---Advertisement---

ಗಂಡನಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ 53 ವರ್ಷದ ಮಹಿಳೆ!! ಅಕ್ರಮ ಸಂಬಂಧ ಬಯಲು 53-year-old woman burns husband over affair.

On: August 18, 2025 9:35 AM
Follow Us:
53-year-old woman burns husband over affair.
---Advertisement---

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಹೀನ ಕೃತ್ಯ ಬೆಳಕಿಗೆ ಬಂದಿದೆ. ತನಗಿಂತ 20 ವರ್ಷ ಚಿಕ್ಕವನಾದ ಪ್ರಿಯಕರನೊಂದಿಗೆ ಅನೈತಿಕ ಸಂಬಂಧ ಹೊಂದುವುದಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಆತನ ಪತ್ನಿ ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಸಂಭವಿಸಿದೆ. ಕೊಲೆ ಮಾಡಿ ಎರಡು ತಿಂಗಳ ಬಳಿಕ ಆರೋಪಿಗಳನ್ನು ಬಂಧಿಸುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.

ಮೃತ ದುರ್ದೈವಿಯನ್ನು ಸುಬ್ರಹ್ಮಣ್ಯ ಎಂದು ಗುರುತಿಸಲಾಗಿದೆ. ಈತನ ಪತ್ನಿ ಮೀನಾಕ್ಷಿ (53) ಮತ್ತು ಆಕೆಯ ಪ್ರಿಯಕರ ಪ್ರದೀಪ್ (33) ಸೇರಿದಂತೆ ಒಟ್ಟು ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

ಕಡೂರು ತಾಲೂಕಿನ ಕಂಸಾಗರ ಗೇಟ್ ಬಳಿ ಈ ಕ್ರೌರ್ಯ ನಡೆದಿತ್ತು. ಸುಬ್ರಹ್ಮಣ್ಯ ಅವರಿಗೆ ತನ್ನ ಪತ್ನಿ ಮೀನಾಕ್ಷಿಯ ನಡವಳಿಕೆ ಬಗ್ಗೆ ಅನುಮಾನವಿತ್ತು. ಆಕೆಯ ಅಕ್ರಮ ಸಂಬಂಧದ ಬಗ್ಗೆ ಪತ್ತೆಯಾದಾಗ, ಅವರಿಬ್ಬರ ನಡುವೆ ಜಗಳ ಆಗುತ್ತಿತ್ತು. ಪ್ರದೀಪ್ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವುದಕ್ಕೆ ಗಂಡನೇ ಅಡ್ಡಿ ಆಗುತ್ತಿದ್ದಾನೆ. ಪ್ರತಿನಿತ್ಯ ತನ್ನ ಚಲನವಲನ ಗಮನಿಸುತ್ತಾ, ತನಗೆ ಕಡಿವಾಣ ಹಾಕುತ್ತಿದ್ದಾನೆ. ಯುವಕನೊಂದಿಗೆ ಅನೈತಿಕ ಸಂಬಂಧ ಬಿಟ್ಟಿರಲಾಗದ ಹೆಂಡತಿ ಗಂಡನನ್ನು ಕೊಲೆ ಮಾಡಿದರೆ ಪ್ರಿಯಕರನೊಂದಿಗೆ ಸುಖವಾಗಿ ಜೀವನ ಮಾಡಬಹುದು ಎಂದು ಭಾವಿಸಿದ್ದಳು. ಈ ಹಿನ್ನೆಲೆಯಲ್ಲಿ ಗಂಡನ ಕೊಲೆಗೆ ಸ್ಕೆಚ್ ಹಾಕಿದ್ದಳಿ.

ಈ ವಿಚಾರವನ್ನು ಮೀನಾಕ್ಷಿ ಆಕೆಯ ಪ್ರೇಮಿ ಪ್ರದೀಪ್ ಮತ್ತು ಆತನ ಇಬ್ಬರು ಸ್ನೇಹಿತರಿಗೆ ತಿಳಿಸಿದ್ದಾಳೆ. ಎಲ್ಲರೂ ಸೇರಿ ಮೀನಾಕ್ಷಿಯ ಗಂಡ ಸುಬ್ರಹ್ಮಣ್ಯನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ತಮ್ಮ ಯೋಜನೆಯಂತೆ ಸುಬ್ರಹ್ಮಣ್ಯನನ್ನು ಒಂದು ಕಾರ್ಯಕ್ರಮದ ನೆಪದಲ್ಲಿ ಚಿಕ್ಕಮಗಳೂರಿಗೆ ಕರೆತಂದ ಮೀನಾಕ್ಷಿ ಮೇ 31ರಂದು ಕಂಸಾಗರ ಗೇಟ್ ಬಳಿ ಕ್ರೂರವಾಗಿ ಕೊಲೆ ಮಾಡಿ, ಶವವನ್ನು ಸುಟ್ಟು ಹಾಕಿದ್ದರು. ಆಶ್ಚರ್ಯವೆಂದರೆ, ಪತಿಯನ್ನು ಕೊಂದ ಬಳಿಕ ಆಕೆ ಜೂನ್ 2ರಂದು ಪತಿ ಕಾಣೆಯಾಗಿದ್ದಾನೆ ಎಂದು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಘಟನೆಯ ನಂತರ ಕೊಲೆಯಾದ ಸುಬ್ರಹ್ಮಣ್ಯ ಅವರ ಅಂಗಡಿಯ ಕೀಗಳನ್ನು ಪೊಲೀಸರು ಪತ್ತೆಹಚ್ಚಿದರು. ಕೀಯಿಂದಲೇ ಕೊಲೆಗಾರರನ್ನು ಪತ್ತೆ ಹಚ್ಚುವ ಪ್ರಯತ್ನವನ್ನು ಪೊಲೀಸರು ಪ್ರಾರಂಭಿಸಿದರು. ತನಿಖೆ ತೀವ್ರಗೊಂಡಾಗ ಮೀನಾಕ್ಷಿ ಮತ್ತು ಆಕೆಯ ಪ್ರಿಯಕರ ಪ್ರದೀಪ್ ಮೇಲೆ ಅನುಮಾನ ಬಂದಿತು. ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಇಬ್ಬರೂ ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಕೊಲೆಗೆ ಪ್ರದೀಪ್‌ಗೆ ಆತನ ಇಬ್ಬರು ಸ್ನೇಹಿತರು ಸಹ ಸಹಾಯ ಮಾಡಿದ್ದು, ಅವರೆಲ್ಲರನ್ನೂ ಪೊಲೀಸರು ಬಂಧಿಸಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

1 thought on “ಗಂಡನಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ 53 ವರ್ಷದ ಮಹಿಳೆ!! ಅಕ್ರಮ ಸಂಬಂಧ ಬಯಲು 53-year-old woman burns husband over affair.”

Leave a Comment