---Advertisement---

ಮಗನ ಸಾವಿನ ನೋವಿನಲ್ಲಿ 6 ಕೋಟಿ ರೂ. BMW ಕಾರನ್ನು ಸಮಾಧಿ ಮಾಡಿದ ತಂದೆ

On: February 14, 2026 1:34 PM
Follow Us:
---Advertisement---

ಪುತ್ರ ಶೋಕವೆಂಬುದು ಜೀವನಪೂರ್ತಿ ಮರೆಯಲಾಗದ ನೋವು ಎಂಬ ಮಾತಿದೆ. ಪೋಷಕರು ತಮ್ಮ ಮಕ್ಕಳಿಗಾಗಿ ಜೀವನವನ್ನೇ ಅರ್ಪಿಸುತ್ತಾರೆ. ಅಂತಹ ಮಗನೇ ಕಣ್ಣೆದುರೇ ದುರಂತ ಅಂತ್ಯ ಕಂಡರೆ ಆ ಪೋಷಕರ ಹೃದಯದ ಸ್ಥಿತಿ ಹೇಗಿರಬಹುದು ಎಂದು ಊಹಿಸಲು ಕೂಡ ಕಷ್ಟ.

ಮಗನ ಮೇಲೆ ಅಪಾರ ಪ್ರೀತಿ ಹೊಂದಿದ್ದ ತಂದೆ, ಅವನ ಹುಟ್ಟುಹಬ್ಬದಂದು ಬರೋಬ್ಬರಿ 6 ಕೋಟಿ ರೂಪಾಯಿ ಮೌಲ್ಯದ BMW ಕಾರನ್ನು ಉಡುಗೊರೆಯಾಗಿ ನೀಡಿದ್ದರು. ವಿಶೇಷವೆಂದರೆ, ಈ ಕಾರು ಮಗನಿಗೆ ತಿಳಿಯದೆ ಸರ್ಪ್ರೈಸ್ ಆಗಿ ಬುಕ್ ಮಾಡಲಾಗಿತ್ತು. ಹುಟ್ಟುಹಬ್ಬದ ದಿನ ಕಾರು ನೋಡಿದ ಮಗನ ಸಂತೋಷಕ್ಕೆ ಅಳೆಯೇ ಇರಲಿಲ್ಲ. ತಂದೆಯ ಪ್ರೀತಿಯ ಕಾಣಿಕೆಯನ್ನು ಸ್ವೀಕರಿಸಿ, ಪೋಷಕರನ್ನೇ ಕಾರಿನಲ್ಲಿ ಕೂರಿಸಿಕೊಂಡು ಸುತ್ತಾಟಕ್ಕೂ ಕರೆದೊಯ್ದಿದ್ದ.

ಆದರೆ ವಿಧಿಯಾಟ ಕ್ರೂರವಾಗಿತ್ತು. ಕಾರು ಮನೆಗೆ ಬಂದ ಕೆಲವೇ ದಿನಗಳಲ್ಲಿ ಮಗ ದುರಂತವಾಗಿ ಸಾವನ್ನಪ್ಪಿದ. ಈ ಆಘಾತವನ್ನು ತಾಳಲಾಗದೆ ಪೋಷಕರು ದುಃಖದಲ್ಲಿ ಮುಳುಗಿದರು. ಪ್ರತಿದಿನ ಬೆಳಗ್ಗೆ ಮನೆ ಮುಂದೆ ನಿಂತಿದ್ದ ಆ ಕಾರು ಕಾಣಿಸಿದಾಗ ತಂದೆಯ ಮನಸ್ಸು ಮುರಿದು ಹೋಗುತ್ತಿತ್ತು. ಮಗನ ನೆನಪುಗಳು ಮತ್ತಷ್ಟು ಕಾಡುತ್ತಿದ್ದವು.

“ಮಗನೇ ಇಲ್ಲದ ಮೇಲೆ ಈ ಕಾರಿನ ಅರ್ಥವೇನು?” ಎಂಬ ಪ್ರಶ್ನೆ ತಂದೆಯ ಮನಸ್ಸನ್ನು ಕಾಡಿತು. ಕೊನೆಗೆ, ಮಗನ ಸಮಾಧಿ ಪಕ್ಕದಲ್ಲೇ ಹೊಸ BMW ಕಾರನ್ನು ಸಮಾಧಿ ಮಾಡುವ ನಿರ್ಧಾರಕ್ಕೆ ಬಂದರು. ಜೆಸಿಬಿ ಯಂತ್ರದ ಸಹಾಯದಿಂದ ಗುಂಡಿ ಅಗೆದು, ಕಾರನ್ನು ಅದರಲ್ಲಿ ಇಳಿಸಲಾಯಿತು. ನಂತರ ಕಾಂಕ್ರೀಟ್ ಸುರಿದು ಸಂಪೂರ್ಣವಾಗಿ ಮುಚ್ಚಲಾಯಿತು. ಕೊನೆಯಲ್ಲಿ ಕಾರಿನ ಕೀಲಿಯನ್ನೂ ಅದೇ ಗುಂಡಿಗೆ ಎಸೆದು ಮಣ್ಣು ಹಾಕಲಾಯಿತು.

ಈ ಹೃದಯವಿದ್ರಾವಕ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡಿದವರನ್ನು ಭಾವುಕರನ್ನಾಗಿಸಿದೆ.

Join WhatsApp

Join Now

RELATED POSTS

Leave a Comment