ಇರಾನ್ನಲ್ಲಿ ಸರ್ಕಾರ ವಿರೋಧಿ ಪ್ರತಿಭಟನೆಗಳು ಭೀಕರ ರಕ್ತಪಾತಕ್ಕೆ ತಿರುಗಿವೆ. ಬ್ರಿಟಿಷ್ ವೆಬ್ಸೈಟ್ ಇರಾನ್ ಇಂಟರ್ನ್ಯಾಷನಲ್ ವರದಿ ಪ್ರಕಾರ, ಕಳೆದ 17 ದಿನಗಳಲ್ಲಿ ಸುಮಾರು 12,000 ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ರಾಯಿಟರ್ಸ್ ವರದಿ ಸಾವಿನ ಸಂಖ್ಯೆ ಸುಮಾರು 2,000 ಎಂದು ಹೇಳಿದೆ. ಸಂಖ್ಯೆಗಳ ವ್ಯತ್ಯಾಸ ಇದ್ದರೂ, ಮಾನವ ಹಕ್ಕುಗಳ ಭಾರೀ ಉಲ್ಲಂಘನೆ ನಡೆದಿದೆ ಎಂಬುದು ಸ್ಪಷ್ಟವಾಗಿದೆ.
ಇದನ್ನು ಓದಿ: ಬಾಯಿಯಲ್ಲಿ ಸಣ್ಣ ಗುಳ್ಳೆ ಕಾಣಿಸಿದರೆ ನಿರ್ಲಕ್ಷ್ಯ ಬೇಡ..!ಚಳಿಗಾಲದಲ್ಲಿ ಬಾಯಿ ಹುಣ್ಣು ಹೆಚ್ಚಾಗುವುದಕ್ಕೆ ಇದೂ ಕಾರಣ!
ಇದನ್ನು ಓದಿ: ಮದ್ಯದ ಚಟಕ್ಕೆ ಹುಟ್ಟಿಸಿದ ಮಗನ ಬಲಿ ಪಡೆದ ತಂದೆ..!
ಈ ಹತ್ಯಾಕಾಂಡವು ಇರಾನ್ ಸುಪ್ರೀಂ ಲೀಡರ್ ಅಲಿ ಖಮೇನಿ ಅವರ ಆದೇಶದ ಮೇರೆಗೆ ನಡೆದಿದೆ ಎಂಬ ಆರೋಪಗಳಿದ್ದು, ರೆವಲ್ಯೂಷನರಿ ಗಾರ್ಡ್ಸ್ ಮತ್ತು ಬಸಿಜ್ ಪಡೆಗಳು ಕಾರ್ಯಾಚರಣೆ ನಡೆಸಿವೆ ಎನ್ನಲಾಗಿದೆ. ಘಟನೆಗಳು ಹೊರಬರದಂತೆ ಸರ್ಕಾರ ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿದೆ.
ಜರ್ಮನ್ ಚಾನ್ಸೆಲರ್ ಫ್ರೆಡ್ರಿಕ್ ಮೆರ್ಜ್ “ಇರಾನ್ ಸರ್ಕಾರದ ಆಟ ಮುಗಿದಿದೆ” ಎಂದು ಹೇಳಿದ್ದು, ಅಂತರರಾಷ್ಟ್ರೀಯ ಒತ್ತಡ ಹೆಚ್ಚಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸದ್ಯಕ್ಕೆ ಮಿಲಿಟರಿ ಕ್ರಮ ತಡೆದಿದ್ದರೂ, ಇರಾನ್ ಜೊತೆ ವ್ಯಾಪಾರ ಮಾಡುವ ದೇಶಗಳ ಮೇಲೆ 25% ಹೆಚ್ಚುವರಿ ಸುಂಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ಭಾರತದ ಚಬಹಾರ್ ಬಂದರು ಯೋಜನೆಗೆ ಈ ಸುಂಕ ಅನ್ವಯಿಸುವುದಿಲ್ಲ ಎಂದು ಭಾರತೀಯ ರಫ್ತು ಸಂಸ್ಥೆಗಳು ಸ್ಪಷ್ಟಪಡಿಸಿವೆ. ಒಟ್ಟಾರೆ, ಇರಾನ್ ಆಂತರಿಕ ಅಶಾಂತಿ ಮತ್ತು ಬಾಹ್ಯ ಒತ್ತಡಗಳ ನಡುವೆ ಗಂಭೀರ ಸಂಕಷ್ಟ ಎದುರಿಸುತ್ತಿದೆ.






