---Advertisement---

ಅನಾಮಿಕ: “ಬುರುಡೆ ಕೊಟ್ಟು ಅವರು ಹೇಳಿದಂತೆ ನಾನು ಹೇಳಿದ್ದೇನೆ” Gave false statement under pressure in Dharmasthala case.

On: August 19, 2025 8:10 AM
Follow Us:
Gave false statement under pressure in Dharmasthala case.
---Advertisement---

ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಮುಂದೆ ಹಾಜರಾದ ದೂರುದಾರ ಅನಾಮಿಕ, ತಾನು ಒತ್ತಡಕ್ಕೆ ಒಳಗಾಗಿ ಸುಳ್ಳು ಹೇಳಿಕೆ ನೀಡಿರುವುದಾಗಿ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ ಎಂದು ಮುಂದೆ ಬಂದಿರುವ ಅನಾಮಿಕ ತಾನಾಗಿಯೇ ಮುಂದೆ ಬಂದಿಲ್ಲ. “ಒಂದು ಗುಂಪು ನನಗೆ ಬುರುಡೆ ಕೊಟ್ಟು ಎಸ್‌ಐಟಿ ಮುಂದೆ ಶರಣಾಗಲು ಹೇಳಿತ್ತು. ಬುರುಡೆ ಕೊಟ್ಟು ಅವರು ಹೇಳಿದಂತೆ ನಾನು ಹೇಳಿದ್ದೇನೆ” ಎಂದು ವಿಶೇಷ ತನಿಖಾ ತಂಡದ ಮುಂದೆ ಹೇಳಿದ್ದಾನೆ.

ಈ ಹೇಳಿಕೆಯು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ತನಿಖಾಧಿಕಾರಿಗಳು ಆತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

2014ರಲ್ಲಿ ಧರ್ಮಸ್ಥಳವನ್ನು ಬಿಟ್ಟ ನಂತರ ನಾನು ತಮಿಳುನಾಡಿನಲ್ಲಿ ನೆಲೆಸಿದ್ದೆ 2023ರಲ್ಲಿ ಕೆಲವು ಜನರ ಗುಂಪು ನನ್ನನ್ನು ಸಂಪರ್ಕಿಸಿತು. ಕಾನೂನು ಪ್ರಕಾರವೇ ಶವಗಳನ್ನು ಹೂತಿದ್ದೆ ಎಂದು ನಾನು ಅವರಿಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ. ಆ ಗುಂಪು, ತಾನು ಪೊಲೀಸರ ಮುಂದೆ ಶರಣಾಗುವಂತೆ ಒತ್ತಡ ಹೇರಿದೆ. ಬುರುಡೆ ತಂದು ಕೊಟ್ಟು ಅವರು ಹೇಳಿದಂತೆ ನಾನು ನಡೆದುಕೊಂಡೆ ಎಂದು ಅನಾಮಿಕ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಪೊಲೀಸರ ಮುಂದೆ ಏನು ಹೇಳಬೇಕೆಂದು ಮೂವರು ನನಗೆ ಹೇಳಿಕೊಟ್ಟಿದ್ದರು. ಅವರ ಒತ್ತಡಕ್ಕೆ ಒಳಗಾಗಿ ನಾನು ಸುಳ್ಳು ಹೇಳಿಕೆ ಕೊಟ್ಟೆ ಎಂದು ಅನಾಮಿಕ ಸ್ಪಷ್ಟಪಡಿಸಿದ್ದಾರೆ. ಸುಜಾತಾ ಭಟ್ ಅವರು ದೂರು ಕೊಡುವ ತನಕ ನನಗೆ ಭಯವಾಗುತ್ತಿತ್ತು. ಆದರೆ, ಸುಜಾತಾ ಅವರು ದೂರು ಕೊಟ್ಟ ನಂತರ ನನಗೆ ಧೈರ್ಯ ಬಂತು ಎಂದು ಅನಾಮಿಕ ಹೇಳಿದ್ದಾರೆ.

ಈ ಹೇಳಿಕೆಯ ನಂತರ, ಎಸ್‌ಐಟಿ ಅಧಿಕಾರಿಗಳು ದೂರುದಾರನ ಸಂಪೂರ್ಣ ವಿಡಿಯೋ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಂಡಿದ್ದಾರೆ. ಈ ವಿಡಿಯೋ, ಪ್ರಕರಣದ ಮುಂದಿನ ತನಿಖೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಸಾಧ್ಯತೆಯಿದೆ. ದೂರುದಾರ ಅನಾಮಿಕನ ಈ ಸ್ಫೋಟಕ ಹೇಳಿಕೆಯು ಪ್ರಕರಣದ ಆಳವಾದ ತನಿಖೆಗೆ ಒತ್ತಾಯಿಸುತ್ತಿದೆ. ಈ ಮೂಲಕ, ಪ್ರಕರಣದಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಬಗ್ಗೆ ಬೆಳಕು ಚೆಲ್ಲುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.

