---Advertisement---

ರಾತ್ರಿ ಮಲಗಿದ್ದಳು… ಬೆಳಿಗ್ಗೆ ಎದ್ದು ನೋಡಿದ್ರೆ ಮಂಚದ ಮೇಲೆ ಹಾವಿನ ಪೊರೆ!! ನಾಪತ್ತೆಯಾದ ಯುವತಿಗೆ ಏನಾಯಿತು?

On: February 12, 2026 2:18 PM
Follow Us:
---Advertisement---

ರಾತ್ರಿ ಮನೆಯವರೊಂದಿಗೆ ಸುಖವಾಗಿ ಮಾತುಕತೆ ನಡೆಸಿ ತನ್ನ ಕೋಣೆಗೆ ನಿದ್ರೆಗೆ ಹೋದ ಯುವತಿ, ಬೆಳಿಗ್ಗೆ ಎದ್ದಾಗ ಕಾಣೆಯಾಗಿರುವುದು ಕುಟುಂಬಸ್ಥರನ್ನು ಬೆಚ್ಚಿಬೀಳುವಂತೆ ಮಾಡಿತು. ಆಕೆಯನ್ನು ಎಬ್ಬಿಸಲು ಹೋದವರು ಮಂಚದ ಮೇಲಿದ್ದ ಬೆಡ್‌ಶೀಟ್‌ನ್ನು ತೆರೆಯುತ್ತಿದ್ದಂತೆಯೇ ಐದು ಅಡಿ ಉದ್ದದ ಹಾವಿನ ಪೊರೆ ಕಂಡು ಆತಂಕಗೊಂಡಿದ್ದಾರೆ.

ಈ ಅಚ್ಚರಿಯ ಘಟನೆ ಉತ್ತರ ಪ್ರದೇಶದ ಸಿಂಗನಪುರ ಗ್ರಾಮದಲ್ಲಿ ನಡೆದಿದೆ. ಮಲಗಿದ್ದ ಹಾಸಿಗೆಯ ಮೇಲೆ ಹಾವಿನ ಚರ್ಮ ಹೇಗೆ ಬಂತು? ಯುವತಿ ಎಲ್ಲಿ ಹೋದಳು? ಎಂಬ ಪ್ರಶ್ನೆಗಳು ಕುಟುಂಬಸ್ಥರ ಮನಸ್ಸನ್ನು ಕಾಡಿದವು. ಕೆಲವರು ಆಕೆ ಹಾವಾಗಿ ಮಾರ್ಪಟ್ಟಿದ್ದಾಳೆ ಎಂಬ ವದಂತಿಗಳನ್ನು ಹಬ್ಬಿಸಿದ್ದರಿಂದ ಪರಿಸ್ಥಿತಿ ಇನ್ನಷ್ಟು ಗೊಂದಲಮಯವಾಗಿದೆ.

ಇದನ್ನು ಓದಿ: ಈ ಗಿಡ ತೋಟದಲ್ಲಿದ್ದರೆ ಎಚ್ಚರ! ಹಾವುಗಳನ್ನು ಆಹ್ವಾನಿಸುವ ಈ ಗಿಡವನ್ನು ತಕ್ಷಣ ಕಿತ್ತಿ ಎಸೆಯಿರಿ!!

ಇದನ್ನು ಓದಿ: ಹಾವುಗಳು ಈ ವಾಸನೆಗೆ ಆಕರ್ಷಿತವಾಗುತ್ತವಂತೆ..! ನಿಮ್ಮ ಮನೆಯಲ್ಲಿ ಇದಿದ್ದರೆ ತಕ್ಷಣ ತೆಗೆದುಹಾಕಿ!

ಇದನ್ನು ಓದಿ: ತೆಂಗಿನಕಾಯಿಯಿಂದ ಬೋರ್‌ವೆಲ್ ಪಾಯಿಂಟ್ ಪತ್ತೆ ಸಾಧ್ಯವೇ? ವಿಜ್ಞಾನ ಹೇಳುವ ನಿಜಾಂಶ ಇಲ್ಲಿದೆ

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕಾಗಮಿಸಿ, ಪ್ರೀತಿಪ್ರಸಂಗವೋ ಅಥವಾ ಬೇರೆ ಕಾರಣವೋ ಎಂಬ ಎಲ್ಲ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದಾರೆ. ಯುವತಿ ಹಾವಾಗಿ ಬದಲಾಗಿದೆ ಎಂಬ ಮಾತು ಸಂಪೂರ್ಣ ಸುಳ್ಳು ಎಂದು ಪೊಲೀಸರು ಸ್ಪಷ್ಟಪಡಿಸಿದರೂ ಘಟನೆ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಬೆಳಿಗ್ಗೆ ಸಾಕಷ್ಟು ಸಮಯವಾದರೂ ಯುವತಿ ಕೋಣೆಯಿಂದ ಹೊರಬರದ ಕಾರಣ ಕುಟುಂಬಸ್ಥರು ಆಕೆಯ ಕೋಣೆಗೆ ತೆರಳಿದ್ದಾರೆ. ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಹಾಸಿಗೆಯ ಮೇಲಿದ್ದ ಹೊದಿಕೆಯನ್ನು ತೆರೆಯುತ್ತಿದ್ದಂತೆಯೇ ಹಾವಿನ ಚರ್ಮ ಕಂಡು ಕ್ಷಣಕಾಲ ಬೆರಗಾಗಿದ್ದಾರೆ.

