ಬಿಗ್ ಬಾಸ್ (Bigg Boss) ಮನೆಯಲ್ಲಿರುವ ಗಿಲ್ಲಿ ನಟರು ಇತ್ತೀಚೆಗೆ ಗಮನಾರ್ಹ ಸಾಧನೆ ಮಾಡಿದ್ದಾರೆ. ಅವರು ಬಿಗ್ ಬಾಸ್ ಮನೆಗೆ ಪ್ರವೇಶಿಸುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಕೇವಲ 1.09 ಲಕ್ಷ ಹಿಂಬಾಲಕರು ಮಾತ್ರ ಇದ್ದರು. ಇದೀಗ ಅವರ ಹಿಂಬಾಲಕರ ಸಂಖ್ಯೆ 1 ಮಿಲಿಯನ್ ಗಡಿ ದಾಟಿದ್ದು, ಪ್ರತಿಕ್ಷಣವೂ ಇನ್ನಷ್ಟು ಹೆಚ್ಚುತ್ತಲೇ ಇದೆ. ಬಿಗ್ ಬಾಸ್ ಶೋ ಮುಕ್ತಾಯವಾಗುವ ಹೊತ್ತಿಗೆ ಈ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಇದನ್ನು ಓದಿ: ಜ್ವರ ವಾಂತಿ ಬಂದಾಗ ಮಾತ್ರ ಗಿಲ್ಲಿ ಗೆ ಬಳಸಿಕೊಳ್ಳುತ್ತಾರೆ ಕಾವ್ಯ ವಿರುದ್ಧ ಅಸಮಾಧಾನ
ಕಳೆದ ಕೆಲವು ದಿನಗಳಿಂದ ಗಿಲ್ಲಿ ನಟರ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ಸಂಖ್ಯೆಯಲ್ಲಿ ಭಾರೀ ಏರಿಕೆ ಕಂಡುಬರುತ್ತಿದೆ. ಇದಕ್ಕೆ ಪ್ರಮುಖ ಕಾರಣವಾಗಿ ಅವರದೇ ಒಂದು ಹೇಳಿಕೆ ಕಾರಣವಾಗಿದೆ. ಕಾವ್ಯಾ ಜೊತೆ ಮಾತನಾಡುವ ವೇಳೆ, ‘ಒಂದು ಮಿಲಿಯನ್ ಫಾಲೋವರ್ಸ್ ಆದ್ರೆ…’ ಎಂದು ಹೇಳಿಕೊಂಡಿದ್ದರು. ಇದನ್ನು ಸವಾಲಾಗಿ ಸ್ವೀಕರಿಸಿದ ಅಭಿಮಾನಿಗಳು, ಗಿಲ್ಲಿ ಖಾತೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಫಾಲೋ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ. ಪರಿಚಿತರು ಹಾಗೂ ಸ್ನೇಹಿತರ ಖಾತೆಗಳಿಂದಲೂ ಫಾಲೋ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಕೇವಲ 24 ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ಹೊಸ ಹಿಂಬಾಲಕರು ಸೇರ್ಪಡೆಗೊಂಡಿದ್ದಾರೆ.
ಇದಕ್ಕೂ ಮೊದಲು ರಜತ್ ಬಿಗ್ ಬಾಸ್ ಮನೆಯಲ್ಲಿ ಇದ್ದಾಗಲೂ ಗಿಲ್ಲಿ ನಟ ಇದೇ ವಿಚಾರವನ್ನು ಪ್ರಸ್ತಾಪಿಸಿದ್ದರು. ‘ನಾನು ಹೊರ ಹೋಗುವಾಗ ನನ್ನ ಇನ್‌ಸ್ಟಾಗ್ರಾಮ್ ಖಾತೆಗೆ ಒಂದು ಮಿಲಿಯನ್ ಫಾಲೋವರ್ಸ್ ಇರಬೇಕು’ ಎಂದು ಅವರು ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ರಜತ್, ‘ಹುಡುಗರ ಅಕೌಂಟ್‌ಗೆ ಯಾರು ಫಾಲೋ ಕೊಡ್ತಾರೆ?’ ಎಂದು ವ್ಯಂಗ್ಯವಾಗಿ ಹೇಳಿದ್ದರು. ಆದರೆ ಗಿಲ್ಲಿ ಕಟ್ಟಾಭಿಮಾನಿಗಳು ಈ ಮಾತನ್ನು ತಪ್ಪು ಎಂದು ಸಾಬೀತುಪಡಿಸಿದ್ದಾರೆ. 1 ಮಿಲಿಯನ್ ಫಾಲೋವರ್ಸ್ ಗಡಿ ದಾಟಿದ ಖುಷಿಯಲ್ಲಿ ಗಿಲ್ಲಿ ನಟರು ತಮ್ಮ ಇನ್‌ಸ್ಟಾಗ್ರಾಮ್ ಖಾತೆ ಮೂಲಕ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯ ಯಾವುದೇ ಪ್ರೋಮೋ ಬಿಡುಗಡೆಯಾದರೂ, ಅದರ ಕಾಮೆಂಟ್ ವಿಭಾಗದಲ್ಲಿ ಗಿಲ್ಲಿಯ ಹೆಸರು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಗಿಲ್ಲಿ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ ಪೋಸ್ಟ್‌ಗಳಿಗೂ ಅಭಿಮಾನಿಗಳು ‘ಗಿಲ್ಲಿ, ಗಿಲ್ಲಿ’ ಎಂದು ಪ್ರತಿಕ್ರಿಯಿಸುವ ಉದಾಹರಣೆಗಳು ಸಾಕಷ್ಟಿವೆ. ಗಿಲ್ಲಿ ನಟರು ಬಿಗ್ ಬಾಸ್ ಮನೆಯಲ್ಲಿ ಉತ್ತಮ ಆಟ ಆಡುತ್ತಿದ್ದಾರೆ ಎನ್ನುವುದು ಅಭಿಮಾನಿಗಳ ಅಭಿಪ್ರಾಯ. ಈ ಬಾರಿ ಕಪ್ ಅವರೇ ಗೆಲ್ಲಬೇಕು ಎಂಬುದು ಬಹುಪಾಲು ಅಭಿಮಾನಿಗಳ ಆಶಯ. ಅಶ್ವಿನಿ ಗೌಡ ಮತ್ತು ಧನುಶ್ ಗಿಲ್ಲಿಗೆ ಪ್ರಮುಖ ಸ್ಪರ್ಧೆ ನೀಡುತ್ತಿದ್ದಾರೆ.







1 thought on “ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟರ ಅಪರೂಪದ ಸಾಧನೆ; 1 ಮಿಲಿಯನ್ ಇನ್‌ಸ್ಟಾಗ್ರಾಮ್ ಫಾಲೋವರ್ಸ್ ದಾಟಿದ ಖಾತೆ”