ವಿಶ್ವದ ಅತ್ಯಂತ ದೊಡ್ಡ ಟೆಕ್ ಕಂಪನಿಗಳಲ್ಲೊಂದಾದ ಮೆಟಾ ಸಂಸ್ಥೆ ಸಂಸ್ಥಾಪಕ ಮಾರ್ಕ್ ಜುಕರ್ ಬರ್ಗ್ ಮಹತ್ವದ ಬೆಳವಣಿಗೆಯಲ್ಲಿ 24 ವರ್ಷದ ಕಾಲೇಜ್ ಡ್ರಾಪ್ ಔಟ್ ಆದಾ ಮ್ಯಾಟ್ ಡಯಟ್ಕಿ ಅವರ ಒಟ್ಟಿಗೆ ಬರೋಬ್ಬರಿ 2200 ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.
ಆರ್ಟಿಫಿಸಿಯಲ ಇಂಟೆಲಿಜೆನ್ಸ್ (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನ ಡೆವೆಲಪರ್ ಮ್ಯಾಟ್ ಡಯಟ್ಕಿ ಮೆಟಾ ಸಂಸ್ಥೆ ನೀಡಿದ್ದ $125 ಮಿಲಿಯನ್ ಆಫರ್ ರಿಜೆಕ್ಟ್ ಮಾಡಿದ್ದರು. ಇನ್ಮುಂದೆ ಮೆಟಾ ಸಂಸ್ಥೆಯಲ್ಲಿ ಮ್ಯಾಟ್ ಡಯಟ್ಕಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ವಿಭಾಗದಲ್ಲಿ ಕಾರ್ಯನಿರ್ವಹಣೆ ಮಾಡಲಿದ್ದಾರೆ. ಸ್ವತಃ ಮಾರ್ಕ್ ಜುಕರ್ ಬರ್ಗ್ ಖುದ್ದು ಅವ್ರನ್ನು ಭೇಟಿಯಾಗಿ ಮನವೊಲಿಸಿದ್ದು ಬರೋಬ್ಬರಿ $250ಮಿಲಿಯನ್ ಅಂದರೆ 2200 ಕೋಟಿ ಒಪ್ಪಂದ ಮಾಡಿಕೊಂಡಿದ್ದಾರೆ.
AI ಕ್ಷೇತ್ರದಲ್ಲಿ ಮೆಟಾದ ಭರ್ಜರಿ ಹೆಜ್ಜೆ – ಮ್ಯಾಟ್ ಡಯಟ್ಕಿಗೆ ₹2200 ಕೋಟಿ ಆಫರ್, ಭಾರತೀಯ ಬಳಕೆದಾರರಿಗೆ ಹೊಸ ಎಐ ಅಸಿಸ್ಟೆಂಟ್
ಟೆಕ್ ದೈತ್ಯ ಮೆಟಾ ತನ್ನ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಮತ್ತಷ್ಟು ಪ್ರಬಲಗೊಳಿಸಲು ತೀವ್ರ ಕಾರ್ಯಾಚರಣೆ ಆರಂಭಿಸಿದೆ. ಇದರ ಭಾಗವಾಗಿ, ಮೆಟಾ 24 ವರ್ಷದ AI ತಜ್ಞ ಮ್ಯಾಟ್ ಡಯಟ್ಕಿಯನ್ನು ಹೈರ್ ಮಾಡುವ ನಿರ್ಧಾರ ತೆಗೆದುಕೊಂಡಿತು. ಆದರೆ ಡಯಟ್ಕಿ ತಮ್ಮದೇ ಕಂಪನಿ ಆರಂಭಿಸುವ ಉದ್ದೇಶದಿಂದ ಮೆಟಾದ ಮೊದಲ $125 ಮಿಲಿಯನ್ ಆಫರ್ ಅನ್ನು ತಿರಸ್ಕರಿಸಿದರು.
ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದ ಮೆಟಾ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್, ಡಯಟ್ಕಿಯನ್ನು ಖುದ್ದಾಗಿ ಭೇಟಿಯಾಗಿ ಆ ಆಫರ್‍ನನ್ನು ದುಪ್ಪಟು ಮಾಡಿದರು — $250 ಮಿಲಿಯನ್, ಅಂದರೆ ಸుమಾರು ₹2200 ಕೋಟಿ. ಕೊನೆಗೆ ಡಯಟ್ಕಿ ಒಪ್ಪಿಗೆ ಸೂಚಿಸಿ ಮೆಟಾದ AI ವಿಭಾಗದಲ್ಲಿ ಕೆಲಸ ಮಾಡಲು ಸಿದ್ಧತೆ ತೋರಿಸಿದ್ದಾರೆ.
