ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ರಾಜ್ಯದಲ್ಲಿ ಹಿಂದೂ ಯುವಕರಿಗೆ ರಕ್ಷಣೆ ಇಲ್ಲದಂತಾಗಿದೆ. ರಾಜ್ಯದಲ್ಲಿರುವುದು ಮುಸ್ಲಿಂ ಪರ ಸರ್ಕಾರವಾಗಿದೆ. ಸಿದ್ದರಾಮಯ್ಯ ಸರ್ಕಾರ ಅಹಿಂದ ಸರ್ಕಾರ ಎಂದೆನ್ನುತ್ತಿದೆ. ಆದರೆ ರಾಜ್ಯದಲ್ಲಿ ಅಹಿಂದ ಅಲ್ಲ, ಅಲ್ಪಸಂಖ್ಯಾತರ ರಕ್ಷಣೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಹಿಂದೂ ಯುವಕ ಗವಿಸಿದ್ದಪ್ಪ ನಾಯಕ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ಸಿಎಂ ಸಿದ್ದರಾಮಯ್ಯ ಸರಕಾರವನ್ನ ಅಧಿವೇಶನದಲ್ಲಿ ನಾವು ತರಾಟೆ ತೆಗೆದುಕೊಳ್ಳಲಿದ್ದೇವೆ. ಯಾರೂ ಮುಸ್ಲಿಂ ಯುವತಿಯರನ್ನು ಪ್ರೀತಿ ಮಾಡಬಾರದಾ ? ಅವರನ್ನು ಮದುವೆ ಆಗಬಾರದೆಂದು ಏಲ್ಲಿದೆ ? ಇನ್ಮುಂದೆ ನಾವು ಹಿಂದೂ ಯುವಕರು ಮುಸ್ಲಿಂ ಯುವತಿಯನ್ನು ಮದುವೆಯಾದರೆ 5 ಲಕ್ಷ ರೂ. ಕೊಡುವೆವು ಎನ್ನುವ ಅಭಿಯಾನ ಆರಂಭಿಸಲಿದ್ದೇವೆ ಎಂದರು.
ಕೊಪ್ಪಳದ ಹಿಂದೂ ಯುವಕನ ಕೊಲೆಯಲ್ಲಿ ಸರಕಾರವೂ ಸಾಥ್ ನೀಡಿದೆ. ಕೊಲೆ ಮಾಡಿದ ಯುವಕನ ಕೈಯಲ್ಲಿ ಲಾಂಗ್ ಹಿಡಿಕೊಂಡು ತೋರಿಸಿ ರೀಲ್ಸ್ ಮಾಡಿದ್ದಾನೆ. ಆದರೆ ಸರಕಾರ ಪೊಲೀಸರ ಕೈ ಕಟ್ಟಿ ಹಾಕಿದೆ. ಆ ಕುಟುಂಬಕ್ಕೆ ನ್ಯಾಯ ಸಿಗುವ ವರೆಗೂ ಹೋರಾಟ ಮಾಡಲಿದ್ದೇವೆ ಎಂದು ಹೇಳಿದ್ದಾರೆ.
ಮುಸ್ಲಿಂ ಮಹಿಳೆಯನ್ನು ಮದುವೆಯಾಗುವ ಹಿಂದೂ ಯುವಕನಿಗೆ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿದ ಶಾಸಕ ಯತ್ನಾಳ್!!! ₹5 lakh for a Hindu youth marrying a Muslim woman.
By krutika naik
Published on:
