---Advertisement---

ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧ ಆಯ್ಕೆ ಇವರ ಹಿನ್ನಲೆ ಏನು

On: January 19, 2026 2:10 PM
Follow Us:
---Advertisement---

ನವದೆಹಲಿ, ಜನವರಿ 19: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಜೆ.ಪಿ. ನಡ್ಡಾ ಅವರ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ತೆರವಾಗಿದ್ದ ಸ್ಥಾನಕ್ಕೆ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿತಿನ್ ನಬಿನ್ ಅವರ ಪರವಾಗಿ 37 ಸೆಟ್‌ಗಳ ನಾಮಪತ್ರಗಳು ಸಲ್ಲಿಕೆಯಾಗಿದ್ದು, ಯಾವುದೇ ಸ್ಪರ್ಧಿ ಅಭ್ಯರ್ಥಿಗಳು ಇಲ್ಲದ ಕಾರಣ ಸರ್ವಾನುಮತದ ನಿರ್ಣಯದಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಅವರು ಜನವರಿ 20ರಂದು ಅಧಿಕೃತವಾಗಿ ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನು ಓದಿ: ರಚಿತಾ ರಾಮ್ ಬೋಲ್ಡ್ ಟಾಕ್: ‘ನನ್ನ ದೇಹ, ನನ್ನ ಜೀವನ’ – ಬಾಡಿ ಶೇಮಿಂಗ್ ವಿರುದ್ಧ ಸ್ಪಷ್ಟ ಅಭಿಪ್ರಾಯ

ಯಾರು ನಿತಿನ್ ನಬಿನ್ ಇವರ ಹಿನ್ನಲೆ ಏನು

ಬಿಹಾರದ ಹಿರಿಯ ಬಿಜೆಪಿ ನಾಯಕನಾಗಿರುವ ನಿತಿನ್ ನಬಿನ್, ಪಾಟ್ನಾದಲ್ಲಿ ಜನಿಸಿದ್ದು, ದಿವಂಗತ ಹಿರಿಯ ಬಿಜೆಪಿ ನಾಯಕ ಹಾಗೂ ಮಾಜಿ ಶಾಸಕ ನಬಿನ್ ಕಿಶೋರ್ ಪ್ರಸಾದ್ ಸಿನ್ಹಾ ಅವರ ಪುತ್ರ. ತಂದೆಯ ಅಕಾಲಿಕ ನಿಧನದ ಬಳಿಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದ ಅವರು, ಆರ್‌ಎಸ್‌ಎಸ್ ಹಿನ್ನೆಲೆಯೊಂದಿಗೆ ಪಕ್ಷದೊಳಗೆ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ.

ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ರಸ್ತೆ ನಿರ್ಮಾಣ ಹಾಗೂ ನಗರಾಭಿವೃದ್ಧಿ ಖಾತೆಗಳನ್ನು ನಿಭಾಯಿಸಿದ್ದ ನಿತಿನ್ ನಬಿನ್, ಬಳಿಕ ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷರಾಗಿ ನೇಮಕಗೊಂಡು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಿಹಾರದಲ್ಲಿ ಜೆಡಿಯು ಜೊತೆಗಿನ ಬಿಜೆಪಿಯ ಮೈತ್ರಿಯನ್ನು ಬಲಪಡಿಸುವಲ್ಲಿ ಅವರ ಪಾತ್ರ ಮಹತ್ವದಾಗಿದೆ. ಎನ್‌ಡಿಎ ಸರ್ಕಾರದ ಸ್ಥಿರತೆಗೆ ಅವರ ಕೊಡುಗೆ ಗಮನಾರ್ಹವಾಗಿದ್ದು, ಛತ್ತೀಸ್‌ಗಢ ರಾಜ್ಯದ ಬಿಜೆಪಿಯ ಉಸ್ತುವಾರಿಯಾಗಿಯೂ ಅವರು ಸೇವೆ ಸಲ್ಲಿಸಿದ್ದಾರೆ.

ಇಂದು ನಿತಿನ್ ನಬಿನ್ ತಮ್ಮ ನಾಮಪತ್ರವನ್ನು ಬಿಜೆಪಿ ನಾಯಕರ ಸಮ್ಮುಖದಲ್ಲಿ ಸಲ್ಲಿಸಿದ್ದು, ಈ ಸಂದರ್ಭದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ರಾಜನಾಥ್ ಸಿಂಗ್ ಉಪಸ್ಥಿತರಿದ್ದರು. ಈ ಮೂಲಕ ನಿತಿನ್ ನಬಿನ್ ಬಿಜೆಪಿಯ 12ನೇ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

Join WhatsApp

Join Now

RELATED POSTS