ಜುಕರ್‌ಬರ್ಗ್‌ವಂತೆ ಡಯಟ್ಕಿಯೂ ಕಾಲೇಜು ಡ್ರಾಪ್‌ಔಟ್ ಆಗಿದ್ದಾರೆ. ಅವರು AI ತಂತ್ರಜ್ಞಾನದಲ್ಲಿ ವಿಶೇಷ ಪರಿಣತಿ ಹೊಂದಿದ್ದು, ತ್ರಿ-ಡೈಮೆನ್ಶನಲ್ ಡೇಟಾ ಸೆಟ್ಸ್ ಬಗ್ಗೆ ಆಳವಾದ ಸಂಶೋಧನೆ ನಡೆಸಿದ್ದಾರೆ. ಅನೇಕ ಕಂಪನಿಗಳ ಡೆವಲಪ್ಮೆಂಟ್ ವಿಭಾಗಗಳಲ್ಲಿ ಅವರು ಶ್ರೇಷ್ಟತೆ ಮೆರೆದಿದ್ದು, ಈ ಹಿಂದೆಯೇ ಮೆಟಾ ಅವರನ್ನು ಸೆಳೆಯಲು ಉತ್ಸುಕರಾಗಿತ್ತು.
ಭಾರತೀಯ ಬಳಕೆದಾರರಿಗೆ ಮೆಟಾದ ಹೊಸ ಎಐ ಅಸಿಸ್ಟೆಂಟ್
ಇದಕ್ಕೂಮುಂದೆ, ಭಾರತೀಯ ಬಳಕೆದಾರರಿಗಾಗಿ ಮೆಟಾ ತನ್ನ ಹೊಸ AI ಅಸಿಸ್ಟೆಂಟ್ ಅನ್ನು ಪರಿಚಯಿಸಿದೆ. ಈ ಸಹಾಯಕವನ್ನು ಫೇಸ್‌ಬುಕ್ ಮೆಸೆಂಜರ್, ಇನ್‌ಸ್ಟಾಗ್ರಾಂ ಹಾಗೂ ವಾಟ್ಸಪ್‌ನಲ್ಲಿ ಬಳಸಿಕೊಂಡು ಬಳಕೆದಾರರು ಮಾಹಿತಿ ಹುಡುಕಾಟ, ಸಹಾಯ ಹಾಗೂ ಇತರ ಸೇವೆಗಳನ್ನು ಪಡೆಯಬಹುದು.
ಈ ಎಐ ಅಸಿಸ್ಟೆಂಟ್ ಜಾಗತಿಕ ಮಟ್ಟದಲ್ಲಿ ಪರಿಚಯವಾಗಿದ್ದು, ಗೂಗಲ್‌ನ ಜೆಮಿನಿ, ಮೈಕ್ರೋಸಾಫ್ಟ್‌ನ ಕಾಪಿಲೋಟ್, ಅಮೆಜಾನ್‌ನ ಅಲೆಕ್ಸಾ, ಮತ್ತು ಓಪನ್‌ಎಐನ ಚಾಟ್‌ಜಿಪಿಟಿ ಗಳ ಪಂಕ್ತಿಯಲ್ಲಿ ಸ್ಥಾನ ಪಡೆದುಕೊಂಡಿದೆ. ಮೆಟಾ ಈಗಾಗಲೇ ಇಂಗ್ಲಿಷ್‌ನಲ್ಲಿ ಈ ಸೇವೆಯನ್ನು ಆಸ್ಟ್ರೇಲಿಯಾ, ಕೆನಡಾ, ನೈಜೀರಿಯಾ, ಪಾಕಿಸ್ತಾನ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಸೇರಿದಂತೆ 13 ದೇಶಗಳಲ್ಲಿ ಪ್ರಾರಂಭಿಸಿದೆ.
ಮೆಟಾ ಇಂಡಿಯಾ ವಿಭಾಗದಲ್ಲಿ ನಾಯಕತ್ವ ಬದಲಾವಣೆ
ಇದೀಗ, ಮೆಟಾದ ಭಾರತೀಯ ಉಪಾಧ್ಯಕ್ಷ (ಸಾರ್ವಜನಿಕ ನೀತಿ ವಿಭಾಗ) ಶಿವನಾಥ್ ತುಕ್ರಾಲ್ ರಾಜೀನಾಮೆ ನೀಡಿದ್ದು, ಅವರ ಸ್ಥಾನಕ್ಕೆ ಅರುಣ್ ಶ್ರೀನಿವಾಸ್ ಅವರನ್ನು ನೇಮಕ ಮಾಡಲಾಗಿದೆ. ಈಗಾಗಲೇ ಜುಲೈ 1ರಿಂದ ಅವರು ಈ ಹುದ್ದೆ ಸ್ವೀಕರಿಸಿದ್ದಾರೆ.
ಅರುಣ್ ಶ್ರೀನಿವಾಸ್, ಹಿಂದೂಸ್ತಾನ್ ಟೈಮ್ಸ್, ಯುನಿಲಿವರ್, ಮತ್ತು ರೀಬಾಕ್‌ನಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದ ಅನುಭವ ಹೊಂದಿದ್ದಾರೆ. ಇನ್ನು ಈ ಹಿಂದಿನ ಮುಖ್ಯಸ್ಥೆ ಸಂಧ್ಯಾ ದೇವನಾಥನ್ ಅವರು ದಕ್ಷಿಣ ಏಷ್ಯಾದ ಮೆಟಾ ಆಡಳಿತದ ಮುಖ್ಯಸ್ಥೆಯಾಗಲಿದ್ದಾರೆ ಎಂಬ ಘೋಷಣೆ ಮಾಡಲಾಗಿತ್ತು.