ಜಿಡಿಪಿ ಅಥವಾ ಆರ್ಥಿಕ ಬೆಳವಣಿಗೆ ಯಾವಾಗಲೂ ಜನರ ಜೀವನ ಗುಣಮಟ್ಟವನ್ನು ನಿರ್ಧರಿಸುತ್ತವೆ ಎನ್ನುವುದಿಲ್ಲ. ಕೆಲವೊಂದು ದೇಶಗಳು ಆರ್ಥಿಕವಾಗಿ ಬಲಿಷ್ಠವಾಗಿದ್ದರೂ, ಅಧಿಕ ಜನಸಂಖ್ಯೆ, ಹದಗೆಟ್ಟ ಆಡಳಿತ ಮತ್ತು ಮಾಲಿನ್ಯ ಇತ್ಯಾದಿ ಕಾರಣಗಳಿಂದ ಜನರ ಜೀವನದ ಗುಣಮಟ್ಟ ಕಳಪೆಯಾಗಿರುತ್ತದೆ. ಅದರ ವಿರುದ್ಧ, ಆರ್ಥಿಕವಾಗಿ ದುರ್ಬಲವಾದ ಕೆಲವು ದೇಶಗಳಲ್ಲಿ ಜನರು ಸಂತೋಷದಿಂದ, ನೆಮ್ಮದಿಯಿಂದ ಬದುಕುತ್ತಿದ್ದಾರೆ.
ಜನರ ಜೀವನ ಗುಣಮಟ್ಟವನ್ನು ಅಳೆಯುವಾಗ, ವಿವಿಧ ಅಂಶಗಳನ್ನು ಪರಿಗಣಿಸಲಾಗುತ್ತದೆ:
ಭದ್ರತೆ, ಆದಾಯ ಮತ್ತು ಕೊಳ್ಳುವ ಶಕ್ತಿ ,ಸ್ವಚ್ಛ ಪರಿಸರ ,ಆರೋಗ್ಯ ಸೇವೆಗಳು, ಜೀವನದ ಸಮಗ್ರ ತೃಪ್ತಿ
Numbeo ಸಂಸ್ಥೆಯ 2026 ರ ಅಂಕಿಅಂಶಗಳ ಪ್ರಕಾರ, ಏಷ್ಯಾದ ಉತ್ತಮ ಜೀವನಮಟ್ಟ ಹೊಂದಿರುವ ಟಾಪ್ 10 ದೇಶಗಳು:
ಇದನ್ನು ಓದಿ: ಕನ್ನಡಿಗ IAS ಅಧಿಕಾರಿ ಮಹಾಂತೇಶ್ ಬೀಳಗಿ ಪುತ್ರಿಗೆ ಸರ್ಕಾರಿನೌಕರಿ ಉದ್ಯೋಗ ಮತ್ತು ಸಂಬಳ ಎಷ್ಟು ಗೊತ್ತಾ .!
1. ಓಮನ್ (207.6 ಸ್ಕೋರ್) – ಕಡಿಮೆ ಮಾಲಿನ್ಯ, ಉತ್ತಮ ಆದಾಯ ಹಂಚಿಕೆ, ಹೆಚ್ಚಿನ ಕೊಳ್ಳುವ ಶಕ್ತಿ. ಆರೋಗ್ಯ ವ್ಯವಸ್ಥೆ ಸ್ವಲ್ಪ ದುರ್ಬಲವಾದರೂ, ಉಳಿದ ಅಂಶಗಳಲ್ಲಿ ಅಗ್ರಸ್ಥಾನ.
2. ಜಪಾನ್ (185.6 ಸ್ಕೋರ್) – ತಂತ್ರಜ್ಞಾನದಲ್ಲಿ ಪ್ರಗತಿಪಡಿರುವ ರಾಷ್ಟ್ರ, ಸುರಕ್ಷತೆ, ಶುದ್ಧ ವಾತಾವರಣ ಮತ್ತು ಉತ್ತಮ ಆರೋಗ್ಯ ಸೇವೆಗಳು.
3. ಕತಾರ್ (182.7 ಸ್ಕೋರ್) – ಹೆಚ್ಚಿನ ಆದಾಯ ಮತ್ತು ಸುರಕ್ಷತೆ; ಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯ ಸಮಸ್ಯೆಗಳಿರುವುದು ಕಡಿಮೆ.
4. ಯುನೈಟೆಡ್ ಅರಬ್ ಎಮಿರೇಟ್ಸ್ (UAE, 175.5 ಸ್ಕೋರ್) – ಉನ್ನತ ಆದಾಯ, ಉತ್ತಮ ಕೊಳ್ಳುವ ಶಕ್ತಿ, ಉತ್ತಮ ಆರೋಗ್ಯ ಸೇವೆಗಳು, ವಿಶ್ವದರ್ಜೆಯ ಸೌಲಭ್ಯಗಳ ನಗರಗಳು (ಅಬುಧಾಬಿ, ದುಬೈ).
5. ಇಸ್ರೇಲ್ (167.7 ಸ್ಕೋರ್) – ಸಂತೋಷಕರ ವಾತಾವರಣ, ಉತ್ತಮ ಆರೋಗ್ಯ ವ್ಯವಸ್ಥೆ; ಆದಾಯಕ್ಕೆ ತಕ್ಕಂತೆ ಜೀವನ ವೆಚ್ಚ ಮತ್ತು ಆಸ್ತಿ ಬೆಲೆಗಳು ಹೆಚ್ಚಿನವು.
6. ಸೌದಿ ಅರೇಬಿಯಾ (165.3 ಸ್ಕೋರ್)
7. ಕುವೈತ್ (162.0 ಸ್ಕೋರ್)
8. ಸೈಪ್ರಸ್ (159.0 ಸ್ಕೋರ್)
9. ಸಿಂಗಾಪುರ (158.1 ಸ್ಕೋರ್)
10. ತೈವಾನ್ (155.0 ಸ್ಕೋರ್)
ಭಾರತ, ಚೀನಾ ಮತ್ತು ಪಾಕಿಸ್ತಾನದ ಸ್ಥಿತಿ:
• ಚೀನಾ: 134.8 ಸ್ಕೋರ್, 14ನೇ ಸ್ಥಾನ – ಭಾರತಕ್ಕಿಂತ ಉತ್ತಮ.
• ಭಾರತ: 122.3 ಸ್ಕೋರ್, 18ನೇ ಸ್ಥಾನ – ಮಧ್ಯಮ ಮಟ್ಟದ ಜೀವನ ಗುಣಮಟ್ಟ.
• ಪಾಕಿಸ್ತಾನ: 98.3 ಸ್ಕೋರ್, 23ನೇ ಸ್ಥಾನ – ಕಡಿಮೆ ಗುಣಮಟ್ಟದ ಜೀವನ.
ಕಡಿಮೆ ಜೀವನಮಟ್ಟದ ದೇಶ:
• ಶ್ರೀಲಂಕಾ: 61.0 ಸ್ಕೋರ್ – ಏಷ್ಯಾದ ಅತಿ ಕಡಿಮೆ ಜೀವನ ಗುಣಮಟ್ಟ ಹೊಂದಿರುವ ದೇಶ.





