---Advertisement---

ಸೋನಿಯಾ ಗಾಂಧಿ ಪೌರತ್ವ ಪಡೆಯುವ ಮುನ್ನವೇ ವೋಟರ್‌ ಲಿಸ್ಟ್‌ನಲ್ಲಿ ಹೆಸರು :ಬಿಜೆಪಿ ಆರೋಪ BJP alleges Sonia Gandhi was on voter list before getting citizenship.

By krutika naik

Updated on:

Follow Us
BJP alleges Sonia Gandhi was on voter list before getting citizenship.
---Advertisement---

ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಗಳನ್ನು ಮಾಡಿದ್ದಾರೆ. 1980 ರಲ್ಲಿ ಸೋನಿಯಾ ಗಾಂಧಿ ಚುನಾವಣಾ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅಧಿಕೃತವಾಗಿ ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲೇ ಸೋನಿಯಾ ಗಾಂಧಿ ಮತದಾರರ ಪಟ್ಟಿಯಲ್ಲಿ ಹೆಸರು ಕಾಣಿಸಿಕೊಂಡಿತ್ತು ಎಂದು ಆರೋಪಿಸಿದ್ದಾರೆ.

ಕರ್ನಾಟಕದಲ್ಲಿ ಮತಗಳವು ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಈ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಬಿಹಾರದಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ನೆಪದಲ್ಲಿ ಅಕ್ರಮ ನಡೆಸಲಾಗುತ್ತಿದೆ.

ಸೋನಿಯಾ ಗಾಂಧಿಯವರನ್ನು ಭಾರತೀಯ ಪ್ರಜೆಯಾಗುವ ಮೊದಲು 45 ವರ್ಷಗಳ ಹಿಂದೆ ಮತದಾರರ ಪಟ್ಟಿಗೆ ಅಕ್ರಮವಾಗಿ ಸೇರಿಸಲಾಗಿತ್ತು ಎಂದು ಬಿಜೆಪಿ ಟೀಕಿಸಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ಭಾರತೀಯ ನಾಗರಿಕರಾಗುವ ಮೊದಲೇ ಭಾರತದಲ್ಲಿ ಮತದಾರರಾಗಿ ನೋಂದಾಯಿಸಲ್ಪಟ್ಟಿದ್ದರು ಎಂದು ಬಿಜೆಪಿ ಅರೋಪಿಸಿದ್ದರು.

ಸೋನಿಯಾ ಗಾಂಧಿ ಚುನಾವಣಾ ನೋಂದಣಿಗೆ ಅರ್ಹತಾ ದಿನಾಂಕ 1983ರ ಜನವರಿ 1 ರಂದು ಇದ್ದು, 1983ರ ಏಪ್ರಿಲ್ 30 ರಂದು ಭಾರತೀಯ ಪೌರತ್ವ ನೀಡಲಾಯಿತು.  ಸೋನಿಯಾ ಗಾಂಧಿ ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲು ಮತ್ತು ಅವರು ಇನ್ನೂ ಇಟಲಿ ಪೌರತ್ವವನ್ನು ಹೊಂದಿದ್ದರು. ಆ ಸಮಯದಲ್ಲಿ, ಗಾಂಧಿ ಕುಟುಂಬವು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ನಿವಾಸವಾದ 1, ಸಫ್ದರ್ಜಂಗ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಆ ವಿಳಾಸದಲ್ಲಿ ನೋಂದಾಯಿಸಿದ ಮತದಾರರು ಪಟ್ಟಿಯಲ್ಲಿ ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿ ಇದ್ದರು.

1980 ರಲ್ಲಿ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿ ಪರಿಷ್ಕರಿಸಲಾಯಿತು ಮತ್ತು ಆಗ ಸೋನಿಯಾ ಹೆಸರನ್ನು ಪಟ್ಟಿಗೆ ಸೇರಿಸಲಾಯಿತು. ಇದರ ಬೆನ್ನಲ್ಲೇ 1982 ರಲ್ಲಿ ವ್ಯಾಪಕ ಆಕ್ರೋಶದ ನಂತರ ಸೋನಿಯಾ ಹೆಸರನ್ನು ಪಟ್ಟಿಯಿಂದ ಅಳಿಸಲಾಯಿತು. ಆದರೆ 1983 ರಲ್ಲಿ ಮಾತ್ರ ಮತ್ತೆ ಸೇರಿಸಲಾಯಿತು. ಆ ವರ್ಷ ಮತದಾರರ ಪಟ್ಟಿಯ ಹೊಸ ಪರಿಷ್ಕರಣೆಯಲ್ಲಿ, ಸೋನಿಯಾ ಗಾಂಧಿಯವರ ಹೆಸರನ್ನು ಮತಗಟ್ಟೆ 140 ರಲ್ಲಿ ಕ್ರಮ ಸಂಖ್ಯೆ 236 ರಲ್ಲಿ ಪಟ್ಟಿ ಮಾಡಲಾಗಿದೆ ಎಂದು ಮಾಳವಿಯಾ ಆರೋಪ ಮಾಡಿದ್ದಾರೆ.

ಸೋನಿಯಾ ಗಾಂಧಿ ಹೆಸರು ಮೂಲಭೂತ ಪೌರತ್ವ ಅವಶ್ಯಕತೆಗಳನ್ನು ಪೂರೈಸದೆ ಎರಡು ಬಾರಿ ಮತದಾರರ ಪಟ್ಟಿಯಲ್ಲಿ ಸೇರಿದೆ. ರಾಜೀವ್ ಗಾಂಧಿಯವರನ್ನು ಮದುವೆಯಾದ ನಂತರವೂ ಭಾರತೀಯ ಪೌರತ್ವವನ್ನು ಸ್ವೀಕರಿಸಲು 15 ವರ್ಷಗಳನ್ನು ಏಕೆ ತೆಗೆದುಕೊಂಡರು ಎಂದು ನಾವು ಕೇಳುತ್ತಿಲ್ಲ. ಅದರ ಬದಲಿಗೆ ಸೋನಿಯಾ ಗಾಂಧಿ ಚುನಾವಣಾ ಅಕ್ರಮ ಎಸಗಿದ್ದಾರೆ ಎಂದು ಮಾಳವೀಯ ಟೀಕಿಸಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

---Advertisement---

Leave a Comment