---Advertisement---

ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳಿಂದ 2 ಸಾವಿರ ಕೋಟಿ ರೂ. ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಅಪರೂಪದ ದಾಖಲೆ

On: January 4, 2026 11:40 AM
Follow Us:
---Advertisement---

ಬಾಲಿವುಡ್ ನಟ ಅಕ್ಷಯ್ ಖನ್ನಾ 2025ರಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಅಪರೂಪದ ಸಾಧನೆ ಮಾಡಿದ್ದಾರೆ. ಅವರು ನಟಿಸಿದ ಎರಡು ಪ್ರಮುಖ ಸಿನಿಮಾಗಳು ಭರ್ಜರಿ ಯಶಸ್ಸು ಸಾಧಿಸಿ, ಒಟ್ಟು 2 ಸಾವಿರ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ದಾಖಲೆ ನಿರ್ಮಿಸಿವೆ.

ಇದನ್ನು ಓದಿ: ಕೊಡಗು: ಭುಜದ ನೋವಿಗೆ ಇಂಜೆಕ್ಷನ್ ತೆಗೆದುಕೊಂಡ ಯುವಕನ ದಾರುಣ ಸಾವು, ವೈದ್ಯರ ನಿರ್ಲಕ್ಷ್ಯ!!!

ವರ್ಷಗಳಿನಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅಕ್ಷಯ್ ಖನ್ನಾ ಹೀರೋ, ಪೋಷಕ ಪಾತ್ರ ಹಾಗೂ ವಿಲನ್ ಪಾತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. 2025ರ ವರ್ಷ ಅವರ ವೃತ್ತಿಜೀವನದಲ್ಲಿ ವಿಶೇಷವಾಗಿದ್ದು, ‘ಛಾವ’ ಮತ್ತು ‘ಧುರಂಧರ್’ ಸಿನಿಮಾಗಳಲ್ಲಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆದಿದ್ದಾರೆ.

‘ಛಾವ’ ಸಿನಿಮಾ 2025ರ ಫೆಬ್ರವರಿ 14ರಂದು ಬಿಡುಗಡೆಯಾಗಿ, ವಿಕ್ಕಿ ಕೌಶಲ್ ನಾಯಕನಾಗಿ ನಟಿಸಿದ್ದರು. ಐತಿಹಾಸಿಕ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ಔರಂಗಜೇಬ್ ಪಾತ್ರದಲ್ಲಿ ಅಭಿನಯಿಸಿದ್ದು, ಅವರ ನಟನೆಯು ಚಿತ್ರದ ಯಶಸ್ಸಿಗೆ ಪ್ರಮುಖ ಕಾರಣವಾಗಿತ್ತು. ಈ ಸಿನಿಮಾ ವಿಶ್ವಾದ್ಯಂತ 809 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಇನ್ನೊಂದೆಡೆ, ‘ಧುರಂಧರ್’ ಸಿನಿಮಾ 2025ರ ಡಿಸೆಂಬರ್ 5ರಂದು ತೆರೆಕಂಡಿದ್ದು, ರಣವೀರ್ ಸಿಂಗ್ ನಾಯಕನಾಗಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಖನ್ನಾ ಅವರು ರೆಹಮಾನ್ ಡಕಾಯಿತ್ ಎಂಬ ವಿಲನ್ ಪಾತ್ರದಲ್ಲಿ ಮಿಂಚಿದ್ದಾರೆ. ಚಿತ್ರ ಈಗಾಗಲೇ 1167 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು, ಶೀಘ್ರದಲ್ಲೇ 1200 ಕೋಟಿ ಗಡಿ ದಾಟುವ ನಿರೀಕ್ಷೆಯಿದೆ.

‘ಛಾವ’ ಮತ್ತು ‘ಧುರಂಧರ್’ ಎರಡೂ ಸಿನಿಮಾಗಳ ಒಟ್ಟು ಗಳಿಕೆ ಸೇರಿಸಿದರೆ 2000 ಕೋಟಿ ರೂಪಾಯಿ ಮೀರಿದ್ದು, ಒಂದೇ ವರ್ಷದಲ್ಲಿ ಈ ಮಟ್ಟದ ಕಲೆಕ್ಷನ್ ಸಾಧಿಸಿದ ನಟರ ಪಟ್ಟಿಯಲ್ಲಿ ಅಕ್ಷಯ್ ಖನ್ನಾ ಎರಡನೇ ಸ್ಥಾನಕ್ಕೆ ಏರಿದ್ದಾರೆ.

ಈ ಸಾಧನೆಯಲ್ಲಿ ಮೊದಲ ಸ್ಥಾನದಲ್ಲಿರುವುದು ಶಾರುಖ್ ಖಾನ್. 2023ರಲ್ಲಿ ಬಿಡುಗಡೆಯಾದ ಅವರ ‘ಪಠಾಣ್’, ‘ಜವಾನ್’ ಮತ್ತು ‘ಡಂಕಿ’ ಸಿನಿಮಾಗಳು ಒಟ್ಟಾರೆ 2685 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದವು. ಇದೀಗ ಅಕ್ಷಯ್ ಖನ್ನಾ ಅವರು 2025ರಲ್ಲಿ ತಮ್ಮ ಅಭಿನಯದಿಂದ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.

Join WhatsApp

Join Now

RELATED POSTS

1 thought on “ಒಂದೇ ವರ್ಷದಲ್ಲಿ ಅಕ್ಷಯ್ ಖನ್ನಾ ಸಿನಿಮಾಗಳಿಂದ 2 ಸಾವಿರ ಕೋಟಿ ರೂ. ಕಲೆಕ್ಷನ್: ಬಾಕ್ಸ್ ಆಫೀಸ್‌ನಲ್ಲಿ ಅಪರೂಪದ ದಾಖಲೆ”

Comments are closed.