---Advertisement---

ವೈರಲ್ ವ್ಯೂಸ್‌ಗಾಗಿ ಮಿತಿ ಮೀರಿ ವರ್ತನೆ: ಕ್ಯಾಬ್ ಚಾಲಕನೊಂದಿಗೆ ಯುವತಿಯರ ವಿವಾದಕ್ಕೆ ಭಾರೀ ಆಕ್ರೋಶ

On: January 29, 2026 5:15 AM
Follow Us:
---Advertisement---

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಬೇಕು ಎಂಬ ಹುಚ್ಚುತನದಿಂದಾಗಿ, ಇತ್ತೀಚಿನ ದಿನಗಳಲ್ಲಿ ಮುಗ್ದ ಜನರ ಮನಸ್ಸಿಗೆ ನೋವುಂಟು ಮಾಡುವಂತಹ ಘಟನೆಗಳು ಹೆಚ್ಚಾಗುತ್ತಿವೆ. ಇದರ ಪರಿಣಾಮವಾಗಿ ವೈಯಕ್ತಿಕ ಗೌರವ ಹಾಗೂ ಖಾಸಗಿ ಬದುಕಿಗೆ ಧಕ್ಕೆಯಾಗುತ್ತಿದೆ. ಇದೀಗ ಅಂತಹದ್ದೇ ಒಂದು ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು, ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ವೈರಲ್ ಆಗಿರುವ ಈ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಕುಂದನ್ ಪಟೇಲ್ ಎಂಬುವವರು (cab driver video) ಹಂಚಿಕೊಂಡಿದ್ದು, ಸದ್ಯ ದೊಡ್ಡ ಮಟ್ಟದ ಚರ್ಚೆ ಮತ್ತು ವಿವಾದಕ್ಕೆ ದಾರಿ ಮಾಡಿಕೊಟ್ಟಿದೆ. ವೀಡಿಯೋದಲ್ಲಿ ಇಬ್ಬರು ಯುವತಿಯರು ಕ್ಯಾಬ್ ಚಾಲಕನೊಂದಿಗೆ ಬಾಡಿಗೆ ವಿಚಾರವಾಗಿ ವಾಗ್ವಾದ ನಡೆಸುತ್ತಿರುವುದು ಕಾಣಸಿಗುತ್ತದೆ. ಕೇವಲ 100 ರೂಪಾಯಿ ರಿಯಾಯಿತಿ ಪಡೆಯಲು, ಅವರು ಚಾಲಕನಿಗೆ ‘ಫ್ರೀ ಎಂಟರ್ಟೈನ್ಮೆಂಟ್’ ನೀಡುವುದಾಗಿ ಹೇಳಿರುವುದಾಗಿ ಆರೋಪಿಸಲಾಗಿದೆ.

ಈ ವರ್ತನೆ ಕೇವಲ ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಅಥವಾ ಹೆಚ್ಚು ‘ವ್ಯೂಸ್’ ಗಳಿಸುವ ಉದ್ದೇಶದಿಂದ ನಡೆದಿತ್ತೇ ಎಂಬ ಪ್ರಶ್ನೆ ಸಾಮಾಜಿಕ ಜಾಲತಾಣಗಳಲ್ಲಿ ಎದ್ದಿದೆ. ಇಂತಹ ವರ್ತನೆಗಳು ಸೇವಾ ವಲಯದ ಕಾರ್ಮಿಕರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಮತ್ತು ಇದು ಸಾಮಾಜಿಕ ನೈತಿಕತೆಗೆ ಎಷ್ಟು ಸೂಕ್ತ ಎಂಬುದರ ಬಗ್ಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಚಾರಕ್ಕಾಗಿ ಇಂತಹ ಅಸಭ್ಯ ಅಥವಾ ಅವಮಾನಕಾರಿ ವರ್ತನೆಗಳನ್ನು ತೋರಿಸುವುದು ಸರಿಯಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಅನೇಕರು ಇದನ್ನು ‘ಲಜ್ಜೆಗೆಟ್ಟ ವರ್ತನೆ’ ಎಂದು ಕರೆದಿದ್ದು, ಸಂಬಂಧಿಸಿದವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ದಿನವಿಡೀ ಕಷ್ಟಪಟ್ಟು ದುಡಿಯುವ ಕ್ಯಾಬ್ ಚಾಲಕರನ್ನು ಹಾಸ್ಯಾಸ್ಪದ ಹಾಗೂ ಮುಜುಗರದ ಪರಿಸ್ಥಿತಿಗೆ ತಳ್ಳುವುದು ತಪ್ಪು ಎಂದು ಕಮೆಂಟ್‌ಗಳಲ್ಲಿ ಹೇಳಿದ್ದಾರೆ.