ಅನಾಮಿಕ ವ್ಯಕ್ತಿ ಪೊಲೀಸರಿಗೆ ಕೊಟ್ಟ ಬುರುಡೆ ಹಾಗೂ ಅದನ್ನು ಹೊರಗೆ ತೆಗೆದ ವಿಡಿಯೋವನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಈ ಬುರುಡೆ ಎಲ್ಲಿ ಸಿಕ್ಕಿದೆ ಎಂದು ಕೇಳಿದಾಗ, ಇದೊಂದೇ ಅಲ್ಲ ಇಂತಹ ನೂರಾರು ಹೆಣ್ಣು ಮಕ್ಕಳ ಶವಗಳನ್ನು ನಾನು ಧರ್ಮಸ್ಥಳದ ಸುತ್ತಮುತ್ತಲೂ ಹೂತಿದ್ದೇನೆ. ನಿಮಗೆ ಶವಗಳನ್ನು ಹೂತಿರುವ ಶವಗಳನ್ನು ಹೂತಿದ್ದಾಗಿ ತಿಳಿಸಿದ್ದಾನೆ. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ ರಚಸಿತ್ತು. ಆದರೆ ಅನಾಮಿಕ ತೋರಿಸಿದ 16ಕ್ಕೂ ಹೆಚ್ಚು ಸ್ಥಳಗಳಲ್ಲಿ ಎರಡರಲ್ಲಿ ಮಾತ್ರ ಮೂಳೆಗಳು ಸಿಕ್ಕಿದ್ದವು. ಆತ ತೋರಿಸಿದ ಯಾವುದೇ ಜಾಗದಲ್ಲಿ ಮಹಿಳೆಯರ ಅಸ್ತಿಪಂಜರ ಸಿಕ್ಕಿಲ್ಲ. ಇದೀಗ ಅನಾಮಿಕ ವ್ಯಕ್ತಿಯನ್ನು ತೀವ್ರ ವಿಚಾರಣೆ ಮಾಡಿದಾಗ ಒಂದು ನನಗೆ ಬುರುಡೆ ಕೊಟ್ಟು, ಎಸ್‌ಐಟಿ ಮುಂದೆ ಹೀಗೆ ಹೇಳುವಂತೆ ತಿಳಿಸಿತ್ತು. ಇದಾದ ನಂತರ ನಾನು ಎಸ್‌ಐಟಿ ಮುಂದೆ ಬುರುಡೆ ಕೊಟ್ಟು ಶರಣಾಗಿದ್ದೆ ಎಂದು ತಿಳಿಸಿದ್ದಾನೆ.

ಇನ್ನು ಅನಾಮಿಕ ವ್ಯಕ್ತಿ ಪೊಲೀಸರಿಗೆ ತಂದುಕೊಟ್ಟ ತಲೆ ಬುರುಡೆ ಎಲ್ಲಿಂದ ತಂದಿದ್ದೀಯ ಎಂದು ಕೇಳಿದ್ದಾರೆ. ಇದಕ್ಕೆ ಸ್ಪಷ್ಟವಾಗಿ ಉತ್ತರ ಕೊಡದ ಅನಾಮಿಕ ವ್ಯಕ್ತಿ ಬಂಗ್ಲೆಗುಡ್ಡ, ಬೋಳಿಯಾರು, ಕಲ್ಲೇರಿ, ಕಾಡು ಎಂದೆಲ್ಲಾ ವಿವಿಧ ಹೇಳಿಕೆಗಳನ್ನು ನೀಡುತ್ತಿದ್ದಾನೆ. ಇದರಿಂದ ಎಸ್‌ಐಟಿ ಆತನನ್ನು ಮತ್ತಷ್ಟು ತೀವ್ರ ವಿಚಾರಣೆಗೆ ಒಳಪಡಿಸಿದಾಗ ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡಿದ್ದಾನೆ. ಇನ್ನು ಅನಾಮಿಕ ವ್ಯಕ್ತಿ ತಂದುಕೊಟ್ಟ ತಲೆಬುರುಡೆ ಕೂಡ ಪುರುಷನದ್ದು, ಎಂದು ಎಫ್‌ಎಸ್‌ಎಲ್ ವರದಿಯಿಂದ ತಿಳಿದುಬಂದಿದೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment