ತೆಲಂಗಾಣ ಸರ್ಕಾರದ ಹೊಸ ಪ್ರಸ್ತಾವನೆಗೆ ಚರ್ಚೆ
ಹೈದರಾಬಾದ್: ತೆಲಂಗಾಣ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ಸಂಬಂಧಿಸಿದಂತೆ ಹೊಸದೊಂದು ನಿಯಮದ ಪ್ರಸ್ತಾವನೆ ಭಾರಿ ಚರ್ಚೆಗೆ ಕಾರಣವಾಗಿದೆ. ವಯೋವೃದ್ಧ ಪೋಷಕರನ್ನು ನೋಡಿಕೊಳ್ಳದೆ ನಿರ್ಲಕ್ಷಿಸಿದ ಸರ್ಕಾರಿ ನೌಕರರ ಸಂಬಳದಲ್ಲಿ 10ರಿಂದ 15 ಶೇಕಡಾವರೆಗೆ ಕಡಿತ ಮಾಡುವುದಾಗಿ ರಾಜ್ಯ ಸರ್ಕಾರ ಯೋಚನೆ ಮಾಡುತ್ತಿದೆ.
ಇದನ್ನು ಓದಿ: ಟಾಪರ್ ಆಗಿ ಉತ್ತಮ ಸಾಧನೆ ಮಾಡಿದ್ದು ತಪ್ಪಾಯ್ತು! ಅಸುಯೆಯಿಂದ ಅವನ ಮೇಲೆ ಬೆಂಕಿ ಹಚ್ಚಿದ ಸಹಪಾಠಿಗಳು!!
ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಅವರು ಈ ಕುರಿತು ಇತ್ತೀಚೆಗೆ ಹೇಳಿಕೆ ನೀಡಿದ್ದು, ಸಮಾಜದಲ್ಲಿ ಹಿರಿಯ ನಾಗರಿಕರ ರಕ್ಷಣೆ ಹಾಗೂ ಗೌರವವನ್ನು ಹೆಚ್ಚಿಸುವ ಉದ್ದೇಶದಿಂದ ಈ ಕ್ರಮವನ್ನು ತರಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಈ ಪ್ರಸ್ತಾವನೆಯ ಪ್ರಮುಖ ಅಂಶಗಳು
ಈ ನಿಯಮವು ತೆಲಂಗಾಣ ರಾಜ್ಯದ ಸರ್ಕಾರಿ ನೌಕರರಿಗೆ ಮಾತ್ರ ಅನ್ವಯವಾಗಲಿದೆ ಪೋಷಕರನ್ನು ನಿರ್ಲಕ್ಷಿಸಿದ ಬಗ್ಗೆ ದೂರು ಬಂದಲ್ಲಿ ಪರಿಶೀಲನೆ ನಡೆಸಲಾಗುತ್ತದೆ ತಪ್ಪು ಸಾಬೀತಾದಲ್ಲಿ, ನೌಕರರ ಸಂಬಳದ 10–15% ಮೊತ್ತವನ್ನು ಕಡಿತ ಮಾಡಬಹುದು ಕಡಿತಗೊಂಡ ಹಣವನ್ನು ಪೋಷಕರ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡುವ ಸಾಧ್ಯತೆ ಇದೆ
ಕಾನೂನು ಆಗಿದೆಯೇ?
ಪ್ರಸ್ತುತ ಇದು ಕೇವಲ ಪ್ರಸ್ತಾವನೆ ಮಾತ್ರ. ಇದನ್ನು ಕಾನೂನಾಗಿ ಜಾರಿಗೆ ತರಲು ರಾಜ್ಯ ವಿಧಾನಸಭೆಯಲ್ಲಿ ಚರ್ಚೆ ಮತ್ತು ಅನುಮೋದನೆ ಅಗತ್ಯವಿದೆ. ಸರ್ಕಾರವು ಈ ಬಗ್ಗೆ ಸಮಿತಿಯನ್ನು ರಚಿಸಿ ಸ್ಪಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಸಾಧ್ಯತೆ ಇದೆ.
ಇದನ್ನು ಓದಿ: ಮಗಳಿಗೆ ಮದುವೆ ನಿಶ್ಚಯವಾಗಿದೇ ಸ್ವಾಮಿ ಸುಟ್ಟ ಬಸ್ ಅವಶೇಷಗಳಲ್ಲಿ ಮಗಳನ್ನೇ ಹುಡುಕಿದ ತಂದೆ
ತೆಲಂಗಾಣ ಸರ್ಕಾರದ ಈ ನಿಯಮದ ಉದ್ದೇಶ
ರಾಜ್ಯದಲ್ಲಿ ಹಲವಾರು ವೃದ್ಧ ಪೋಷಕರು ತಮ್ಮ ಮಕ್ಕಳಿಂದ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದ್ದು,
ಸರ್ಕಾರಿ ಉದ್ಯೋಗದಲ್ಲಿರುವವರು ಸಾಮಾಜಿಕ ಹೊಣೆಗಾರಿಕೆಗೆ ಮಾದರಿಯಾಗಬೇಕು ಎಂಬ ಉದ್ದೇಶದಿಂದ ಈ ಕ್ರಮವನ್ನು ಪರಿಗಣಿಸಲಾಗುತ್ತಿದೆ ಎಂದು ಹೇಳಲಾಗಿದೆ.







2 thoughts on “ಸರಕಾರಿ ನೌಕರರು ತಮ್ಮ ಹಿರಿಯ ಪೋಷಕರನ್ನು ನಿರ್ಲಕ್ಷಿಸಿದರೆ ಸಂಬಳಕ್ಕೆ ಬೀಳಲಿದೆ ಕತ್ತರಿ?”
Comments are closed.