ಚಿತ್ರರಂಗದ ಪ್ರಸಿದ್ಧ ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನ ರಾವ್ ಮಧ್ಯೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬ ಸುದ್ದಿ ಎಲ್ಲೆಡೆ ಸುಳಿದಾಡಿದೆ. 2014ರಲ್ಲಿ ಪ್ರೀತಿಸಿ ಮದುವೆ ಆಗಿದ್ದ ಈ ಜೋಡಿ ಇದೀಗ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿತ್ತು.
ನಟ ಅಜಯ್ ರಾವ್ ಹಾಗೂ ಪತ್ನಿ ಸ್ವಪ್ನ ರಾವ್ ಮಧ್ಯೆ ಎನೋ ಕಲಹ ನಡೆದಿದ್ದು ಈ ಬಗ್ಗೆ ಅವರು ಫ್ಯಾಮಿಲಿ ಕೋರ್ಟ್ ಗೆ ಹೋಗಿದ್ದಾರೆ ಎಂಬಮಾತಿದೆ. ಈ ಬಗ್ಗೆ ಸ್ಪಷ್ಟತೆ ಕೊಡುವ ಬದಲು ನಟ ಅಜಯ್ ರಾವ್ ಅವರು ಮಾಧ್ಯಮಗಳಿಗೆ ಹೊರಬಿದ್ದ ಸುದ್ದಿಯ ಬಗ್ಗೆ ಮಾಹಿತಿ ನೀಡಿದ್ದಾರೆ.
‘ಇದು ನನ್ನ ಪರ್ಸನಲ್ ವಿಷ್ಯ, ನಾವು ಇದನ್ನ ಸಾಲ್ವ್ ಮಾಡಿಕೊಳ್ತೀವಿ. ನಾನು ನನ್ನದೇ ಅದ ಡಿಗ್ನಿಫ್ಯ್ಡ್ ರೀತಿಯಲ್ಲಿ ಇದನ್ನ ಹ್ಯಾಂಡಲ್ ಮಾಡಿ ಸಾಲ್ವ್ ಮಾಡಿಕೊಳ್ತೀನಿ. ನಾನು ಈಗ ಈ ಬಗ್ಗೆ ರಿಯಾಕ್ಟ್ ಮಾಡಿ ನನ್ನ ಮಗಳ ಭವಿಷ್ಯಕ್ಕೆ ಇದು ತೊಂದರೆ ಆಗೋದು ಬೇಡ. ನಮ್ಮ ಪ್ರೈವಸಿಯನ್ನ ಗೌರವಿಸಿ’ ಎಂದು ಅಜಯ್ ರಾವ್ ಹೇಳಿದ್ದಾರೆ. ಈ ಮೂಲಕ ಅವರು ಸುದ್ದಿಯನ್ನು ಅಲ್ಲಗಳೆಯದೇ, ದಯವಿಟ್ಟು ಇಲ್ಲಿಗೇ ನಿಲ್ಲಿಸಿಬಿಡಿ ಎಂದು ವಿನಂತಿಸಿಕೊಂಡಿದ್ದಾರೆ.
‘ಎಕ್ಸ್‌ಕ್ಯೂಸ್ ಮಿ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ನಟ ಅಜಯ್ ರಾವ್ ಅವರು ಬಳಿಕ ಬಹಳಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿ ಪೂಜಾ ಗಾಧಿಯ ಜೊತೆ ‘ತಾಜ್ ಮಹಲ್’ ಚಿತ್ರದಲ್ಲಿ ಸಹ ಅಜಯ್ ರಾವ್ ಅವರು ನಾಯಕನಟರಾಗಿದ್ದರು. ಈ ಚಿತ್ರ ಸೂಪರ್ ಹಿಟ್ ಆಗಿದೆ. ಕೃಷ್ಣ ಸೇರಿದಂತೆ ಅಜಯ್ ರಾವ್ ಅಚರ ನಟಿಸಿದ ಕನ್ನಡ ಚಿತ್ರಗಳ ಲಿಸ್ಟ್ ಸಾಕಷ್ಟು ದೊಡ್ಡದಿದೆ. ಇತ್ತೀಚೆಗಷ್ಟೇ ಅಜಯ್ ರಾವ್ ನಿರ್ಮಾಣ ಹಾಗೂ ನಟನೆಯ ‘ಯುದ್ಧಕಾಂಡ’ ಸಿನಿಮಾ ಬಿಡುಗಡೆ ಆಗಿತ್ತು.
ಇನ್ನು ಯುದ್ಧಕಾಂಡ -2 ಸಿನಿಮಾದ ಪ್ರಚಾರದಲ್ಲೂ ನಟ ಅಜಯ್‌ರಾವ್ ಅವರು ಹಾಗೂ ಸ್ವಪ್ನ ದಂಪತಿ ಈಚೆಗೆ ಯುದ್ಧಕಾಂಡ ಸಿನಿಮಾದ ಪ್ರಚಾರದಲ್ಲೂ ಭಾಗವಹಿಸಿದ್ದರು. ಆದರೆ ಸೆಲೆಬ್ರಿಟಿ ಪಾರ್ಟಿಗಳಲ್ಲಿ ಅಜಯ್ ಅವರ ಪತ್ನಿ ಸ್ವಪ್ನ ಅವರು ಕಾಣಿಸಿಕೊಳ್ಳುವುದು ಅಪರೂಪದಲ್ಲಿ ಅಪರೂಪವಾಗಿತ್ತು. ಇನ್ನು ಈ ಕುರಿತು ಹೆಚ್ಚು ಮಾಹಿತಿ ಇನ್ನೂ ತಿಳಿಯಬೇಕು.






