---Advertisement---

ಮಧ್ಯರಾತ್ರಿ ಸ್ಮಶಾನದಿಂದ ಬಿರಿಯಾನಿ ಆರ್ಡರ್ ಮಾಡಿದ ಲೇಡಿ..ಬೆಚ್ಚಿಬಿದ್ದ ಡೆಲಿವರಿ ಪಾರ್ಟ್ನರ್!!!

On: February 2, 2026 6:41 PM
Follow Us:
---Advertisement---

ಸುಡುವ ಬಿಸಿಲು ಆಗಲಿ, ಕಟುವಾದ ಚಳಿ ಆಗಲಿ ಸಮಯಕ್ಕೆ ತಿನ್ನೋ ಊಟ ನಮ್ಮ ಕೈಗೆ ತಲುಪೋಕೆ ಹಗಲು-ರಾತ್ರಿ ನೋಡದೇ ಶ್ರಮಪಡುವವರು ಫುಡ್ ಡೆಲಿವರಿ ಪಾರ್ಟ್ನರ್‌ಗಳು. ನಮಗೆ ಹಸಿವು ಕಾಡಿದಾಗ, ಗಂಟೆ ನೋಡದೇ ಮನೆ ಬಾಗಿಲಿಗೆ ಊಟ ತಂದುಕೊಡುವ ಮೂಲಕ ನಮ್ಮ ಹೊಟ್ಟೆ ತಣಿಸುವ ಮಹತ್ವದ ಕೆಲಸ ಇವರದು.

ಕಂಪನಿಗಳು ಸರ್ವೀಸ್ ಚಾರ್ಜ್ ವಸೂಲಿ ಮಾಡಿದರೂ, ಸಮಯಕ್ಕೆ ಸರಿಯಾಗಿ ಊಟ ತಲುಪಿಸುವ ಜವಾಬ್ದಾರಿಯನ್ನು ಈ ಡೆಲಿವರಿ ಸಿಬ್ಬಂದಿ ನಿಸ್ವಾರ್ಥವಾಗಿ ನಿಭಾಯಿಸುತ್ತಿದ್ದಾರೆ. ಟ್ರಾಫಿಕ್ ಸಿಗ್ನಲ್‌ಗಳು, ಮಳೆ, ಚಳಿ, ಕತ್ತಲೆ ಯಾವುದನ್ನೂ ಲೆಕ್ಕಿಸದೇ ಸಮಯದ ವಿರುದ್ಧ ಓಡುತ್ತಾ ಮನೆ ಮನೆಗೆ ಆಹಾರ ತಲುಪಿಸುವವರು ಇವರು. ಹೀಗಾಗಿ ಈ ಫುಡ್ ಡೆಲಿವರಿ ಪಾರ್ಟ್ನರ್‌ಗಳನ್ನು “ಅನ್‌ಸಂಗ್ ಹೀರೋಗಳು” ಎಂದು ಕರೆಯುವುದರಲ್ಲಿ ಯಾವ ಅತಿಶಯೋಕ್ತಿಯೂ ಇಲ್ಲ.

https://www.instagram.com/reel/DUQ3do4k7Kr/?igsh=MXF6dDEyM3Zjb24xMQ==

ಇದನ್ನು ಓದಿ: SHOCKING : ‘AI’ ಸಲಹೆ ನಂಬಿ ‘HIV’ ಔಷಧಿ ಸೇವಿಸಿದ ರೋಗಿ ಆಸ್ಪತ್ರೆಗೆ ದಾಖಲು – ವೈದ್ಯರೇ ಶಾಕ್!

ಇದನ್ನು ಓದಿ: ವೃದ್ಧ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ಕೋಲೆ ಮಾಡಿ ಮನೆ ಕೆಲಸಗಾರ ಆತ್ಮಹತ್ಯೆ!!!!

ಆದರೆ ಇಂತಹ ಕೆಲಸದಲ್ಲಿ ಪ್ರತಿದಿನವೂ ವಿಭಿನ್ನ ಅನುಭವಗಳು, ಅಚ್ಚರಿಗಳು ಎದುರಾಗುತ್ತಲೇ ಇರುತ್ತವೆ. ಹೀಗಿರುವಾಗ, ಮಧ್ಯರಾತ್ರಿ ಸಮಯದಲ್ಲಿ ಕಗ್ಗತ್ತಲಿನ ಸ್ಮಶಾನದಿಂದಲೇ ಫುಡ್ ಆರ್ಡರ್ ಬಂದರೆ ಹೇಗಿರಬಹುದು ಎಂದು ನೀವೇ ಊಹಿಸಿ. ಇಂತಹ ವಿಚಿತ್ರ ಘಟನೆಯೊಂದನ್ನು ತೋರಿಸುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಒಬ್ಬ ಮಹಿಳೆ ಫುಡ್ ಡೆಲಿವರಿ ಆಪ್ ಮೂಲಕ ಬಿರಿಯಾನಿ ಆರ್ಡರ್ ಮಾಡುತ್ತಾರೆ. ಆ ಆರ್ಡರ್ ತಲುಪಿಸಲು ಹೊರಟ ಡೆಲಿವರಿ ಬಾಯ್, ಲೊಕೇಶನ್‌ಗೆ ಬಂದಾಗ ಬೆಚ್ಚಿಬೀಳುತ್ತಾನೆ. ಏಕೆಂದರೆ ಅವನಿಗೆ ತೋರಿದ ಅಡ್ರೆಸ್ ಒಂದು ಸ್ಮಶಾನದ ಪ್ರವೇಶ ದ್ವಾರವಾಗಿರುತ್ತದೆ. ಸ್ವಲ್ಪ ಆತಂಕಗೊಂಡರೂ ಧೈರ್ಯ ಹಿಡಿದು, ಆರ್ಡರ್ ಮಾಡಿದ ನಂಬರ್‌ಗೆ ಆತ ಕಾಲ್ ಮಾಡುತ್ತಾನೆ. ಫೋನ್ ಕರೆ ಸ್ವೀಕರಿಸಿದ ಆ ಮಹಿಳೆ, ಎದುರು ಸ್ಮಶಾನ ಕಾಣಿಸುತ್ತಿದೆಯಾ ಎಂದು ಕೇಳುತ್ತಾಳೆ. ಹೌದು ಎಂದು ಉತ್ತರಿಸಿದಾಗ, ಅದರೊಳಗೆ ಬನ್ನಿ ಎಂದು ಆಕೆ ಹೇಳುತ್ತಾಳೆ. ಆದರೆ ಒಳಗೆ ತುಂಬಾ ಕತ್ತಲಾಗಿದೆ, ಬರಲು ಸಾಧ್ಯವಿಲ್ಲ ಎಂದು ಡೆಲಿವರಿ ಪಾರ್ಟ್ನರ್ ಹೇಳುತ್ತಾನೆ.

