ಇದೇ ಸಂದರ್ಭದಲ್ಲಿ ಯಶ್ ಬಗ್ಗೆ ಬಾಲಿವುಡ್ ನಟ ಅಕ್ಷಯ್ ಒಬೆರಾಯ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಸೆಟ್‌ನಲ್ಲಿ ಕಳೆದ ಕ್ಷಣಗಳನ್ನು ಅವರು ಬಿಚ್ಚಿಟ್ಟಿದ್ದಾರೆ.
ಯಶ್ ‘ಟಾಕ್ಸಿಕ್’ ಸಿನಿಮಾದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ. ಜೊತೆಗೆ ಈ ಚಿತ್ರದ ನಿರ್ಮಾಪಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಬಾಲಿವುಡ್ ಯುವ ನಟ ಅಕ್ಷಯ್ ಒಬೆರಾಯ್ ಕೂಡ ಪಾತ್ರವಹಿಸಿದ್ದಾರೆ. ಸಿನಿಮಾ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕಾಗಿ ಎರಡೂ ಭಾಷೆಗಳಲ್ಲಿ ಡೈಲಾಗ್‌ಗಳನ್ನು ಹೇಳಬೇಕಿದೆ. ಈ ಕಾರಣಕ್ಕೆ ಅಕ್ಷಯ್ ಅವರು ಕನ್ನಡ ಕಲಿಯಲು ಶ್ರಮಿಸುತ್ತಿದ್ದಾರೆ.
ಅಕ್ಷಯ್ ಇತ್ತೀಚೆಗೆ ಯಶ್ ಕುರಿತು ಮಾತನಾಡಿದ್ದಾರೆ. ಯಶ್ ತುಂಬಾ ಹ್ಯಾಂಡ್ಸಮ್ ಎಂದು ಅವರು ಹೇಳಿದ್ದಾರೆ. ಜೊತೆಗೆ, ಯಶ್ ಸೆಟ್‌ಗೆ ಬಂದಾಗ ಅಲ್ಲಿ ಇರುವ ಎಲ್ಲರೂ ಮೌನವಾಗುತ್ತಾರೆಯೆಂದು ತಿಳಿಸಿದ್ದಾರೆ. “ಅಂದು ಯಶ್ ಅವರ ಜನ್ಮದಿನ. ಅವರು ಟಾಕ್ಸಿಕ್ ಚಿತ್ರದ ಸೆಟ್‌ನಿಂದ ಹೊರ ಬರುತ್ತಿದ್ದರು. ಸೂಟ್ ಧರಿಸಿದ್ದರು, ಬಿಳಿ ಬಣ್ಣದ ಟೋಪಿ ಹಾಕಿಕೊಂಡಿದ್ದರು. ನಾನು ಅವರನ್ನು ಮೊದಲ ಬಾರಿಗೆ ನೋಡಿದ್ದು ಆ ಸಂದರ್ಭದಲ್ಲೇ. ನಿಜಕ್ಕೂ ಅವರು ಬಹಳ ಸುಂದರ ವ್ಯಕ್ತಿ” ಎಂದು ಅಕ್ಷಯ್ ತಿಳಿಸಿದ್ದಾರೆ.
“ನನ್ನ ಶಾಟ್ ಮುಗಿಯುತ್ತಿದ್ದಂತೆಯೇ ಯಶ್ ಸೆಟ್‌ಗೆ ಪ್ರವೇಶಿಸಿದರು. ಅವರು ಬರಲು ಇಡೀ ಸೆಟ್ ಮೌನಗೊಂಡಿತು. ಅಂಥ ದೊಡ್ಡ ನಟ ಬಂದಾಗ ಮೌನವಾಗುವುದು ಸಹಜ. ಅವರು ನಿಜಕ್ಕೂ ಅಂದದ ವ್ಯಕ್ತಿ. ಜೊತೆಗೆ ಅವರ ಆಲೋಚನೆಗಳು ಅತ್ಯಂತ ಶ್ರೇಷ್ಠವಾಗಿವೆ” ಎಂದು ಅಕ್ಷಯ್ ಹೇಳಿದ್ದಾರೆ.
‘ಟಾಕ್ಸಿಕ್’ ಚಿತ್ರದ ಶೂಟಿಂಗ್ ಸದ್ಯ ಜೋರಾಗಿ ನಡೆಯುತ್ತಿದೆ. ಚಿತ್ರ ಮುಂದಿನ ಮಾರ್ಚ್‌ನಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದ ಕುರಿತು ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಮೂಡಿದೆ.







1 thought on ““ಯಶ್ ಬಂದರೆ ಇಡೀ ತಂಡ ಮೌನವಾಗುತ್ತದೆ”, ಟಾಕ್ಸಿಕ್ ಸೆಟ್‌ನ ಅನುಭವ ಹಂಚಿಕೊಂಡ ಅಕ್ಷಯ್”