ಮಗಳು ಮಲಗಿದ್ದ ಜಾಗದಲ್ಲಿ ಹಾವಿನ ಪೊರೆ ಪತ್ತೆಯಾಗಿರುವುದು ಕುಟುಂಬದ ಆತಂಕವನ್ನು ಹೆಚ್ಚಿಸಿದೆ. ವಿಷಯ ತಿಳಿದು ಗ್ರಾಮಸ್ಥರೂ ಮನೆಗೆ ಸೇರಿ ವಿವಿಧ ರೀತಿಯ ಊಹಾಪೋಹಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶದಲ್ಲಿ ಹಾವುಗಳು ಕಂಡುಬಂದಿದ್ದ ಘಟನೆಗಳು ಹಿಂದೆ ನಡೆದಿವೆ ಎಂಬ ಮಾಹಿತಿ ಕೂಡ ಹೊರಬಂದಿದೆ.

ಮಗಳ ನಾಪತ್ತೆಯಿಂದ ಮನನೊಂದು ಮಾತನಾಡಿದ ಪೋಷಕರು, ಆಕೆ ಸುರಕ್ಷಿತವಾಗಿ ಮರಳಲಿ ಎಂಬುದು ನಮ್ಮ ಏಕೈಕ ಆಶಯ ಎಂದು ತಿಳಿಸಿದ್ದಾರೆ. ಅಜಿತ್ಮಲ್ ವೃತ್ತಾಧಿಕಾರಿ ಮನೋಜ್ ಗಂಗ್ವಾರ್ ನೇತೃತ್ವದಲ್ಲಿ ಪೊಲೀಸರು ತನಿಖೆ ಮುಂದುವರೆಸಿದ್ದು, ತಂದೆಯ ದೂರಿನ ಮೇರೆಗೆ ಬಿಎನ್‌ಎಸ್ ಸೆಕ್ಷನ್ 87ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮಹಿಳೆ ಹಾವಾಗಿ ಮಾರ್ಪಟ್ಟಿದ್ದಾಳೆ ಎಂಬುದು ನಂಬಲಸಾಧ್ಯ ಮತ್ತು ಆಧಾರರಹಿತ ಎಂಬುದಾಗಿ ಪೊಲೀಸರು ಹೇಳಿದ್ದಾರೆ.

ಹಾಸಿಗೆಯ ಮೇಲೆ ಕಂಡುಬಂದ ಹಾವಿನ ಚರ್ಮ ಮತ್ತು ಚದುರಿದ ಬಟ್ಟೆಗಳು ತನಿಖೆಯನ್ನು ತಪ್ಪುದಾರಿಗೆ ದೂಡಲು ಉದ್ದೇಶಿತವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮನೆಯಲ್ಲಿ ಇದ್ದ ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡು ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಾಥಮಿಕ ಮಾಹಿತಿ ಪ್ರಕಾರ, ಕಾಣೆಯಾದ ಯುವತಿ ಗ್ರಾಮದಲ್ಲೇ ಒಬ್ಬ ಯುವಕನೊಂದಿಗೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ. ಹಾವಿನ ಪೊರೆಯನ್ನು ತನ್ನ ಬಟ್ಟೆಯಲ್ಲಿ ಸುತ್ತಿ ಮಂಚದ ಮೇಲೆ ಇಟ್ಟು ಮನೆಬಿಟ್ಟು ಹೊರಟಿರುವ ಸಾಧ್ಯತೆ ಕುರಿತು ಗ್ರಾಮದಲ್ಲಿ ಮಾತುಕತೆ ನಡೆಯುತ್ತಿದೆ. ಕುಟುಂಬದ ಗಮನವನ್ನು ಬೇರೆಡೆಗೆ ತಿರುಗಿಸಲು ಈ ಯುಕ್ತಿಯನ್ನು ಬಳಸಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಆದರೆ ಪ್ರಕರಣದ ನಿಜಸ್ವರೂಪ ಬಹಿರಂಗಗೊಳ್ಳಲು ಪೊಲೀಸರು ತೀವ್ರ ತನಿಖೆ ಮುಂದುವರೆಸಿದ್ದಾರೆ.

ಇದನ್ನು ಓದಿ: ಸಲ್ಲಿಂಗ ಪ್ರೇಮದ ಮದದಲ್ಲಿ ತಾಯಿಯ ಕ್ರೂರ ಕೃತ್ಯ!! 5 ತಿಂಗಳ ಶಿಶು ಉಸಿರುಗಟ್ಟಿದ ಕೊಂದ ಮಹಿಳೆ…

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment