---Advertisement---

ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು ಶಿಕ್ಷೆ..!

On: January 14, 2026 5:49 AM
Follow Us:
---Advertisement---

ಬೆಂಗಳೂರು ಗ್ರಾಮಾಂತರ ಸಿವಿಲ್ ನ್ಯಾಯಾಲಯವು ಕನ್ನಡ ಸುದ್ದಿ ವಾಹಿನಿ ಪವರ್‌ ಟಿವಿ‌ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು ಶಿಕ್ಷೆ ವಿಧಿಸಿದೆ. ಇದು ನ್ಯಾಯಾಲಯದ ಮಧ್ಯಂತರ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಕೊಡಲಾಗಿದೆ ಎಂದು ವರದಿಯಾಗಿದೆ.

ಇದನ್ನು ಓದಿ: ಚಿಕ್ಕಬಳ್ಳಾಪುರ: ಅಣ್ಣ–ತಂಗಿಯ ಪವಿತ್ರ ಸಂಬಂಧಕ್ಕೆ ಧಕ್ಕೆ: ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದ 21 ವರ್ಷದ ಯುವತಿ ನೇಣಿಗೆ ಶರಣು

ನ್ಯಾಯಾಲಯದ ಆದೇಶದ ಪ್ರಕಾರ, 2023 ಸೆಪ್ಟೆಂಬರ್ 8ರಂದು ರಾಕೇಶ್ ಶೆಟ್ಟಿ ಮತ್ತು ಪವರ್‌ ಟಿವಿಗೆ ಒಂದು ಮಧ್ಯಂತರ ತಡೆಜ್ಞೆ ನೀಡಲಾಗಿತ್ತು, ಅದು IPS ಅಧಿಕಾರಿ ಬಿ.ಆರ್. ರವಿಕಾಂತೇ ಗೌಡ ವಿರುದ್ಧದ ಅವಮಾನಕಾರಿ ವಿಷಯಗಳನ್ನು ಪ್ರಸಾರಮಾಡದಂತೆ ಸೂಚಿಸಿತ್ತು. ಆದೇಶಕ್ಕೂ ಮೀರಿದಂತೆ ನ್ಯಾಯಾಲಯದ ಸೂಚನೆಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸದೇ ಅವಿಧೇಯತೆ ತೋರಿದ್ದಾರೆ ಎಂದು ನ್ಯಾಯಾಲಯ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ರಾಕೇಶ್ ಶೆಟ್ಟಿಗೆ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ, ಜೈಲಿನಲ್ಲಿ ಅವರು ಅನುಭವಿಸುವ ಖರ್ಚು-ವೆಚ್ಚಗಳನ್ನು ದೂರುದಾರ IPS ಅಧಿಕಾರಿ ಬಿ.ಆರ್. ರವಿಕಾಂತೇ ಗೌಡ ಅವರೇ ಭರಿಸಬೇಕು ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ನ್ಯಾಯಾಲಯದ ಆದೇಶ ಉಲ್ಲಂಘನೆಗೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿದ್ದು, ಇದು ನ್ಯಾಯಾಂಗ ಅವಮಾನ (Contempt of Court) ಪ್ರಕರಣಕ್ಕೆ ಸಂಬಂಧಿಸಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಇದನ್ನು ಓದಿ: ತಾಯಿ ಮತ್ತು ಪತ್ನಿ ಹತ್ಯೆ: ತಲೆ ಜಜ್ಜಿ ಮಾಂಸ ಸೇವಿಸಿದ ವ್ಯಕ್ತಿ

Join WhatsApp

Join Now

RELATED POSTS

1 thought on “ಪವರ್ ಟಿವಿ ಮುಖ್ಯಸ್ಥ ರಾಕೇಶ್ ಶೆಟ್ಟಿಗೆ 3 ತಿಂಗಳ ಜೈಲು ಶಿಕ್ಷೆ..!”

Comments are closed.