---Advertisement---

ಸರಪಂಚ ಚುನಾವಣೆಯಲ್ಲಿ ಸ್ಪರ್ಧಿಸುವ ಹಂಬಲಕ್ಕೆ ಆರು ವರ್ಷದ ಮಗಳನ್ನೇ ಕೊಂದ ತಂದೆ…!

On: February 4, 2026 6:23 AM
Follow Us:
---Advertisement---

ಅಧಿಕಾರದ ಹಂಬಲ ಮನುಷ್ಯನನ್ನು ಎಷ್ಟು ಅಮಾನುಷನಾಗಿಸಬಲ್ಲದು ಎಂಬುದಕ್ಕೆ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ ನಡೆದ ಈ ಪ್ರಕರಣವೇ ನಿದರ್ಶನ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆಯಲು ತಂದೆಯೊಬ್ಬ ತನ್ನ ಆರು ವರ್ಷದ ಮಗಳನ್ನೇ ಕೊಂದಿರುವುದು ಸಮಾಜವನ್ನು ಬೆಚ್ಚಿಬೀಳಿಸಿದೆ.

ನಾಂದೇಡ್ ಜಿಲ್ಲೆಯ ಮುಖೇಡ್ ತಾಲೂಕಿನ ಕೇರೂರ್ ಗ್ರಾಮದ ಪಾಂಡುರಂಗ ಕೊಂಡಮಂಗಲೆ ಎಂಬಾತ ಸಲೂನ್ ನಡೆಸುತ್ತಿದ್ದ. ಅವನಿಗೆ ಒಬ್ಬ ಮಗ ಮತ್ತು ಆರು ವರ್ಷದ ಅವಳಿ ಹೆಣ್ಣು ಮಕ್ಕಳು ಇದ್ದರು. ಪಂಚಾಯತ್ ರಾಜ್ ಕಾಯ್ದೆಯ ಪ್ರಕಾರ ಇಬ್ಬರಿಗಿಂತ ಹೆಚ್ಚು ಮಕ್ಕಳಿರುವವರಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇಲ್ಲ. ಜೂನ್‌ನಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಸರಪಂಚನಾಗಬೇಕೆಂಬ ಆಸೆ ಪಾಂಡುರಂಗನಿಗೆ ದೊಡ್ಡ ಅಡ್ಡಿಯಾಯಿತು.

ಇದನ್ನು ಓದಿ: ಜ್ಯೋತಿಷ್ಯ ಸಲಹೆ ಹೆಸರಿನಲ್ಲಿ ಮಹಿಳೆಯನ್ನು ಬುಟ್ಟಿಗೆ ಬೀಳಿಸಿದ ಕಮಲಾಕರ್ ಭಟ್; ಕೊಲೆಯವರೆಗೆ ಹೋದ ವಿವಾದ..

ಇದನ್ನು ಓದಿ: ಮದ್ಯದ ಚಟಕ್ಕೆ ಹುಟ್ಟಿಸಿದ ಮಗನ ಬಲಿ ಪಡೆದ ತಂದೆ..!

ಈ ಸಮಸ್ಯೆಗೆ ದಾರಿ ಹುಡುಕಲು ಪಾಂಡುರಂಗ ತನ್ನ ಸ್ನೇಹಿತನಾಗಿರುವ ಹಾಲಿ ಸರಪಂಚ ಗಣೇಶ್ ರಾಮಚಂದ್ರ ಶಿಂಧೆಯ ಬಳಿ ಚರ್ಚೆ ನಡೆಸಿದ್ದ. ಮೊದಲಿಗೆ ಮಗು ದತ್ತು ನೀಡುವ ಯೋಚನೆ ಮಾಡಲಾದರೂ, ಜನ್ಮ ಪ್ರಮಾಣಪತ್ರದಲ್ಲೇ ತಂದೆಯ ಹೆಸರು ಇರುವುದರಿಂದ ಅದು ಕಾನೂನುಬದ್ಧವಾಗಿ ತೊಂದರೆ ಉಂಟುಮಾಡಬಹುದು ಎಂದು ಆತಂಕಗೊಂಡರು. ಅಂತಿಮವಾಗಿ ಇಬ್ಬರೂ ಸೇರಿ ಅತಿ ಕ್ರೂರ ನಿರ್ಧಾರಕ್ಕೆ ಬಂದರು.

ಜನವರಿ 29ರಂದು ಪಾಂಡುರಂಗ ತನ್ನ ಮಗಳಾದ ಪ್ರಾಚಿಯನ್ನು ಬೈಕ್‌ನಲ್ಲಿ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ನಿಜಾಮ್ ಸಾಗರ್ ಕಾಲುವೆ ಬಳಿ ಕರೆದೊಯ್ದಿದ್ದ. ಸುತ್ತಮುತ್ತ ಯಾರೂ ಇಲ್ಲದ ಸಂದರ್ಭ ನೋಡಿ ಮಗುವನ್ನು ಕಾಲುವೆಗೆ ನೂಕಿ ಅಲ್ಲಿಂದ ಪರಾರಿಯಾಗಿದ್ದಾನೆ. ಹತ್ತಿರದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರು ಶಬ್ದ ಕೇಳಿ ಧಾವಿಸಿದಾಗಾಗಲೇ ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿತ್ತು.

ತೆಲಂಗಾಣ ಪೊಲೀಸರು ಅಪರಿಚಿತ ಬಾಲಕಿಯ ಶವ ಪತ್ತೆ ಮಾಡಿದ ಬಳಿಕ, ಕಾನ್ಸ್ಟೇಬಲ್ ಒಬ್ಬರು ಆಕೆಯ ಫೋಟೋವನ್ನು ವಾಟ್ಸಾಪ್ ಸ್ಟೇಟಸ್‌ನಲ್ಲಿ ಹಾಕಿದ್ದರು. ಇದನ್ನು ನೋಡಿದ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಆ ಮಗು ಪಾಂಡುರಂಗನ ಮಗಳೆಂದು ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ತೀವ್ರ ವಿಚಾರಣೆಯಲ್ಲಿ ಪಾಂಡುರಂಗ ತನ್ನ ರಾಜಕೀಯ ಆಸೆಗಾಗಿ ಮಗಳನ್ನು ಕೊಂದಿರುವುದನ್ನು ಒಪ್ಪಿಕೊಂಡಿದ್ದಾನೆ.

ಇದನ್ನು ಓದಿ: ಮೂರು ಕೋಟಿ ವಿಮಾ ಹಣಕ್ಕಾಗಿ ತಂದೆಯನ್ನೇ ಹಾವು ಕಚ್ಚಿಸಿ ಕೊಲೆ ಮಾಡಿದ ಮಕ್ಕಳು!!!!

ಈ ಪ್ರಕರಣದಲ್ಲಿ ಪಾಂಡುರಂಗ ಮತ್ತು ಅವನಿಗೆ ಸಹಾಯ ಮಾಡಿದ ಸರಪಂಚ ಗಣೇಶ್ ಶಿಂಧೆಯನ್ನು ಪೊಲೀಸರು ಬಂಧಿಸಿದ್ದಾರೆ. ಅಧಿಕಾರದ ದಾಹಕ್ಕೆ ಕಂದಮ್ಮನನ್ನೇ ಬಲಿ ಪಡೆದ ಈ ಅಮಾನುಷ ಕೃತ್ಯ ಇಡೀ ರಾಜ್ಯವನ್ನು ಶೋಕಕ್ಕೆ ದೂಡಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment