, ಪೇರಲೆ, ಸಪೋಟ ಹಣ್ಣುಗಳು ಗರಿಷ್ಠ 2 ಕೆಜಿ.
• ಒಣ ಹಣ್ಣು ಮತ್ತು ಬೇಕರಿ ತಿಂಡಿಗಳು ಅರ್ಧ ಕೆಜಿ ಮೀರಬಾರದು.
• ಬಟ್ಟೆ: ಕೈದಿಗಳಿಗೆ ರಡು ಬಟ್ಟೆ ಮತ್ತು ಎರಡು ಒಳಉಡುಪು ಮಾತ್ರ.
• ಈ ನಿಯಮವು ವಿಚಾರಣಾಧೀನ ಕೈದಿಗಳಿಗೆ ಮಾತ್ರ ಅನ್ವಯಿಸುತ್ತದೆ.
ಜೈಲಿನಲ್ಲಿ ಎರಡು ರೀತಿಯ ತಪಾಸಣೆ ನಡೆಯಬೇಕು: ಮೊದಲು ದೈಹಿಕ ತಪಾಸಣೆ, ನಂತರ ಸೆಕ್ಯುರಿಟಿ ತಪಾಸಣೆ. ಅಗತ್ಯವಿದ್ದರೆ, ಜೈಲಾಧಿಕಾರಿಗಳು ಯಾವುದೇ ರೀತಿಯ ತಪಾಸಣೆ ನಡೆಸಬಹುದು. ಆದೇಶವು ತಕ್ಷಣ ಜಾರಿಗೆ ಬರುವಂತೆ ತಿಳಿಸಲಾಗಿದೆ.
ಸುತ್ತೋಲೆ ಹೊರಡಿಸಲು ಕಾರಣ
ಕಳೆದ ಕೆಲ ಸಮಯದಲ್ಲಿ ಕೆಲ ಕೈದಿಗಳಿಗೆ ವಿಶೇಷ ಸೌಲಭ್ಯ ನೀಡಲಾಗಿರುವ ಬಗ್ಗೆ ಆರೋಪಗಳು ಬಂದಿದ್ದು, ಹೈಕೋರ್ಟ್‌ನಲ್ಲಿ ರೇಣುಕಾಸ್ವಾಮಿ ಪ್ರಕರಣದ ವಕೀಲರು ಈ ವಿಷಯವನ್ನು ಕೇಳಿದ್ದರು. ಅದರ ಬೆನ್ನಲ್ಲೇ, ಎಲ್ಲಾ ಜೈಲುಗಳಿಗೆ ಈ ನಿಯಮ ಸುತ್ತೋಲೆ ಮೂಲಕ ಜಾರಿಗೆ ತರಲಾಗಿದೆ. ಈ ನಿಯಮವು ದರ್ಶನ್ ಗ್ಯಾಂಗ್ ಸೇರಿದಂತೆ ಎಲ್ಲಾ ಕೈದಿಗಳಿಗೆ ಅನ್ವಯವಾಗಲಿದೆ.






