ತಮಿಳುನಾಡಿನ ಬಿಜೆಪಿ ನಾಯಕ, ಆರ್‌ಎಸ್‌ಎಸ್ ಹಿನ್ನೆಲೆಯಿಂದ ಬಂದಿರುವ ಸಿ.ಪಿ. ರಾಧಾಕೃಷ್ಣನ್ ಅವರನ್ನು ಉಪರಾಷ್ಟ್ರಪತಿ ಸ್ಥಾನಕ್ಕೆ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಭಾನುವಾರ ಆಯ್ಕೆ ಮಾಡಲಾಗಿದೆ. ಜಗದೀಪ್ ಧನ್ಕರ್ ರಾಜೀನಾಮೆಯಿಂದ ತೆರವಾಗಿರುವ ಉಪ ರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ಸಮೀಪಿಸುತ್ತಿದೆ. ಇದಕ್ಕೆ ಮಿತ್ರಪಕ್ಷಗಳು ಬೆಂಬಲ ಸೂಚಿಸಿದೆ.
ಸಿಪಿ ರಾಧಾೃಷ್ಣನ್ ತಮ್ಮ 16ನೇ ವಯಸ್ಸಿನಿಂದ ಆರ್‌ಎಸ್‌ಎಸ್ ಸ್ವಯಂ ಸೇವಕರಾಗಿದ್ದಾರೆ. ಇದೀಗ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಇವರು ಪುದುಚೇರಿ, ಜಾರ್ಖಂಡ್ ಹಾಗೂ ಸದ್ಯ ಮಹಾರಾಷ್ಟ್ರ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಗಮನಸೆಳೆದಿದ್ದ ಸಿಪಿ ರಾಧಾಕೃಷ್ಣನ್ ಬಳಿಕ ಕೊಯಂಬತ್ತೂರಿನಿಂದ ಲೋಕಸಭೆಗೆ ಆಯ್ಕೆಯಾಗಿದ್ದರು. ರಾಜಕೀಯ ಜೀವನದ ನಿಸ್ವಾರ್ಥ ಸೇವೆ ಸಲ್ಲಿಸಿದ ಸಿಪಿ ರಾಧಕೃಷ್ಣನ್ ಅವರನ್ನು ಬಿಜೆಪಿ ರಾಜ್ಯಾಪಾಲರಾಗಿ ನೇಮಕ ಮಾಡಿತ್ತು. ತಮಿಳುನಾಡು ಮೂಲದ ರಾಧಾಕೃಷ್ಣನ್ ಅಭ್ಯರ್ಥಿ ಘೋಷಣೆ ಹಿಂದೆ ತಮಿಳುನಾಡು ಚುನಾವಣೆ ರಣತಂತ್ರವೂ ಅಡಗಿದೆ ಅನ್ನೋ ಮಾತುಗಳು ಕೇಳಿ ಬರುತ್ತಿದೆ.
ಸಿ.ಪಿ ರಾಧಾಕೃಷ್ಣನ್ ಅವರು ಯಾವಾಗಲೂ ಸಮುದಾಯ ಸೇವೆಯತ್ತ ಗಮನಹರಿಸಿದ್ದಾರೆ. ಎನ್‌ಡಿಎ ಅವರನ್ನು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದು ಸಂತಸ ಉಂಟುಮಾಡಿದೆ ಎಂದು ಪ್ರದಾನಿ ನರೇಂದ್ರ ಮೋದಿ ಪ್ರಧಾನಿ ಹೇಳಿದ್ದಾರೆ.






