ಅಜಯ್ ರಾವ್ ಹಾಗೂ ಸಪ್ನಾ ದಂಪತಿ ಮಧ್ಯೆ ಮನಸ್ತಾಪ ಬಂದಿದ್ದು, ಪರಸ್ಪರ ಇಬ್ಬರೂ ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿಕೊಂಡಿದ್ದರು. ಇನ್ನು ಸಪ್ನಾ ಅವರು ಡಿವೋರ್ಸ್ ಬೇಕು ಎಂದು ಕೌಟುಂಬಿಕ ಹಿಂಸೆ ಕಾರಣ ನೀಡಿ ಕೋರ್ಟ್ ಮೆಟ್ಟಿಲೇರಿದ್ದರು. ಈಗ ಸಪ್ನಾ ಅವರು ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಸಪ್ನಾ ಅವರು ಪತಿಯ ವಿರುದ್ಧ ದೂರು ದಾಖಲಿಸಿದ ಬಳಿಕ ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಹೇಳಿಕೆ ಹಂಚಿಕೊಂಡಿದ್ದಾರೆ.
‘ತಾಯಿಯಾಗಿ ನನ್ನ ಮೊದಲ ಜವಾಬ್ದಾರಿ ನನ್ನ ಮಗಳ ಸುರಕ್ಷತೆ, ಗೌರವ ಮತ್ತು ಅವಳ ಭವಿಷ್ಯಕ್ಕಾಗಿ ನಾನು ಪ್ರತಿ ದಿನ ಧೈರ್ಯವನ್ನ ಕುಡಿಸುತ್ತೇದ್ದಿನೇ, ನನ್ನನ್ನು ತೀವ್ರವಾಗಿ ಪರೀಕ್ಷಿಸುತ್ತಿರುವ ಸವಾಲುಗಳನ್ನು ಎದುರಿಸುತ್ತಿದ್ದೇನೆ. ಪ್ರಿಯ ಸ್ನೇಹಿತರೆ, ಸಹೋದರರೆ, ನಾನು ಮತ್ತು ನನ್ನ ಮಗಳು ನಮ್ಮ ಬದುಕನ್ನ ಪುನರ್ ನಿರ್ಮಿಸಲು ಮತ್ತು ನಮ್ಮ ದಾಂಪತ್ಯ ಜೀವನವನ್ನ ಪುನಃ ನಿರ್ಮಿಸಿಕೊಳ್ಳಲು ನಿಮ್ಮ ಪ್ರಾರ್ಥನೆ ಗಳನ್ನ ನಿಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇನೆ. ಮತ್ತು ನಾನು ಅತ್ಯಂತ ಗೌರವದಿಂದ ತಿಳಿಸಲು ಬಯಸುವುದೇನೆಂದರೆ ಈ ವಿಷಯ ನಮ್ಮ ವೈಯಕ್ತಿಕ, ಅಳವಾದ ಭಾವನತ್ಮಕ ಮತ್ತು ದಾಂಪತ್ಯ ಜೀವನಕ್ಕೆ ಮಾತ್ರ ಸಂಬಂದಿಸಿದ್ದು ಹೊರತು ಬೇರೆ ಯಾವುದೇ ರೀತಿಯಲ್ಲಿ ಸಂಬಂಧಿಸಿಲ್ಲ ಎಂದು ತಿಳಿಸುತ್ತೇನೆ’ ಎಂದಿದ್ದಾರೆ.
ವಿಶೇಷವೆಂದರೆ ಪೋಸ್ಟ್ ಕೊನೆಯಲ್ಲಿ ತಮ್ಮ ಹೆಸರನ್ನು ಸಪ್ನಾ ಅಜಯ್ ರಾವ್ ಎಂದು ನಮೂದಿಸಿದ್ದಾರೆ. ಆ ಮೂಲಕ ತಮಗೆ ವಿಚ್ಛೇದನ ಪಡೆದುಕೊಳ್ಳುವ ಉದ್ದೇಶ ಇಲ್ಲ ಎಂಬುದನ್ನು ಪರೋಕ್ಷವಾಗಿ ತಿಳಿಯಪಡಿಸಿದ್ದಾರೆ.
ಇದೇ ವಿಷಯದ ಬಗ್ಗೆ ನಿನ್ನೆ ಪ್ರತಿಕ್ರಿಯಿಸಿದ್ದ ನಟ ಅಜಯ್ ರಾವ್, ‘ಈ ಸೂಕ್ಷ್ಮ ಸಮಯದಲ್ಲಿ, ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ. ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವಂತೆ ಸಹಕರಿಸಿ ಎಂದು ಎಲ್ಲರಲ್ಲಿ ಹೃತ್ಪೂರ್ವಕ ವಿನಂತಿ. ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ’ ಎಂದಿದ್ದರು.
ಇಬ್ಬರಿಗೂ ಚರಿಷ್ಮಾ ಹೆಸರಿನ ಹೆಣ್ಣು ಮಗುವಿದೆ. ಸಪ್ನಾ ಐಟಿ ಸಂಸ್ಥೆಯ ಉದ್ಯೋಗಿಯಾಗಿದ್ದಾರೆ. ಅಜಯ್ ರಾವ್ ಕೌಟುಂಬಿಕ ವಿಷಯಗಳ ಬಗ್ಗೆ ಎಲ್ಲೂ ಮಾತನಾಡುತ್ತಿರಲಿಲ್ಲ. ಸಿನಿಮಾದ ಕಾರ್ಯಕ್ರಮಗಳಿಗೂ ಸಹ ಅಜಯ್ ರಾವ್ ಪತ್ನಿ ಬರುತ್ತಿರಲಿಲ್ಲ. ಇದೀಗ ಏಕಾ ಏಕಿ ಪತಿಯ ವಿರುದ್ಧ ಕೌಟುಂಬಿಕ ತಡೆ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ ಸಪ್ನಾ.







1 thought on “ಅಜಯ್ ರಾವ್ ವಿರುದ್ಧ ದೂರಿನ ಬಳಿಕ ಪತ್ನಿ ಸಪ್ನಾ ಮೊದಲ ಪ್ರತಿಕ್ರಿಯೆ After the complaint against Ajay Rao wife Sapna’s first reaction”