ಆಸ್ತಿ ಲಾಲಸೆಗೆ ರಕ್ತಸಂಬಂಧವೇ ಮರೆತ ಭೀಕರ ಘಟನೆ ಬಾಗಲಕೋಟೆ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಾಗಲಕೋಟೆ ಜಿಲ್ಲೆಯ ತೇರದಾಳದ ಪ್ರಭುಲಿಂಗ ದೇವಸ್ಥಾನದ ಸಮೀಪ 60 ವರ್ಷಗಳಿಂದ ತರಕಾರಿ ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ದಾನಶೀಲ ವೃದ್ಧೆ ಚಂದ್ರವ್ವ ಕ್ರೂರ ಹತ್ಯೆಗೆ ಬಲಿಯಾಗಿದ್ದಾರೆ.
ಇದನ್ನು ಓದಿ: ತಾಯಿ ಮತ್ತು ಪತ್ನಿ ಹತ್ಯೆ: ತಲೆ ಜಜ್ಜಿ ಮಾಂಸ ಸೇವಿಸಿದ ವ್ಯಕ್ತಿ
ಇತ್ತೀಚಿನ ದಿನಗಳಲ್ಲಿ ಚಂದ್ರವ್ವ ಮತ್ತು ಆಕೆಯ ಅಣ್ಣನ ಮಕ್ಕಳ ನಡುವೆ ಸುಮಾರು 11 ಎಕರೆ ಆಸ್ತಿಗೆ ಸಂಬಂಧಿಸಿದಂತೆ ಗಂಭೀರ ವಿವಾದ ಉಂಟಾಗಿತ್ತು. ಇದೇ ವೈಷಮ್ಯ ಕೊನೆಗೆ ಅಜ್ಜಿ ಜೀವಕ್ಕೆ ಕುತ್ತು ತಂದಿದ್ದು, ಆಕೆಯ ಅಣ್ಣನ ಮಕ್ಕಳೇ ಕೊಲೆ ನಡೆಸಿರುವುದು ತನಿಖೆಯಲ್ಲಿ ಬಯಲಾಗಿದೆ.
ಇದನ್ನು ಓದಿ SHIVMOGGA: ಶಾಲಾ ಕೊಠಡಿಯಲ್ಲೇ ಶಿಕ್ಷಕರ ಆತ್ಮಹತ್ಯೆ; ಶಿಕಾರಿಪುರ ಬಳೂರು ಗ್ರಾಮದಲ್ಲಿ ಬೆಚ್ಚಿಬೀಳಿಸುವ ಘಟನೆ..!!!!
ಅಜ್ಜಿಯನ್ನು ಕೊಲೆ ಮಾಡಿದ ಬಳಿಕ, ವಯೋಸಹಜ ಸಾವೆಂದು ನಾಟಕವಾಡಿ ಪ್ರಕರಣ ಮುಚ್ಚಿಹಾಕಲು ಆರೋಪಿಗಳು ಯತ್ನಿಸಿದ್ದರು. ಚಿಕ್ಕೋಡಿ ಆಸ್ಪತ್ರೆಗೆ ದಾಖಲಿಸಿ ಸಹಜ ಸಾವು ಎಂದು ತೋರಿಸಲು ಹೈಡ್ರಾಮಾ ನಡೆಸಲಾಗಿದ್ದು, ಅಂತ್ಯಸಂಸ್ಕಾರಕ್ಕೂ ತರಾತುರಿಯಲ್ಲಿ ಸಿದ್ಧತೆ ನಡೆಸಲಾಗಿತ್ತು.
ಆದರೆ ಮೃತ್ಯುವಿನ ಸುತ್ತಲಿನ ಅನುಮಾನಾಸ್ಪದ ಬೆಳವಣಿಗೆಗಳನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ಬಳಿಕ ಪ್ರಕರಣಕ್ಕೆ ತಿರುವು ಸಿಕ್ಕಿತು. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಕೊಲೆಯ ಅಸಲಿ ಸತ್ಯ ಬಯಲಿಗೆ ಬಂದಿದೆ.
ಚಂದ್ರವ್ವ ದಾನಧರ್ಮಕ್ಕೆ ಹೆಸರಾದ ಮಹಿಳೆಯಾಗಿದ್ದು, ಪ್ರಭುಲಿಂಗ ದೇವಸ್ಥಾನಕ್ಕೆ 16 ಲಕ್ಷ ರೂಪಾಯಿ ಮೌಲ್ಯದ ಬೆಳ್ಳಿಯ ಬಾಗಿಲನ್ನು ದೇಣಿಗೆಯಾಗಿ ನೀಡಿದ್ದರು. ದೇವಾಲಯದ ಎದುರು ತರಕಾರಿ ಮಾರಾಟದಿಂದ ಸಂಗ್ರಹಿಸಿದ ಹಣವನ್ನೇ ಸಮಾಜ ಸೇವೆಗೆ ಬಳಸಿದ್ದ ಅವರು, ಊರಿನ ಜನರಿಗೆ ‘ದಾನಜ್ಜಿ’ ಎಂದೇ ಪರಿಚಿತರಾಗಿದ್ದರು.
ಜನರ ಮೆಚ್ಚುಗೆ ಪಡೆದ ದಾನಜ್ಜಿಯ ಬದುಕಿಗೆ ಆಸ್ತಿ ಆಸೆ ಭೀಕರ ಅಂತ್ಯ ತಂದಿದ್ದು, ಮಾನವೀಯತೆಯನ್ನೇ ಪ್ರಶ್ನಿಸುವ ಘಟನೆ ಇದಾಗಿದೆ.







1 thought on “ಆಸ್ತಿ ದುರಾಸೆಗೆ ರಕ್ತಸಂಬಂಧ ಮರೆತು: ಬಾಗಲಕೋಟೆಯಲ್ಲಿ ದಾನಜ್ಜಿಯ ಭೀಕರ ಕೊಲೆ”