ಇನ್ನೂ ಕೆಲವರು ಇದು ಕೇವಲ ಸೋಶಿಯಲ್ ಮೀಡಿಯಾ ರೀಲ್ಸ್‌ಗಾಗಿ ಮಾಡಲಾದ ‘ಪ್ರಾಂಕ್’ ಆಗಿರಬಹುದು ಎಂದು ಹೇಳಿದರೂ, “ಒಂದು ವೇಳೆ ಹುಡುಗಿಯರ ಬದಲು ಹುಡುಗರು ಹೀಗೆ ವರ್ತಿಸಿದ್ದರೆ ಏನಾಗುತ್ತಿತ್ತು?” ಎಂಬ ಪ್ರಶ್ನೆಯೂ ಮೂಡಿದೆ. ಇಲ್ಲಿ ಲಿಂಗ ತಾರತಾಮ್ಯ ಸ್ಪಷ್ಟವಾಗಿ ಕಾಣಿಸುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಮಹಿಳೆಯರಿಗೆ ಈ ರೀತಿಯ ವರ್ತನೆ ನಡೆದಿದ್ದರೆ ತಕ್ಷಣವೇ ಪೊಲೀಸ್ ಕ್ರಮ ಕೈಗೊಳ್ಳಲಾಗುತ್ತಿತ್ತು ಎಂಬ ಟೀಕೆಗಳು ಸಹ ವ್ಯಕ್ತವಾಗಿವೆ.

ಇನ್ನು ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಎಕ್ಸ್ ಖಾತೆಯ @ShoneeKapoor, “ಕ್ಯಾಬ್ ಚಾಲಕರು ಅಥವಾ ಯಾವುದೇ ಸೇವಾ ವಲಯದ ಕಾರ್ಮಿಕರು ಸಾರ್ವಜನಿಕ ಸೇವೆಯಲ್ಲಿರುವವರು. ಅವರನ್ನು ವೈಯಕ್ತಿಕ ಲಾಭ ಅಥವಾ ಅಗ್ಗದ ಮನರಂಜನೆಗಾಗಿ ಬಳಸಿಕೊಳ್ಳುವುದು ಅವರ ವೃತ್ತಿ ಮತ್ತು ಘನತೆಗೆ ಮಾಡುವ ಅವಮಾನ. ಸಾರ್ವಜನಿಕ ಸ್ಥಳಗಳು ಇಂತಹ ‘ಬಾರ್ಗೇನಿಂಗ್ ಟೂಲ್ಸ್’ ಆಗಬಾರದು. ಕೇವಲ ‘ವ್ಯೂಸ್’ಗಾಗಿ ಗೌರವ ಮತ್ತು ಜವಾಬ್ದಾರಿಯನ್ನು ಬಲಿ ಕೊಡುವುದು ಅತ್ಯಂತ ಕಳವಳಕಾರಿ ಸಂಗತಿ” ಎಂದು ಹೇಳಿದ್ದಾರೆ.

Join WhatsApp

Join Now

RELATED POSTS

Leave a Comment