ಬಿಸ್ಕತ್ತುಗಳಲ್ಲಿ ಕಾಣಿಸುವ ಸಣ್ಣ ಸಣ್ಣ ರಂಧ್ರಗಳನ್ನು ‘ಡಾಕರ್ಸ್’ ಎಂದು ಕರೆಯಲಾಗುತ್ತದೆ. ಹಲವರು ಇದನ್ನು ಕೇವಲ ಅಲಂಕಾರ ಅಥವಾ ವಿನ್ಯಾಸದ ಭಾಗ ಎಂದು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಈ ರಂಧ್ರಗಳು ಬಿಸ್ಕತ್ತುಗಳ ತಯಾರಿಕೆಯಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಬಿಸ್ಕತ್ತುಗಳ ಗುಣಮಟ್ಟ, ಆಕಾರ ಮತ್ತು ರುಚಿ ಸರಿಯಾಗಿ ಬರಲು ಈ ರಂಧ್ರಗಳು ಅಗತ್ಯವಾಗಿವೆ.
ಮನೆಯಿಗೆ ಅತಿಥಿಗಳು ಬಂದಾಗ, ಬೆಳಗ್ಗೆ ಅಥವಾ ಸಂಜೆ ಚಹಾ–ಹಾಲಿನ ಜೊತೆಗೆ, ಪ್ರಯಾಣದ ವೇಳೆ ಹಸಿವು ತಟ್ಟಿದಾಗ ತಕ್ಷಣ ಕೈಗೆ ಸಿಗುವ ಆಹಾರವೇ ಬಿಸ್ಕತ್ತು. ಮಾರುಕಟ್ಟೆಯಲ್ಲಿ ವಿವಿಧ ರುಚಿ, ಗಾತ್ರ ಮತ್ತು ಗುಣಮಟ್ಟದ ಬಿಸ್ಕತ್ತುಗಳು ಲಭ್ಯವಿವೆ. ಆದರೆ ಗಮನಿಸಿದರೆ ಕೆಲವು ಬಿಸ್ಕತ್ತುಗಳಲ್ಲಿ ಹೆಚ್ಚಿನ ರಂಧ್ರಗಳು ಇರುತ್ತವೆ, ಮತ್ತೆ ಕೆಲವು ಬಿಸ್ಕತ್ತುಗಳಲ್ಲಿ ಅಷ್ಟೊಂದು ರಂಧ್ರಗಳು ಇರುವುದಿಲ್ಲ. ಇದರ ಹಿಂದೆ ಕಾರಣವೇನು ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ.
ಇದನ್ನು ಓದಿ: ನೀವು ನಿಮ್ಮ ಕೂದಲನ್ನು ಮಾರಾಟ ಮಾಡಿ ಪಾತ್ರೆಗಳನ್ನು ಖರೀದಿಸುತ್ತಿದ್ದೀರಾ? ಹಾಗಿದ್ರೆ, ಈ ಮಹತ್ವದ ವಿಷಯ ನಿಮಗೆ ಗೊತ್ತಿರಲೇಬೇಕು!
ಈ ರಂಧ್ರಗಳ ಉದ್ದೇಶ ಬಿಸ್ಕತ್ತುಗಳಿಗೆ ಗಾಳಿಯ ಹರಿವನ್ನು ಒದಗಿಸುವುದು. ಮನೆ ಕಟ್ಟುವಾಗ ಗಾಳಿ ಸರಾಗವಾಗಿ ಹಾದುಹೋಗಲು ಕಿಟಕಿ ಅಥವಾ ವಾತಾಯನ ವ್ಯವಸ್ಥೆ ಮಾಡುವಂತೆ, ಬಿಸ್ಕತ್ತುಗಳಲ್ಲಿಯೂ ಗಾಳಿ ಹೊರಬರಲು ಈ ರಂಧ್ರಗಳನ್ನು ಮಾಡಲಾಗುತ್ತದೆ. ಬೇಯಿಸುವಾಗ ಒಳಗೆ ಸಿಲುಕುವ ಗಾಳಿ ಮತ್ತು ಆವಿಯನ್ನು ಹೊರಬಿಡಲು ಈ ಡಾಕರ್ಸ್ ಸಹಾಯ ಮಾಡುತ್ತವೆ.
ಬಿಸ್ಕತ್ತುಗಳನ್ನು ಮೈದಾ ಅಥವಾ ಗೋಧಿ ಹಿಟ್ಟು, ಸಕ್ಕರೆ, ಉಪ್ಪು ಮೊದಲಾದ ಪದಾರ್ಥಗಳನ್ನು ಮಿಶ್ರಣ ಮಾಡಿ ತಯಾರಿಸಲಾಗುತ್ತದೆ. ಈ ಹಿಟ್ಟನ್ನು ಅಚ್ಚಿನಲ್ಲಿ ಹರಡಿ ಯಂತ್ರದ ಮೂಲಕ ಸಮಾನ ಅಂತರದಲ್ಲಿ ರಂಧ್ರಗಳನ್ನು ಮಾಡಲಾಗುತ್ತದೆ. ಬೇಯಿಸುವ ಸಮಯದಲ್ಲಿ ಈ ರಂಧ್ರಗಳು ಇಲ್ಲದಿದ್ದರೆ, ಒಳಗಿನ ಗಾಳಿ ಶಾಖದಿಂದ ಉಬ್ಬಿ ಬಿಸ್ಕತ್ತುಗಳು ಆಕಾರ ತಪ್ಪುವ ಅಥವಾ ಮಧ್ಯದಲ್ಲಿ ಒಡೆದುಹೋಗುವ ಸಾಧ್ಯತೆ ಇರುತ್ತದೆ.
ಹೀಗಾಗಿ ಗಾಳಿ ಮತ್ತು ಶಾಖವು ಸರಿಯಾಗಿ ಹೊರಬರಲು ಈ ರಂಧ್ರಗಳು ಅಗತ್ಯವಾಗಿವೆ. ಇಂದಿನ ಆಧುನಿಕ ಕಾರ್ಖಾನೆಗಳಲ್ಲಿ ಅತ್ಯಾಧುನಿಕ ಯಂತ್ರಗಳ ಮೂಲಕ ನಿಖರವಾದ ಅಂತರದಲ್ಲಿ ಈ ರಂಧ್ರಗಳನ್ನು ಮಾಡಲಾಗುತ್ತದೆ. ಅದರಿಂದ ನಮಗೆ ಅದು ಸುಂದರ ವಿನ್ಯಾಸದಂತೆ ಕಾಣುತ್ತದೆ. ಆದರೆ ಅದರ ಹಿಂದೆ ಇರುವ ನಿಜವಾದ ಕಾರಣ ಬಿಸ್ಕತ್ತುಗಳನ್ನು ಪರಿಪೂರ್ಣವಾಗಿ ಬೇಯಿಸುವ ವಿಜ್ಞಾನವಾಗಿದೆ.