ಇದನ್ನು ಓದಿ: ದೆವ್ವ ಹಿಡಿದಿದೆ ಎಂಬ ಮೂಢನಂಬಿಕೆ: ಕಲಬುರಗಿ ಮಹಿಳೆಯನ್ನು ಕಟ್ಟಿಗೆಯಿಂದ ಹೊಡೆದು ಹತ್ಯೆ, ಮಹಾರಾಷ್ಟ್ರದಲ್ಲಿ ಭೀಕರ ಘಟನೆ

ನೀವು ಏಕೆ ಭಯಪಡುತ್ತೀರಾ? ನಾನು ಒಳಗೇ ಇದ್ದೇನೆ, ಬನ್ನಿ ಎಂದು ಆಕೆ ಒತ್ತಾಯಿಸುತ್ತಾಳೆ. ಸ್ಮಶಾನದ ಬಳಿ ಇರುವ ಎಲೆಕ್ಟ್ರಿಕ್ ಕಂಬದ ಲೈಟ್ ಹತ್ತಿರ ಬರಲಿ ಎಂದು ಆತ ಸೂಚಿಸುತ್ತಾನೆ. ಆದರೆ ತನ್ನ ಕಾರು ಕೆಟ್ಟುಹೋಗಿದೆ, ಅಲ್ಲಿಗೆ ಬರಲು ಸಾಧ್ಯವಿಲ್ಲ, ನೀವೇ ಒಳಗಡೆ ಬರಬೇಕು ಎಂದು ಆ ಮಹಿಳೆ ಮತ್ತೆ ಹೇಳುತ್ತಾಳೆ.

ಈ ಮಾತುಗಳಿಂದ ಗಾಬರಿಗೊಂಡ ಡೆಲಿವರಿ ಪಾರ್ಟ್ನರ್, ದಯವಿಟ್ಟು ಆರ್ಡರ್ ಕ್ಯಾನ್ಸಲ್ ಮಾಡಿ ಎಂದು ಹೇಳಿ ಅಲ್ಲಿಂದ ಹೊರಟುಹೋಗುತ್ತಾನೆ. ಈ ಘಟನೆ ಮಧ್ಯರಾತ್ರಿ ಸುಮಾರು ಒಂದು ಗಂಟೆಯ ವೇಳೆಗೆ ನಡೆದಿರುವುದಾಗಿ ಆ ವೈರಲ್ ವಿಡಿಯೋದಲ್ಲಿ ಕಾಣಿಸುತ್ತದೆ.

ಗಮನಿಸಬೇಕಾದ ಅಂಶವೆಂದರೆ, ಇದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಆಗಿದ್ದು, ಇದರ ನಿಜಾಸತ್ಯತೆ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ. ವೀಕ್ಷಕರನ್ನು ಸೆಳೆಯುವ ಉದ್ದೇಶದಿಂದ, ರೀಲ್ಸ್‌ಗಾಗಿ ಅಥವಾ ತಮಾಷೆಯಾಗಿ ಇದನ್ನು ಸೃಷ್ಟಿಸಿರುವ ಸಾಧ್ಯತೆಯೂ ಇದೆ.

ಇನ್ನೂ ಓದಿ: ಕಾರಿನೊಳಗೆ ಆತ್ಮಹತ್ಯೇಗೆ ಸುಟ್ಟು ಕರಕಲಾದ ಮಾಜಿ ಕಾರ್ಪೋರೇಟರ್; ತಂದೆಯ ಸಾವಿನ ಸುದ್ದಿ ಕೇಳಿ ಮಕ್ಕಳು ಆತ್ಮಹತ್ಯೆ ಯತ್ನ….!

krutika naik

Krutika Naik is an editor and writer at Karnataka Stories, where she covers culture, local news, and inspiring voices from across the state. With a passion for storytelling and a keen eye for detail, Krutika brings real stories to life—one article at a time.

Join WhatsApp

Join Now

RELATED POSTS

Leave a Comment