ಯಾವ ಪ್ರಕರಣಕ್ಕೆ ಎಫ್‌ಐಆರ್ ದಾಖಲಾಗುತ್ತದೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ. ಇದೀಗ ಬೆಂಗಳೂರಿನಲ್ಲಿ ಗರ್ಭಿಣಿ ಬೆಕ್ಕನ್ನು ಅಪಹರಿಸಿ ಸ್ಥಳಾಂತರ ಮಾಡಿದ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಪ್ರಾಣಿಪ್ರಿಯರ ದೂರು ಇದಕ್ಕೆ ಪ್ರಮುಖ ಕಾರಣವಾಗಿದೆ.
ಬೆಕ್ಕಿನ ಹಕ್ಕು ಮತ್ತು ಸುರಕ್ಷತೆಯ ವಿಚಾರದಲ್ಲಿ ಒಟ್ಟು 9 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಅಪಾರ್ಟ್‌ಮೆಂಟ್‌ನಿಂದ ಗರ್ಭಿಣಿ ಬೆಕ್ಕನ್ನು ಬಲವಂತವಾಗಿ ತೆಗೆದುಕೊಂಡು ಹೋಗಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಪ್ರಾಣಿಪ್ರಿಯರು ಪೊಲೀಸರಿಗೆ ದೂರು ನೀಡಿದ್ದಾರೆ.
ಇದನ್ನು ಓದಿ: KSRTC ಬಸ್‌ನಲ್ಲಿ ಬೆಕ್ಕಿನ ಮರಿಗೂ ಟಿಕೆಟ್; ನಿರ್ವಾಹಕ
ಇದನ್ನು ಓದಿ: 48 ಗಂಟೆಗಳ ಕಾಲ ಹನುಮಂತನವಿಗ್ರಹಕ್ಕೆ ಪ್ರದಕ್ಷಿಣೆ ಹಾಕಿದ ನಾಯಿ; ಬಿಜ್ನೋರ್ ದೇವಾಲಯದಲ್ಲಿ ಅಚ್ಚರಿ ಘಟನೆ…!!
ಇದನ್ನು ಓದಿ: ಟಾಮ್ ಅಂಡ್ ಜೆರಿ ಸಣ್ಣ ಕಲ್ಪನೆಯಿಂದ ದೈತ್ಯ ಹಣಕಾಸಿನ ಸಾಮ್ರಾಜ್ಯ
ಗರ್ಭಿಣಿ ಬೆಕ್ಕನ್ನು ಅಕ್ರಮವಾಗಿ ಕಿಡ್ನ್ಯಾಪ್ ಮಾಡಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿದ್ದಾರೆ ಎಂದು ಆರೋಪಿಸಲಾಗಿದ್ದು, ಅಪಾರ್ಟ್‌ಮೆಂಟ್ ಅಧ್ಯಕ್ಷ ಶ್ರೀರಾಂ, ಸೆಕ್ಯುರಿಟಿ ಮ್ಯಾನೇಜರ್ ಸೇರಿದಂತೆ ಒಂಬತ್ತು ಜನರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವನಶ್ರೀ ಅಪಾರ್ಟ್‌ಮೆಂಟ್‌ನ ಸಿಬ್ಬಂದಿಯ ಮೇಲೂ ದೂರು ಸಲ್ಲಿಕೆಯಾಗಿದ್ದು, ಪ್ರಿವೆನ್ಷನ್ ಆಫ್ ಅನಿಮಲ್ ಕ್ರೂಯಾಲಿಟಿ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಾಣಿಗಳ ಮೇಲೆ ದೌರ್ಜನ್ಯ ತಡೆಯುವ ಕಾನೂನು ಅನ್ವಯ ಈ ಕ್ರಮ ಕೈಗೊಳ್ಳಲಾಗಿದೆ.
ಹರೀಶ್ ಎಂಬವರು ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಈ ಸಂಬಂಧ ಎಚ್‌ಎಎಲ್ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.
ಇದನ್ನು ಓದಿ: ಜ್ಯೋತಿಷ್ಯ ಸಲಹೆ ಹೆಸರಿನಲ್ಲಿ ಮಹಿಳೆಯನ್ನು ಬುಟ್ಟಿಗೆ ಬೀಳಿಸಿದ ಕಮಲಾಕರ್ ಭಟ್; ಕೊಲೆಯವರೆಗೆ ಹೋದ ವಿವಾದ..






