---Advertisement---

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಖಾತೆ: ಸುರಕ್ಷಿತ ಹೂಡಿಕೆ, ಉತ್ತಮ ಬಡ್ಡಿ ಮತ್ತು ಖಚಿತ ಲಾಭ

On: January 15, 2026 11:56 AM
Follow Us:
---Advertisement---

ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ (TD) ಖಾತೆ ಮಧ್ಯಮ ಮತ್ತು ದೀರ್ಘಾವಧಿಯ ಹೂಡಿಕೆಗೆ ಉತ್ತಮ ಆಯ್ಕೆಯಾಗಿದೆ. ಕೇವಲ ₹1,000 ರೂಗಳಿಂದ ಈ ಖಾತೆಯನ್ನು ಆರಂಭಿಸಬಹುದಾಗಿದ್ದು, ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿ ಇಲ್ಲ. 1, 2, 3, 4 ಹಾಗೂ 5 ವರ್ಷಗಳ ಅವಧಿಗೆ ಟಿಡಿ ಡೆಪಾಸಿಟ್ ಮಾಡಲು ಅವಕಾಶವಿದೆ. ಖಾತೆ ತೆರೆಯುವಾಗಲೇ ಹೂಡಿಕೆ ಅವಧಿಯನ್ನು ನಿಗದಿಪಡಿಸಬೇಕು.

ಇದನ್ನು ಓದಿ: ಮಕ್ಕಳ ಭವಿಷ್ಯಕ್ಕೆ ಭದ್ರ ಉಳಿತಾಯ ದಿನಕ್ಕೆ 150 ಕಟ್ಟಿದರೆ 26 ಲಕ್ಷ…! : ಎಲ್‌ಐಸಿಯ ಜೀವನ್ ತರುಣ್ ಯೋಜನೆ

ಇದನ್ನು ಓದಿ: ರಿಜಿಸ್ಟರ್ಡ್ ಪೋಸ್ಟ್ ಸೇವೆ ಸ್ಥಗಿತ? ಸ್ಪೀಡ್ ಪೋಸ್ಟ್ ಜೊತೆಯಲ್ಲಿ ಸೇರ್ಪಡೆ?Registered Post stopped? Merged with Speed Post?

ಈ ಟಿಡಿ ಖಾತೆಯಲ್ಲಿ ಶೇಕಡಾ 6.9 ರಿಂದ 7.5ರವರೆಗೆ ಬಡ್ಡಿ ಲಭ್ಯವಿದೆ. 5 ವರ್ಷಗಳ ಅವಧಿಗೆ ಹೂಡಿಕೆ ಮಾಡಿದರೆ ಗರಿಷ್ಠ ಬಡ್ಡಿ ಸಿಗುತ್ತದೆ. ಉದಾಹರಣೆಗೆ, ₹1 ಲಕ್ಷವನ್ನು 5 ವರ್ಷಗಳ ಕಾಲ ಹೂಡಿಕೆ ಮಾಡಿದರೆ ಅವಧಿ ಮುಗಿದಾಗ ಸುಮಾರು ₹1,44,885 ರಿಟರ್ನ್ಸ್ ಪಡೆಯಬಹುದು. ದೀರ್ಘಾವಧಿಯಲ್ಲಿ ಈ ಹೂಡಿಕೆ ಮೊತ್ತ ದುಪ್ಪಟ್ಟಾಗುವ ಸಾಧ್ಯತೆಯೂ ಇದೆ.

ಇದಕ್ಕೇರಿಯಾಗಿ, ಪೋಸ್ಟ್ ಆಫೀಸ್ ಟಿಡಿ ಖಾತೆ ಸರ್ಕಾರದ ಭದ್ರತೆಯೊಂದಿಗೆ ಬರುತ್ತಿರುವುದರಿಂದ ಯಾವುದೇ ಅಪಾಯವಿಲ್ಲ. ಹೂಡಿಕೆ ಮಾಡಿದ ಹಣ ಸಂಪೂರ್ಣ ಸುರಕ್ಷಿತವಾಗಿರುತ್ತದೆ. ಜೊತೆಗೆ 1961ರ ಆದಾಯ ತೆರಿಗೆ ಕಾಯ್ದೆಯ 80ಸಿ ಅಡಿಯಲ್ಲಿ ಗರಿಷ್ಠ ₹1.5 ಲಕ್ಷವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು (ಒಲ್ಡ್ ಟ್ಯಾಕ್ಸ್ ರಿಜಿಮ್ ಅಡಿಯಲ್ಲಿ).

ಒಂಟಿ ಖಾತೆಯ ಜೊತೆಗೆ ಜಂಟಿ ಖಾತೆ ತೆರೆಯುವ ಸೌಲಭ್ಯವೂ ಇದೆ. 10 ವರ್ಷ ಮೇಲ್ಪಟ್ಟ ಅಪ್ರಾಪ್ತರೂ ಈ ಖಾತೆಯನ್ನು ನಿರ್ವಹಿಸಬಹುದು. ಸುರಕ್ಷಿತ, ಸ್ಥಿರ ಮತ್ತು ಉತ್ತಮ ಬಡ್ಡಿಯ ಹೂಡಿಕೆ ಹುಡುಕುವವರಿಗೆ ಪೋಸ್ಟ್ ಆಫೀಸ್ ಟಿಡಿ ಖಾತೆ ಉತ್ತಮ ಆಯ್ಕೆಯಾಗಿದೆ.

Join WhatsApp

Join Now

RELATED POSTS

Leave a Comment