ನವದೆಹಲಿ: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ದಿನೇದಿನೇ ಜನರ ಬದುಕಿನ ಭಾಗವಾಗುತ್ತಿದ್ರೂ, ಅದನ್ನೇ ವೈದ್ಯಕೀಯ ಸಲಹೆಗೆ ನಂಬುವುದು ಎಷ್ಟು ಅಪಾಯಕಾರಿ ಅನ್ನೋದಕ್ಕೆ ಈ ಘಟನೆ ಭಯಾನಕ ಉದಾಹರಣೆ ಆಗಿದೆ.
ದೆಹಲಿ ಮೂಲದ ಸುಮಾರು 45 ವರ್ಷದ ವ್ಯಕ್ತಿಯೊಬ್ಬರು ವೈದ್ಯರನ್ನು ಸಂಪರ್ಕಿಸದೇ, AI ಪ್ಲಾಟ್‌ಫಾರ್ಮ್ ನೀಡಿದ ಸಲಹೆ ನಂಬಿ HIV ತಡೆಗಟ್ಟುವ ಔಷಧಿ (PEP – Post Exposure Prophylaxis) ಸೇವಿಸಿದ್ದಾರೆ. ಪರಿಣಾಮವಾಗಿ ಅವರ ಆರೋಗ್ಯ ತೀವ್ರವಾಗಿ ಹದಗೆಟ್ಟು, ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಬೇಕಾದ ಪರಿಸ್ಥಿತಿ ಉಂಟಾಗಿದೆ.
ಇದನ್ನು ಓದಿ: ಬ್ರೇಕ್ ಅಪ್ ಸೇಡಿಗೆ ಭೀಕರ ಸಂಚು: ಅಪಘಾತ ಮಾಡಿಸಿ ವೈದ್ಯೆಗೆ ಎಚ್‌ಐವಿ ರಕ್ತ ಇಂಜೆಕ್ಷನ್, ನಾಲ್ವರು ಅರೆಸ್ಟ್..!
ಇದನ್ನು ಓದಿ: ಕೊಡಗು: ಭುಜದ ನೋವಿಗೆ ಇಂಜೆಕ್ಷನ್ ತೆಗೆದುಕೊಂಡ ಯುವಕನ ದಾರುಣ ಸಾವು, ವೈದ್ಯರ ನಿರ್ಲಕ್ಷ್ಯ!!!
ಏನಾಯ್ತು ಘಟನೆ?
ಆ ವ್ಯಕ್ತಿ HIV ಸೋಂಕಿನ ಭಯದಿಂದ, ಯಾವುದೇ ವೈದ್ಯಕೀಯ ಪರೀಕ್ಷೆ ಅಥವಾ ವೈದ್ಯರ ಸಲಹೆ ಇಲ್ಲದೇ, AI ನೀಡಿದ ಮಾಹಿತಿಯ ಆಧಾರದಲ್ಲಿ HIV ಔಷಧಿಗಳನ್ನು ಸ್ವಯಂ ಖರೀದಿ ಮಾಡಿ ಕೆಲ ದಿನಗಳ ಕಾಲ ಸೇವಿಸಿದ್ದಾರೆ. ನಂತರ ಅವರಿಗೆ ಗಂಭೀರ ಅಲರ್ಜಿಕ್ ಪ್ರತಿಕ್ರಿಯೆ ಕಾಣಿಸಿಕೊಂಡಿದೆ.
ಅಪಾಯಕಾರಿ ಸ್ಥಿತಿ – Stevens-Johnson Syndrome
ವೈದ್ಯರ ಪ್ರಕಾರ, ರೋಗಿಗೆ Stevens-Johnson Syndrome (SJS) ಎಂಬ ಅಪರೂಪದ ಆದರೆ ಪ್ರಾಣಾಪಾಯಕರ ಕಾಯಿಲೆ ಕಾಣಿಸಿಕೊಂಡಿದೆ. ಇದು ಔಷಧಿಗಳ ಅತಿದೊಡ್ಡ ಅಡ್ಡ ಪರಿಣಾಮವಾಗಿದ್ದು, ಚರ್ಮ ಹಾಗೂ ಶ್ಲೇಷ್ಮಾ ಪದರಗಳಿಗೆ ತೀವ್ರ ಹಾನಿ ಉಂಟುಮಾಡುತ್ತದೆ. ಸದ್ಯ ರೋಗಿಯನ್ನು ದೆಹಲಿಯ ಡಾ. ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನು ಓದಿ: ಗಾಯಕ್ಕೆ ಹೊಲಿಗೆ ಹಾಕುವ ಬದಲು ಫೆವಿಕ್ವಿಕ್ ಅಂಟಿಸಿದ ವೈದ್ಯ;
ವೈದ್ಯರ ಎಚ್ಚರಿಕೆ
ಈ ಘಟನೆ ಬಳಿಕ ವೈದ್ಯರು ಗಂಭೀರ ಎಚ್ಚರಿಕೆ ನೀಡಿದ್ದಾರೆ:
HIV ಔಷಧಿಗಳು ಪ್ರಿಸ್ಕ್ರಿಪ್ಶನ್ ಮಾತ್ರೆಗಳು ವೈದ್ಯಕೀಯ ಮೇಲ್ವಿಚಾರಣೆ ಇಲ್ಲದೇ ಸೇವಿಸುವುದು ಜೀವಕ್ಕೆ ಅಪಾಯ AI ಸಾಮಾನ್ಯ ಮಾಹಿತಿ ಕೊಡಬಹುದು, ಆದರೆ ವೈದ್ಯರ ಪರ್ಯಾಯವಲ್ಲ
AI ಮೇಲಿನ ಅತಿಯಾದ ನಂಬಿಕೆ ಅಪಾಯಕರ
ತಜ್ಞರ ಅಭಿಪ್ರಾಯದಂತೆ, AI ತಂತ್ರಜ್ಞಾನ ಉಪಯುಕ್ತವಾದರೂ, ಆರೋಗ್ಯದಂತಹ ಸಂವೇದನಾಶೀಲ ವಿಷಯಗಳಲ್ಲಿ ಅದನ್ನೇ ಅಂತಿಮ ಸಲಹೆ ಎಂದು ನಂಬುವುದು ಅಪಾಯಕಾರಿ. ಸ್ವಲ್ಪ ಅಜಾಗರೂಕತೆ ಕೂಡ ಪ್ರಾಣಾಪಾಯಕ್ಕೆ ಕಾರಣವಾಗಬಹುದು.
ಈ ಘಟನೆ ಎಲ್ಲರಿಗೂ ಎಚ್ಚರಿಕೆಯ ಗಂಟೆ ಆಗಿದ್ದು, ತಂತ್ರಜ್ಞಾನಕ್ಕಿಂತಲೂ ವೈದ್ಯಕೀಯ ಪರಿಣತಿ ಮತ್ತು ಮಾನವ ನಿರ್ಧಾರವೇ ಮುಖ್ಯ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ.
ಇನ್ನು ಓದಿ: ಒಂದೇ ಮಗು ಎರಡು ಬಾರಿ ಹುಟ್ಟಲು ಸಾಧ್ಯವೇ? ಟೆಕ್ಸಾಸ್‌ನಲ್ಲಿ ನಡೆದ ಅಪರೂಪದ ವೈದ್ಯಕೀಯ ಸಾಧನೆ






