---Advertisement---

ಉಡುಪಿ ಮೂಲದ ಯುವಕನಿಗೆ ಅದೃಷ್ಟದ ಲಾಟರಿ; ಸ್ನೇಹಿತನ ಜೊತೆ 49 ಕೋಟಿ ಗೆದ್ದಿದ್ದು ಹೇಗೇ?

On: February 6, 2026 11:49 AM
Follow Us:
---Advertisement---

ಯಾರಿಗೆ ಯಾವ ಕ್ಷಣದಲ್ಲಿ ಭಾಗ್ಯ ಕೈ ಹಿಡಿಯುತ್ತದೆ ಎಂಬುದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಇದೀಗ ದುಬೈ ಮಸ್ಕತ್‌ನಲ್ಲಿ ಉದ್ಯೋಗದಲ್ಲಿರುವ ಕರ್ನಾಟಕದ ಉಡುಪಿ ಜಿಲ್ಲೆಯ ಯುವಕನೊಬ್ಬನ ಜೀವನವೇ ಬದಲಾಗಿದೆ.

ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಶೆಟ್ಟಿಗಾರ್ ಮಸ್ಕತ್‌ನಲ್ಲಿ ರಿಟೇಲ್ ವಲಯದಲ್ಲಿ ಕೆಲಸ ಮಾಡುತ್ತಿದ್ದು, ಅಬುದಾಭಿಯಲ್ಲಿ ನಡೆದ ಬಿಗ್ ಟಿಕೆಟ್ ಡ್ರಾದಲ್ಲಿ ಭಾರೀ ಮೊತ್ತದ ಲಾಟರಿ ಗೆದ್ದಿದ್ದಾರೆ.

ಜನವರಿ 20ರಂದು ಶಂತನು 305810 ಸಂಖ್ಯೆಯ ಬಿಗ್ ಟಿಕೆಟ್ ಖರೀದಿಸಿದ್ದರು. ಫೆಬ್ರವರಿ 3ರಂದು ಡ್ರಾ ಫಲಿತಾಂಶ ಪ್ರಕಟವಾಗಿದ್ದು, ಅದರಲ್ಲಿ 20 ಮಿಲಿಯನ್ ದಿರಮ್‌ಗಳ (ಸುಮಾರು 49 ಕೋಟಿ ರೂ.) ಜ್ಯಾಕ್‌ಪಾಟ್ ಅವರಿಗೆ ಸಿಕ್ಕಿದೆ.

ಇದನ್ನು ಓದಿ: ಬ್ರಿಟನ್‌ನಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಕರಣವು ಜಾಗೃತಿ ಮೂಡಿಸಿದೆ

ಇದನ್ನು ಓದಿ:ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೇ? ಟೆಕ್ಸಾಸ್‌ನಲ್ಲಿ ನಡೆದ ಅಪರೂಪದ ವೈದ್ಯಕೀಯ ಸಾಧನೆ

ಇದನ್ನು ಓದಿ: ರಾತ್ರಿ ಪಾರ್ಟಿ, ಬೆಳಗ್ಗೆ ಸಾವು..ಮಲಗಿದ್ದಲ್ಲೇ ನಾಲ್ವರು ಯುವಕರ ಸಾವು… ಆ ಶೆಡ್‌ನಲ್ಲಿ ನಡೆದಿದ್ದೇನು?


ಆದರೆ ಈ ಲಾಟರಿ ಟಿಕೆಟ್‌ನ್ನು ಶಂತನು ತನ್ನ ಸ್ನೇಹಿತನೊಂದಿಗೆ ಜಂಟಿಯಾಗಿ ಖರೀದಿಸಿದ್ದ ಕಾರಣ, ಒಟ್ಟು ಮೊತ್ತವನ್ನು ಇಬ್ಬರೂ ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಅದರಂತೆ ಶಂತನಿಗೆ ಸಿಗುವ ಮೊತ್ತ ಸುಮಾರು 24.5 ಕೋಟಿ ರೂಪಾಯಿಯಾಗಿದೆ.

ಡ್ರಾ ಫಲಿತಾಂಶ ನೇರ ಪ್ರಸಾರವಾಗಿದ್ದ ವೇಳೆ ಆಯೋಜಕರೊಂದಿಗೆ ಮಾತನಾಡಿದ ಶಂತನು ತಮ್ಮ ಸಂತಸವನ್ನು ವ್ಯಕ್ತಪಡಿಸಿದ್ದಾರೆ. 2021ರಿಂದಲೇ ಬಿಗ್ ಟಿಕೆಟ್ ರಾಫಲ್‌ನಲ್ಲಿ ಭಾಗವಹಿಸುತ್ತಿದ್ದೇನೆ. ಈ ಗೆಲುವು ಸಂಪೂರ್ಣ ಅನಿರೀಕ್ಷಿತ. ನನಗೆ ಸಿಕ್ಕಿರುವುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment